ಯಜುವೇಂದ್ರ ಚಹಾಲ್‌ನಿಂದ ವಿಚ್ಚೇದನ ಪಡೆದ ಬೆನ್ನಲ್ಲೇ ಧನಶ್ರೀ ವರ್ಮಾಗೆ ಜಾಕ್‌ಪಾಟ್
ಕ್ರಿಕೆಟಿಗ ಯಜುವೇಂದ್ರ ಚಹಾಲ್‌ನಿಂದ ವಿಚ್ಚೇದನ ಪಡೆದ ಧನಶ್ರೀ ವರ್ಮಾ ಬರೋಬ್ಬರಿ 4.75 ಕೋಟಿ ರೂ ಜೀವನಾಂಶ ಪಡೆದಿದ್ದಾರೆ. ಇದೀಗ ಮತ್ತೊಂದು ಜಾಕ್‌ಪಾಟ್ ಸಿಕ್ಕಿದೆ. ಧನಶ್ರೀ ವರ್ಮಾ ಬಿಗ್ ಬಾಸ್ ಶೋಗೆ ಎಂಟ್ರಿಕೊಡಲು ಸಜ್ಜಾಗಿದ್ದಾರೆ.

ಟೀಂ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚಹಾಲ್ ಹಾಗೂ ಧನಶ್ರೀ ವರ್ಮಾ ಅಧಿಕೃತಾಗಿ ವಿಚ್ಚೇದನ ಪಡೆದಿದ್ದಾರೆ. ಇಬ್ಬರೂ ಬೇರೆ ಬೇರೆಯಾಗಿದ್ದಾರೆ. ವಿಚ್ಚೇದನ ವೇಳೆ ಧನಶ್ರೀ ವರ್ಮಾ ಜೀವನಾಂಶ ರೂಪದಲ್ಲಿ ಚಹಾಲ್‌ನಿಂದ ಬರೋಬ್ಬರಿ 4.75 ಕೋಟಿ ರೂಪಾಯಿ ಪಡೆದಿದ್ದಾರೆ. ಇದೀಗ ಧನಶ್ರೀ ವರ್ಮಾಗೆ ಮತ್ತೊಂದು ಭರ್ಜರಿ ಆಫರ್ ಸಿಕ್ಕಿದೆ. ಅದು ಬಿಗ್ ಬಾಸ್ ಶೋ.
ಹಿಂದಿ ಬಿಗ್ ಬಾಸ್ ಒಟಿಟಿ ವರ್ಶನ್‌ನಲ್ಲಿ ಈ ಬಾರಿ ಧನಶ್ರೀ ವರ್ಮಾ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹಿಂದಿ ಬಿಗ್ ಬಾಸ್ ಒಟಿಟಿ ತಂಡ ಈಗಾಗಲೇ ಧನಶ್ರೀ ವರ್ಮಾರನ್ನು ಸಂಪರ್ಕಿಸಿದೆ. ಬಿಗ್ ಬಾಸ್ ಒಟಿಟಿ ಶೋ ಸ್ಪರ್ಧಿಯಾಗುವಂತೆ ಮನವಿ ಮಾಡಿದ್ದಾರೆ. ಧನಶ್ರೀ ವರ್ಮಾಗೆ ಬಿಗ್ ಬಾಸ್ ತಂಡ ದುಬಾರಿ ಮೊತ್ತ ಆಫರ್ ಮಾಡಿದೆ ಎನ್ನಲಾಗುತ್ತಿದೆ.
ಬಿಗ್ ಬಾಸ್ ಒಟಿಟಿ 4ನೇ ಆವೃತ್ತಿಗೆ ತಯಾರಿ ಆರಂಭಗೊಂಡಿದೆ. ಸೂಕ್ತವಾದ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಟಿಟಿ ತಂಡ ಸಂಪರ್ಕಿಸುತ್ತಿದೆ. ಈ ಪೈಕಿ ಧನಶ್ರೀ ವರ್ಮಾರನ್ನು ಸಂಪರ್ಕಿಸಿದೆ ಎಂದು ವರದಿಯಾಗಿದೆ. ಬಿಗ್ ಬಾಸ್ ಪ್ರಮುಖವಾಗಿ ವಿವಾದ ಹಾಗೂ ಸದಾ ಸುದ್ದಿಯಲ್ಲಿರುವ ಸೆಲೆಬ್ರೆಟಿಗಳಿಗೆ ಬಹು ಬೇಗನೆ ಮಣೆ ಹಾಕುತ್ತಿದೆ. ಈ ಬಾರಿ ಧನಶ್ರೀ ವರ್ಮಾಗೆ ಆಫರ್ ನೀಡಿದೆ.
ಬಿಗ್ ಬಾಸ್ ಒಟಿಟಿ ಆಫರ್ ಕುರಿತು ಧನಶ್ರೀ ವರ್ಮಾ ಪ್ರತಿಕ್ರಿಯೆ ರಹಸ್ಯವಾಗಿದೆ. ಮೂಲಗಳ ಪ್ರಕಾರ ಧನಶ್ರೀ ವರ್ಮಾ ಒಟಿಟಿ ಬಿಗ್ ಬಾಸ್‌ಗಿಂತ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಪಾಲ್ಗೊಳ್ಳಲು ಉತ್ಸಕ ತೋರಿದ್ದಾರೆ ಎಂದು ಹೇಳಲಾಗುತ್ತದೆ. ಆದರೆ ಈ ಕುರಿತು ಯಾವುದೇ ಅದಿಕೃತ ಮಾಹಿತಿ ಹೊರಬಂದಿಲ್ಲ.
ಧನಶ್ರೀ ವರ್ಮಾ ತಮ್ಮ ಆಲ್ಬಬ್ ಸೇರಿದಂತೆ ಹಲವು ಮ್ಯೂಸಿಕ್ ಪ್ರಾಜೆ್ಕ್ಟ್‌ಗಳಲ್ಲಿ ಬ್ಯೂಸಿಯಾಗಿದ್ದಾರೆ. ಇತ್ತೀಚೆಗೆ ಧನಶ್ರೀ ವರ್ಮಾ ಮುಂಬೈನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ವಿಚ್ಚೇದನ ಬಳಿಕ ಹೆಚ್ಚಾಗಿ ಕಾಣಿಸಿಕೊಳ್ಳದ ಧನಶ್ರೀ ವರ್ಮಾ ಬಿಗ್ ಬಾಸ್ ಶೋ ಮೂಲಕ ಗ್ರ್ಯಾಂಡ್ ಎಂಟ್ರಿಕೊಡುತ್ತಾರಾ ಅನ್ನೋದು ಕುತೂಹಲ ಕೆರಳಿಸಿದೆ.
ಧನಶ್ರೀ ವರ್ಮಾ ಜೊತೆಗೆ ವಿವಾದಿತ ಸೆಲೆಬ್ರೆಚಿ ಅಪೂರ್ವ ಮುಖಿಜಾಗೂ ಬಿಗ್ ಬಾಸ್ ಒಟಿಟಿ ಸಂಪರ್ಕಿಸಿದೆ ಎನ್ನಲಾಗುತ್ತಿದೆ. ಇಂಡಿಯಾ ಗಾಟ್ ಲ್ಯಾಟೆಂಟ್ ವಿವಾದಲ್ಲಿ ಕೇಳಿದದ ಪ್ರಮುಖ ಹೆಸರುಗಳಾದ ಸಮಯ್ ರೈನಾ, ರಣವೀರ್ ಅಲಹಾಬಾದಿಯಾ ಹಾಗೂ ಅಪೂರ್ವ ಮುಖಿಜಾ.ಈ ವಿವಾದಿತ ಅಪೂರ್ವ ಮುಖಿಜಾಳನ್ನು ಬಿಗ್ ಬಾಸ್ ಒಟಿಟಿ ತಂಡ ಸಂಪರ್ಕಿಸಿರುವುದಾಗಿ ವರದಿಯಾಗಿದೆ.