Deodhar Trophy 2023: ಮಯಾಂಕ್, ವಿದ್ವತ್ ಅಬ್ಬರಕ್ಕೆ ತಬ್ಬಿಬ್ಬಾದ ಉತ್ತರ ವಲಯ..!

ದೇವಧರ್ ಲಿಸ್ಟ್‌ 'ಎ' ಟೂರ್ನಿಯಲ್ಲಿ ದಕ್ಷಿಣ ವಲಯ ಶುಭಾರಂಭ
ದಕ್ಷಿಣ ವಲಯ ವಿಜೆಡಿ ನಿಯಮದನ್ವಯ ಉತ್ತರ ವಲಯವನ್ನು 185 ರನ್‌ಗಳಿಂದ ಬಗ್ಗುಬಡಿದಿದೆ
ಮಾರಕ ದಾಳಿ ನಡೆಸಿ ಮಿಂಚಿದ ಕನ್ನಡಿಗ ವಿದ್ವತ್ ಕಾವೇರಪ್ಪ

Deodhar Trophy 2023 Mayank Agarwal fifty helps South Zone beat North Zone kvn

ಪುದುಚೇರಿ(ಜು.25): 4 ವರ್ಷ ಬಳಿಕ ನಡೆಯುತ್ತಿರುವ ದೇವಧರ್‌ ಟ್ರೋಫಿ ಲಿಸ್ಟ್‌ ‘ಎ’(ಏಕದಿನ) ಟೂರ್ನಿಯಲ್ಲಿ ದಕ್ಷಿಣ ವಲಯ ಭರ್ಜರಿ ಆರಂಭ ಪಡೆದಿದೆ. ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ದಕ್ಷಿಣ ವಲಯ ವಿಜೆಡಿ ನಿಯಮದನ್ವಯ ಉತ್ತರ ವಲಯವನ್ನು 185 ರನ್‌ಗಳಿಂದ ಬಗ್ಗುಬಡಿಯಿತು. ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ವಲಯ ಎನ್‌.ಜಗದೀಶನ್‌(72), ರೋಹನ್‌ ಕುನ್ನುಮ್ಮಲ್‌(70) ಹಾಗೂ ನಾಯಕ ಮಯಾಂಕ್‌ ಅಗರ್‌ವಾಲ್‌(64)ರ ಅರ್ಧಶತಕಗಳ ನೆರವಿನಿಂದ 50 ಓವರಲ್ಲಿ 8 ವಿಕೆಟ್‌ಗೆ 303 ರನ್‌ ಕಲೆಹಾಕಿತು.

ದೊಡ್ಡ ಗೆಲುವು ಬೆನ್ನತ್ತಿದ ಉತ್ತರ ವಲಯ ರಾಜ್ಯದ ವೇಗಿ ವಿದ್ವತ್‌ ಕಾವೇರಪ್ಪ ಅವರ ದಾಳಿಗೆ ತತ್ತರಿಸಿತು. 19 ರನ್‌ಗೆ ತಂಡ 4 ವಿಕೆಟ್‌ ಕಳೆದುಕೊಂಡಿತು. ಮಳೆಯಿಂದಾಗಿ ಕೆಲ ಕಾಲ ಆಟ ಸ್ಥಗಿತಗೊಂಡಿತು. ಬಳಿಕ ವಿಜೆಡಿ ನಿಯಮದನ್ವಯ 28 ಓವರಲ್ಲಿ 246 ಪರಿಷ್ಕೃತ ರನ್‌ ಗುರಿ ಪಡೆದ ಉತ್ತರ ವಲಯ 23 ಓವರಲ್ಲಿ 60 ರನ್‌ಗೆ ಆಲೌಟ್‌ ಆಯಿತು. ವಿದ್ವತ್‌ 5 ವಿಕೆಟ್‌ ಕಿತ್ತರು.

ಸ್ಕೋರ್‌: ದಕ್ಷಿಣ ವಲಯ 50 ಓವರಲ್ಲಿ 303/8(ಜಗದೀಶನ್‌ 72, ರೋಹನ್‌ 70, ಮಯಾಂಕ್‌ 64, ಮಾರ್ಕಂಡೆ 2-53), ಉತ್ತರ ವಲಯ 23 ಓವರಲ್ಲಿ 60/10(ಮನ್‌ದೀಪ್‌ 18*, ವಿದ್ವತ್‌ 5-17)

ಪೂರ್ವ, ಪಶ್ಚಿಮ ವಲಯಗಳಿಗೆ ಜಯ

ಸೋಮವಾರ ನಡೆದ ಮತ್ತೆರಡು ಪಂದ್ಯಗಳಲ್ಲಿ ಪೂರ್ವ ಹಾಗೂ ಪಶ್ಚಿಮ ವಲಯಗಳು ಜಯ ಸಾಧಿಸಿದವು. ಈಶಾನ್ಯ ವಲಯದ ವಿರುದ್ಧ ಪೂರ್ವ ವಲಯ 9 ವಿಕೆಟ್‌ಗಳಿಂದ ಗೆದ್ದರೆ, ಕೇಂದ್ರ ವಲಯ ವಿರುದ್ಧ ಪಶ್ಚಿಮ ವಲಯ 6 ವಿಕೆಟ್‌ ಜಯ ಸಾಧಿಸಿತು.

2ನೇ ಟೆಸ್ಟ್‌: ಮೊದಲದಿನವೇ ಲಂಕಾ ಆಲೌಟ್‌!

ಕೊಲಂಬೊ: ಪಾಕಿಸ್ತಾನ ವಿರುದ್ಧದ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ 166 ರನ್‌ಗೆ ಆಲೌಟ್‌ ಆಗಿದೆ. ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ಪಾಕಿಸ್ತಾನ ಮೊದಲ ದಿನದಂತ್ಯಕ್ಕೆ 2 ವಿಕೆಟ್‌ಗೆ 145 ರನ್‌ ಗಳಿಸಿದ್ದು, ಇನ್ನು ಕೇವಲ 21 ರನ್‌ ಹಿನ್ನಡೆಯಲ್ಲಿದೆ. ಮೊದಲ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಆಕರ್ಷಕ ಆಟವಾಡಿದ್ದ ಧನಂಜಯ ಡಿ ಸಿಲ್ವಾ(57) ಮತ್ತೊಮ್ಮೆ ಹೋರಾಟ ಪ್ರದರ್ಶಿಸಿದರು. ಪಾಕ್‌ ಪರ ಅಬ್ರಾರ್‌ ಅಹ್ಮದ್‌ 4, ನಸೀಂ ಶಾ 3 ವಿಕೆಟ್‌ ಕಿತ್ತರು. ಬಳಿಕ ಅಬ್ದುಲ್ಲಾ ಶಫೀಕ್‌ ಔಟಾಗದೆ 71, ಶಾನ್‌ ಮಸೂದ್‌ 51 ರನ್‌ ಗಳಿಸಿ ಪಾಕಿಸ್ತಾನ ಮೇಲುಗೈ ಸಾಧಿಸಲು ನೆರವಾದರು.

ಆ್ಯಷಸ್‌ ಉಳಿಸಿಕೊಂಡ ಆಸೀಸ್‌!

ಮ್ಯಾಂಚೆಸ್ಟರ್‌: 0-2 ಹಿನ್ನಡೆಯಿಂದ ಪುಟಿದೆದ್ದು ತವರಿನಲ್ಲಿ ಆ್ಯಷಸ್‌ ಸರಣಿ ಗೆಲ್ಲುವ ಇಂಗ್ಲೆಂಡ್‌ ಕನಸು ನುಚ್ಚುನೂರಾಗಿದೆ. 4ನೇ ಟೆಸ್ಟ್‌ ಡ್ರಾನಲ್ಲಿ ಮುಕ್ತಾಯಗೊಂಡಿದ್ದು, ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ 2-1ರ ಹೊಂದಿರುವ ಆಸ್ಟ್ರೇಲಿಯಾ ಆ್ಯಷಸ್‌ ಟ್ರೋಫಿಯನ್ನು ತನ್ನಲ್ಲಿಯೇ ಉಳಿಸಿಕೊಂಡಿದೆ. 2021-22ರಲ್ಲಿ ಇಂಗ್ಲೆಂಡ್‌ ತಂಡ ಪ್ರವಾಸ ಕೈಗೊಂಡಿದ್ದಾಗ 5 ಪಂದ್ಯಗಳ ಸರಣಿಯನ್ನು ಆಸೀಸ್‌ 4-0ಯಲ್ಲಿ ಗೆದ್ದಿತ್ತು.

ಕ್ರಿಕೆಟ್ ದಂತಕಥೆ ಬ್ರಿಯನ್ ಲಾರಾ ಅಪರೂಪದ ದಾಖಲೆ ಮುರಿದ ಕಿಂಗ್ ಕೊಹ್ಲಿ..!

ಮಳೆಯಿಂದಾಗಿ 4ನೇ ದಿನ ಕೇವಲ 30 ಓವರ್‌ ಆಟ ನಡೆದಿತ್ತು. ಭಾನುವಾರ ದಿನವಿಡೀ ಮಳೆ ಸುರಿದ ಕಾರಣ ಒಂದೂ ಓವರ್‌ ಆಟ ನಡೆಸಲು ಸಾಧ್ಯವಾಗಲಿಲ್ಲ. ಮೊದಲ ಇನ್ನಿಂಗ್ಸಲ್ಲಿ ಆಸ್ಟ್ರೇಲಿಯಾವನ್ನು 317 ರನ್‌ಗೆ ಆಲೌಟ್‌ ಮಾಡಿದ್ದ ಇಂಗ್ಲೆಂಡ್‌ ಆ ಬಳಿಕ 592 ರನ್‌ ಕಲೆಹಾಕಿ 275 ರನ್‌ಗಳ ಬೃಹತ್‌ ಮುನ್ನಡೆ ಪಡೆದಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ, ಮಾರ್ನಸ್‌ ಲಬುಶೇನ್‌ರ ಶತಕದ ಹೊರತಾಗಿಯೂ 5 ವಿಕೆಟ್‌ಗೆ 214 ರನ್‌ ಗಳಿಸಿ ಇನ್ನೂ 61 ರನ್‌ ಹಿನ್ನಡೆಯಲ್ಲಿತ್ತು. 5 ಟೆಸ್ಟ್‌ ಜು.27ರಿಂದ ಆರಂಭಗೊಳ್ಳಲಿದೆ.

Latest Videos
Follow Us:
Download App:
  • android
  • ios