ಇಂಗ್ಲೆಂಡ್ ಹಾಗೂ ಭಾರತ ಎರಡು ತಂಡದಲ್ಲೂ  ಪ್ರಮುಖ ಬದಲಾವಣೆ ಮಾಡಲಾಗಿದೆ. ಓಲಿ ರಾಬಿನ್‌ಸನ್ ಬದಲಿಗೆ ಮಾರ್ಕ್‌ ವುಡ್ ಇಂಗ್ಲೆಂಡ್ ತಂಡ ಕೂಡಿಕೊಂಡಿದ್ದಾರೆ. ಇನ್ನೊಂದೆಡೆ ಭಾರತ ತಂಡಕ್ಕೆ ಕರ್ನಾಟಕದ ದೇವದತ್ ಪಡಿಕ್ಕಲ್ ಪಾದಾರ್ಪಣೆ ಮಾಡಿದ್ದಾರೆ ಇನ್ನು ಆಕಾಶ್ ದೀಪ್ ಬದಲಿಗೆ ಜಸ್ಪ್ರೀತ್ ಬುಮ್ರಾ ತಂಡ ಕೂಡಿಕೊಂಡಿದ್ದಾರೆ.

ಧರ್ಮಶಾಲಾ(ಮಾ.07): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಈಗಾಗಲೇ 3-1 ಅಂತರದಲ್ಲಿ ಮುನ್ನಡೆಯಲ್ಲಿದೆ. 

ಇಂಗ್ಲೆಂಡ್ ಹಾಗೂ ಭಾರತ ಎರಡು ತಂಡದಲ್ಲೂ ಪ್ರಮುಖ ಬದಲಾವಣೆ ಮಾಡಲಾಗಿದೆ. ಓಲಿ ರಾಬಿನ್‌ಸನ್ ಬದಲಿಗೆ ಮಾರ್ಕ್‌ ವುಡ್ ಇಂಗ್ಲೆಂಡ್ ತಂಡ ಕೂಡಿಕೊಂಡಿದ್ದಾರೆ. ಇನ್ನೊಂದೆಡೆ ಭಾರತ ತಂಡಕ್ಕೆ ಕರ್ನಾಟಕದ ದೇವದತ್ ಪಡಿಕ್ಕಲ್ ಪಾದಾರ್ಪಣೆ ಮಾಡಿದ್ದಾರೆ ಇನ್ನು ಆಕಾಶ್ ದೀಪ್ ಬದಲಿಗೆ ಜಸ್ಪ್ರೀತ್ ಬುಮ್ರಾ ತಂಡ ಕೂಡಿಕೊಂಡಿದ್ದಾರೆ.

Ranji Trophy: ರಣಜಿ ಟ್ರೋಫಿ ಫೈನಲ್‌ಗೆ ವಿದರ್ಭ ಲಗ್ಗೆ. ಪ್ರಶಸ್ತಿಗಾಗಿ ಮುಂಬೈ ಜತೆ ಕಾದಾಟ

ವುಡ್‌ ವಾಪಸ್‌: ಸತತ ಸೋಲಿನಿಂದ ಕುಗ್ಗಿ ಹೋಗಿರುವ ಇಂಗ್ಲೆಂಡ್‌ ಈ ಪಂದ್ಯದಲ್ಲಾದರೂ ಗೆದ್ದು ಸರಣಿಗೆ ವಿದಾಯ ಹೇಳುವ ಕಾತರದಲ್ಲಿದೆ. ಪಂದ್ಯಕ್ಕೆ ಈಗಾಗಲೇ ಆಡುವ ಬಳಗವನ್ನು ಇಂಗ್ಲೆಂಡ್‌ ಘೋಷಿಸಿದ್ದು, ಒಂದು ಬದಲಾವಣೆ ಮಾಡಲಾಗಿದೆ. ಓಲಿ ರಾಬಿನ್ಸನ್‌ ಬದಲು ಮಾರ್ಕ್‌ ವುಡ್‌ ತಂಡಕ್ಕೆ ಮರಳಿದ್ದಾರೆ. ಟಾಮ್‌ ಹಾರ್ಟ್ಲಿ ಹಾಗೂ ಶೋಯೆಬ್‌ ಬಶೀರ್‌ ತಂಡದಲ್ಲಿರುವ ಇಬ್ಬರು ತಜ್ಞ ಸ್ಪಿನ್ನರ್‌ಗಳು. ಸರಣಿಯ 8 ಇನ್ನಿಂಗ್ಸ್‌ಗಳಲ್ಲಿ 170 ರನ್‌ ಗಳಿಸಿರುವ ಜಾನಿ ಬೇರ್‌ಸ್ಟೋವ್‌ 100ನೇ ಪಂದ್ಯದಲ್ಲಾದರೂ ಅಬ್ಬರಿಸುವ ಕಾತರದಲ್ಲಿದ್ದಾರೆ.

ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ ಪಡಿಕ್ಕಲ್: ಕನ್ನಡಿಗ ದೇವದತ್ ಪಡಿಕ್ಕಲ್ ಭಾರತ ಪರ 314ನೇ ಆಟಗಾರನಾಗಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. 100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ರವವಿಚಂದ್ರನ್ ಅಶ್ವಿನ್, ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್‌ಗೆ ಕ್ಯಾಪ್ ನೀಡುವ ಮೂಲಕ ಟೆಸ್ಟ್ ತಂಡಕ್ಕೆ ಸ್ವಾಗತಿಸಿದರು. ಇಂಗ್ಲೆಂಡ್ ಎದುರಿನ ಟೆಸ್ಟ್‌ ಸರಣಿಯಲ್ಲಿ ಭಾರತ ಪರ ಐವರು ಆಟಗಾರರು ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಂತಾಗಿದೆ.

Scroll to load tweet…

ಇಂದಿನಿಂದ ಭಾರತ vs ಇಂಗ್ಲೆಂಡ್‌ ಫೈನಲ್‌ ಟೆಸ್ಟ್‌

100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಅಶ್ವಿನ್: ಭಾರತದ ಸ್ಪಿನ್ ಲೆಜೆಂಡ್ ರವಿಚಂದ್ರನ್ ಅಶ್ವಿನ್ ಐತಿಹಾಸಿಕ 100ನೇ ಟೆಸ್ಟ್ ಪಂದ್ಯವನ್ನಾಡುತ್ತಿದ್ದಾರೆ. ಈ ಮೂಲಕ 100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಭಾರತದ 14ನೇ ಆಟಗಾರ ಎನಿಸಿಕೊಂಡಿದ್ದಾರೆ.

Scroll to load tweet…

ತಂಡಗಳು

ಭಾರತ: ರೋಹಿತ್‌ ಶರ್ಮಾ(ನಾಯಕ), ಯಶಸ್ವಿ ಜೈಸ್ವಾಲ್‌, ಶುಭ್‌ಮನ್ ಗಿಲ್‌, ದೇವದತ್‌ ಪಡಿಕ್ಕಲ್, ಸರ್ಫರಾಜ್‌ ಖಾನ್, ರವೀಂದ್ರ ಜಡೇಜಾ, ಧ್ರುವ್‌ ಜುರೆಲ್, ರವಿಚಂದ್ರನ್ ಅಶ್ವಿನ್‌, ಕುಲ್ದೀಪ್ ಕುಲ್ದೀಪ್‌, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್‌

ಇಂಗ್ಲೆಂಡ್‌(ಆಡುವ 11): ಕ್ರಾವ್ಲಿ, ಡಕೆಟ್‌, ಓಲಿ ಪೋಪ್‌, ಜೋ ರೂಟ್‌, ಬೇರ್‌ಸ್ಟೋವ್, ಸ್ಟೋಕ್ಸ್‌(ನಾಯಕ), ಫೋಕ್ಸ್‌, ಹಾರ್ಟ್ಲಿ, ವುಡ್‌, ಆ್ಯಂಡರ್‌ಸನ್‌, ಬಶೀರ್‌.

ಪಂದ್ಯ: ಬೆಳಗ್ಗೆ 9.30ಕ್ಕೆ, ನೇರಪ್ರಸಾರ: ಜಿಯೋ ಸಿನಿಮಾ, ಸ್ಪೋರ್ಟ್ಸ್‌ 18