ದೇವಧರ್ ಟೂರ್ನಿ: ಮಯಾಂಕ್ ಸೇರಿ 3 ಕನ್ನಡಿಗರಿಗೆ ಸ್ಥಾನ
ದೇವಧರ್ ಟೂರ್ನಿಗೆ ಬಿಸಿಸಿಐ ತಂಡವನ್ನು ಪ್ರಕಟಿಸಲಾಗಿದ್ದು, ಕನ್ನಡಿಗ ಮಯಾಂಕ್ ಅಗರ್‌ವಾಲ್ ಸೇರಿದಂತೆ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಮುಂಬೈ(ಅ.25): ಅ.31ರಿಂದ ನ.4ರ ವರೆಗೆ ಪ್ರೊಫೆಸರ್ ಡಿ.ಬಿ ದೇವಧರ್ ಟ್ರೋಫಿ ಏಕದಿನ ಟೂರ್ನಿ ರಾಂಚಿಯಲ್ಲಿ ನಡೆಯಲಿದ್ದು, ಮಯಾಂಕ್ ಅಗರ್‌ವಾಲ್ ಸೇರಿದಂತೆ ಮೂವರಿಗೆ ಅವಕಾಶ ಲಭಿಸಿದೆ.
ಭಾರತ ‘ಎ’ ತಂಡದಲ್ಲಿ ಕರ್ನಾಟಕ ದೇವದತ್ ಪಡಿಕ್ಕಲ್, ‘ಬಿ’ ತಂಡಕ್ಕೆ ಕೆ.ಗೌತಮ್ ಹಾಗೂ ‘ಸಿ’ ತಂಡದಲ್ಲಿ ಮಯಾಂಕ್ ಅಗರ್‌ವಾಲ್ ಸ್ಥಾನ ಪಡೆದಿದ್ದಾರೆ. ಭಾರತ ‘ಎ’ ತಂಡವನ್ನು ಹನುಮ ವಿಹಾರಿ, ‘ಬಿ’ ತಂಡವನ್ನು ಪಾರ್ಥೀವ್ ಪಟೇಲ್ ಹಾಗೂ ‘ಸಿ’ ತಂಡವನ್ನು ಶುಭ್‌ಮನ್ ಗಿಲ್ ಮುನ್ನಡೆಸಲಿದ್ದಾರೆ.
ಹೊಸ ತಂಡ ಕೂಡಿಕೊಂಡ ಯುವಿ; ಅಬ್ಬರಿಸಲು ಸಿಕ್ಸರ್ ಕಿಂಗ್ ರೆಡಿ
ಹನುಮ ವಿಹಾರಿ ನೇತೃತ್ವದ ಭಾರತ ’ಎ’ ತಂಡದಲ್ಲಿ ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್, ವಿಜಯ್ ಹಜಾರೆ ಟ್ರೋಫಿಯಲ್ಲಿ ಮಿಂಚಿದ ವಿಷ್ಣು ವಿನೋದ್, ಅಮಾನ್’ದೀಪ್ ಖಾರೆ ಸ್ಥಾನ ಪಡೆದರೆ, ಪಾರ್ಥಿವ್ ಪಟೇಲ್ ನೇತೃತ್ವದ ಭಾರತ ’ಬಿ’ ತಂಡದಲ್ಲಿ ಕೇದಾರ್ ಜಾಧವ್, ಪ್ರಿಯಾಂಕ್ ಪಾಂಚಾಲ್, ವಿಜಯ್ ಹಜಾರೆ ಟ್ರೋಫಿಯ ದ್ವಿಶತಕ ವೀರ ಯಶಸ್ವಿ ಜೈಸ್ವಾಲ್, ತಮಿಳುನಾಡಿನ ವಿಜಯ್ ಶಂಕರ್, ಬಾಬಾ ಅಪರಾಜಿತ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಶುಭ್‌ಮನ್ ಗಿಲ್ ನೇತೃತ್ವದ ಭಾರತ ’ಸಿ’ ತಂಡದಲ್ಲಿ ದಿನೇಶ್ ಕಾರ್ತಿಕ್, ಸೂರ್ಯಕುಮಾರ್ ಯಾದವ್, ಅಕ್ಷರ್ ಪಟೇಲ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಅಂಡರ್ 19 ವಿಶ್ವಕಪ್: ಭಾರತಕ್ಕೆ ಲಂಕಾ ಮೊದಲ ಎದುರಾಳಿ
ಈ ಮೊದಲು ದೇವಧರ್ ಟ್ರೋಫಿ ಪಂದ್ಯವು ವಿಜಯ್ ಹಜಾರೆ ಟ್ರೋಫಿ ವಿಜೇತ ತಂಡದ ವಿರುದ್ಧ ರೆಸ್ಟ್ ಆಫ್ ಇಂಡಿಯಾ ತಂಡ ಕಾದಾಡುತ್ತಿತ್ತು. ಆದರೆ ಕಳೆದ ವರ್ಷದಿಂದ ಭಾರತ ’ಎ’, ’ಬಿ’ ಹಾಗೂ ’ಸಿ’ ತಂಡಗಳಾಗಿ ವಿಭಾಗಿಸಿ ಪಂದ್ಯವನ್ನಾಡಿಸಲಾಗುತ್ತದೆ.
ತಂಡಗಳು ಹೀಗಿವೆ: