ರಾಂಚಿ(ನ.02): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ, ಮಾಜಿ ನಾಯಕ ಎಂ.ಎಸ್.ಧೋನಿಯನ್ನು ಆಯ್ಕೆ ಸಮಿತಿ ಕಡೆಗಣಿಸುತ್ತಿದೆ ಅನ್ನೋ ಆರೋಪಗಳು ಬಲವಾಗಿ ಕೇಳಿಬರುತ್ತಿದೆ. ವೆಸ್ಟ್ ಇಂಡೀಸ್ ಪ್ರವಾಸದಿಂದ ಧೋನಿ ಹಿಂದೆ ಸರಿದಿದ್ದರು. ಇನ್ನು ಸೌತ್ ಆಫ್ರಿಕಾ ಹಾಗೂ ಬಾಂಗ್ಲಾದೇಶ ಪ್ರವಾಸಕ್ಕೆ ಧೋನಿಗೆ ಅವಕಾಶ ನೀಡಿಲ್ಲ. ಸದ್ಯ ಧೋನಿ ವಿಶ್ರಾಂತಿಯಲ್ಲಿದ್ದು, ರಾಂಚಿ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಧೋನಿ ನಿವೃತ್ತಿಯ ಬಗ್ಗೆ ಮತ್ತೆ ವದಂತಿ..!

ಸಾಮಾಜಿಕ ಜಾಲತಾಣದಲ್ಲಿ ಧೋನಿ ಹೆಚ್ಚು ಸಕ್ರಿಯರಾಗಿಲ್ಲ. ಕೆಲ ವರ್ಷಗಳ ಹಿಂದೆ ಟ್ವೀಟ್ ಮಾಡುತ್ತಿದ್ದ ಧೋನಿ, ಇದೀಗ ಟೀಂ ಇಂಡಿಯಾದಿಂದ ಮಾತ್ರವಲ್ಲ ಸೋಶಿಯಲ್ ಮಿಡಿಯಾದಿಂದಲೂ ದೂರ ಉಳಿದಿದ್ದಾರೆ. ಧೋನಿ ಕೆಲವೇ ಕೆಲವು ಟ್ವೀಟ್ ಮಾಡಿದ್ದಾರೆ. ಆದರೆ ಮಾಡಿದ ಎಲ್ಲಾ ಟ್ವೀಟ್‌ಗಳು ಅತ್ಯುತ್ತಮವಾಗಿದೆ. ಇದರಲ್ಲಿ ಆಯ್ದ 5 ಅದ್ಭುತ ಟ್ವೀಟ್‌ಗಳು ಇಲ್ಲಿವೆ.