ಡಿವೋರ್ಸ್ ಬಳಿಕ ಯಜುವೇಂದ್ರ ಚಹಾಲ್ ಹಾಗೂ ಆರ್‌ಜೆ ಮಹ್ವಾಶ್ ಡೇಟಿಂಗ್ ಸುದ್ದಿ ಹರಿದಾಡುತ್ತಿದೆ. ಇಬ್ಬರು ಜೊತಯಾಗಿ ಕಾಣಿಸಿಕೊಂಡಿದ್ದಾರೆ. ಇದರ ನಡವೆ ಯಜುವೇಂದ್ರ ಚಹಾಲ್ ಹಾಗೂ ಧನಶ್ರಿ ವರ್ಮಾ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ.  ಮತ್ತೆ ಏನು ನಡೆಯುತ್ತಿದೆ? 

ಮುಂಬೈ(ಏ.19) ಕ್ರಿಕೆಟಿಗ ಯಜುವೇಂದ್ರ ಚಹಾಲ್ ಹಾಗೂ ಧನಶ್ರಿ ವರ್ಮಾ ಕಳೆದೊಂದು ವರ್ಷದಿಂದ ಬೇರೆ ಬೇರೆಯಾಗಿ ನೆಲೆಸಿ ಇತ್ತೀಚೆಗೆ ಡಿವೋರ್ಸ್ ಪಡೆದಿದ್ದಾರೆ. ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳದೇ ಸುದೀರ್ಘ ದಿನಗಳೇ ಆಗಿತ್ತು. ಆದರೆ ಡಿವೋರ್ಸ್ ಕೋರ್ಟ್ ಮೆಟ್ಟಿಲೇರಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಅದೇ ಏನೇ ಇದ್ದರೂ ಇಬ್ಬರು ಬೇರೇ ಬೇರೆಯಾಗಿದ್ದಾರೆ. ಡಿವೋರ್ಸ್ ಬೆನ್ನಲ್ಲೇ ಯಜುವೇಂದ್ರ ಚಹಾಲ್, ಆರ್‌ಜೆ ಮಹ್ವಾಶ್ ಜೊತೆ ಕಾಣಿಸಿಕೊಂಡಿದ್ದಾರೆ. ಡೇಟಿಂಗ್ ಸುದ್ದಿಗಳು ಹರಿದಾಡುತ್ತಿದೆ. ಇದರ ನಡುವೆ ಏಕಾಏಕಿ ಯುಜುವೇಂದ್ರ ಚಹಾಲ್ ಹಾಗೂ ಧನಶ್ರಿ ವರ್ಮಾ ಬಹಿರಂಗವಾಗಿ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಮತ್ತಷ್ಟು ಕುತೂಹಲ ಕೆರಳಿಸಿೆ. 

ಕಾಕತಾಳಿಯವಾಗಿ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡ ಧನಶ್ರಿ-ಚಹಾಲ್
ಡಿವೋರ್ಸ್ ಬಳಿಕ ಇದೇ ಮೊದಲ ಬಾರಿಗೆ ಯಜುವೇಂದ್ರ ಚಹಾಲ್ ಹಾಗೂ ಧನಶ್ರಿ ವರ್ಮಾ ಮುಂಬೈ ವಿಮಾನ ನಿಲ್ದಾಣದಲ್ಲಿ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಒಮ್ಮೆ ಹಿಂದೆ ತಿರುಗಿ ನೋಡಬಾರದ ಎಂದು ಧನಶ್ರಿ ವರ್ಮಾ ಅವರನ್ನು ಪ್ರಶ್ನಿಸಿದ್ದಾರೆ.ಕಾಕತಾಳೀಯವಾಗಿ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡ ವಿಚ್ಚೇದಿತ ಜೋಡಿ ಕಾಣಿಸಿಕೊಂಡಿದೆ.

ಯಜುವೇಂದ್ರ ಚಹಾಲ್‌ನಿಂದ ವಿಚ್ಚೇದನ ಪಡೆದ ಬೆನ್ನಲ್ಲೇ ಧನಶ್ರೀ ವರ್ಮಾಗೆ ಜಾಕ್‌ಪಾಟ್

ಅಚ್ಚರಿಗೊಂಡ ನೆಟ್ಟಿಗರು
ಬ್ಲಾಕ್ ಕ್ರಾಪ್ ಟಾಪ್ ಹಾಗೂ ಲೋ ವೈಸ್ಟ್ ಜೀನ್ಸ್ ಧರಿಸಿ ಮುಂಬೈ ವಿಮಾನ ನಿಲ್ದಾಣದಲ್ಲಿ ಧನಶ್ರೀ ವರ್ಮಾ ಕಾಣಿಸಿಕೊಂಡಿದ್ದಾರೆ. ನಗು ಮುಖದೊಂದಿಗೆ ವಿಮಾನ ನಿಲ್ದಾಣದಿಂದ ಬೇ ಏರಿಯಾದಿಂದ ಹೊರಬಂದ ಧನಶ್ರೀ ವರ್ಮಾ ವಿಡಿಯೋ ಫೋಟೋ ಕ್ಲಿಕ್ಕಿಸಲು ಪಾಪರಾಜಿಗಳು ನಿಂತಿದ್ದರು. ಧನಶ್ರೀ ವರ್ಮಾ ನಡೆದುಕೊಂಡು ಬರುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿ ಅಳವಡಿಸಿರುವ ದೊಡ್ಡ ಟಿವಿ ಸ್ಕ್ರೀನ್ ಮೇಲೆ ಐಪಿಎಲ್ ಪಂದ್ಯ ಲೈವ್ ನಡೆಯುತ್ತಿತ್ತು. ಈ ವೇಳೆ ಚಹಾಲ್ ಬೌಲಿಂಗ್ ಮಾಡುತ್ತಿರುವುದು ಹಾಗೂ ಚಹಾಲ್ ಕ್ಲೋಸ್ ಅಪ್ ವಿಡಿಯೋ ಪ್ರಸಾರವಾಗಿದೆ. ಇತ್ತ ಧನಶ್ರೀ ವರ್ಮಾ ಅದೇ ಟಿವಿ ಸ್ಕೀನ್ ಮುಂಭಾಗದಿಂದ ನಡೆದುಕೊಂಡು ಬಂದಿದ್ದಾರೆ. ಈ ವೇಳೆ ತೆಗೆದ ಹಲವು ವಿಡಿಯೋಗಲ್ಲಿ ಇವರಿಬ್ಬರು ಒಂದೇ ಫ್ರೇಮ್‌ನಲ್ಲಿದ್ದಾರೆ. ಕಾಕತಾಳೀಯವಾಗಿ ಇದು ಸಂಭವಿಸಿದೆ.

View post on Instagram

ಈ ವಿಡಿಯೋ ನೋಡಿದ ನೆಟ್ಟಿಗರು ಒಮ್ಮೆ ಹಿಂದಿರುಗಿ ನೋಡುವಂತೆ ಸೂಚಿಚಿಸಿದ್ದಾರೆ. ಈ ವಿಡಿಯೋ ಆದರೂ ನೋಡಿ ಎಂದು ಹಲವರು ಸಲಹೆ ನೀಡಿದ್ದಾರೆ. ಧನಶ್ರೀ ವರ್ಮಾ ಟಿವಿ ಸ್ಕ್ರೀನ್ ಪರದೆ ಗಮನಿಸಿಲ್ಲ. ಇದರ ಅರಿವೇ ಇಲ್ಲದೆ ಧನಶ್ರೀ ವರ್ಮಾ ನಡೆದುಕೊಂಡು ಬಂದಿದ್ದಾರೆ. ಆದರೆ ಇದೇ ವೇಳೆ ಚಹಾಲ್ ನೇರ ಪ್ರಸಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಭಾರಿ ವೈರಲ್ ಆಗಿದೆ.

ಧನಶ್ರಿ-ಚಹಾಲ್ ಡಿವೋರ್ಸ್
ಪರಿಚಯದ ಬಳಿಕ ಕೆಲ ಕಾಲ ಡೇಟಿಂಗ್‌ನಲ್ಲಿದ್ದ ಈ ಜೋಡಿ 2020ರಲ್ಲಿ ಮದುವೆಯಾಗಿದ್ದರು. ಮದುವೆಯಾದ ಕೆಲವೇ ವರ್ಷದಲ್ಲಿ ಇವರಿಬ್ಬರ ನಡುವೆ ವೈಮನಸ್ಸು ಆರಂಭಗೊಂಡಿತ್ತು. ಕಳೆದ ವರ್ಷ ಇಬ್ಬರು ಇನ್‌ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿದ್ದರು. ಈ ಮೂಲಕ ಡಿವೋರ್ಸ್ ಅನುಮಾನ ಹೆಚ್ಚಿಸಿದ್ದರು. ಕಳೆದ ವರ್ಷವೇ ಇವರಿಬ್ಬರು ಬೇರೆ ಬೇರೆಯಾಗಿದ್ದರು. ಡಿವೋರ್ಸ್ ಅರ್ಜಿ ಕೋರ್ಟ್ ಮೆಟ್ಟಿಲೇರಿದಾಗ ವಿಚ್ಚೇದನ ಮಾಹಿತಿ ಖಚಿತಗೊಂಡಿತ್ತು. 

4.75 ಕೋಟಿ ರೂ ಜೀವನಾಂಶ ಸಿಕ್ಕ ಬೆನ್ನಲ್ಲೇ ಮತ್ತಷ್ಟು ಹಾಟ್ ಫೋಟೋ ಹಂಚಿಕೊಂಡ ಧನಶ್ರಿ ವರ್ಮಾ