ಬ್ಯಾಟ್ ಕೆಳಗಿಟ್ಟು ಸೌಟು ಹಿಡಿದ ಸ್ಮೃತಿ ಮಂಧನಾ
ಭಾರತ ಮಹಿಳಾ ಕ್ರಿಕೆಟ್ ತಂಡ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ತಮ್ಮ ಬಿಡುವಿನ ವೇಳೆಯನ್ನು ಹೇಗೆಲ್ಲಾ ಕಳೆಯುತ್ತಾರೆ ಎನ್ನುವ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಬ್ಯಾಟ್ ಹಿಡಿದರೆ ಸಿಕ್ಸರ್ ಬಾರಿಸಲು ಸೈ, ಸೌಟು ಹಿಡಿದರೆ ಅಡುಗೆ ಮಾಡಲು ರೆಡಿ ಎನ್ನುವಂತಿದೆ ಮಂಧನಾ ವರಸೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ[ನ.01]: ಟೀಂ ಇಂಡಿಯಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ ಗಾಯದ ಸಮಸ್ಯೆಯಿಂದಾಗಿ ಸದ್ಯ ಕ್ರಿಕೆಟ್’ನಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ. ಪಾದದ ನೋವಿನಿಂದಾಗಿ ಮಂಧನಾ ಇತ್ತೀಚೆಗಷ್ಟೇ ಮುಕ್ತಾಯವಾದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು.
ಬುಮ್ರಾ, ಸ್ಮೃತಿಗೆ ಒಲಿದ ವಿಸ್ಡನ್ ಕ್ರಿಕೆಟ್ ಪ್ರಶಸ್ತಿ
ಮೈದಾನದಲ್ಲಿ ಎದುರಾಳಿ ಬೌಲರ್’ಗಳ ಬೆವರಿಳಿಸುವ ಮಂಧನಾ ತಾನು ಬಿಡುವಿದ್ದಾಗ ಸೌಟು ಹಿಡಿದು ಅಡುಗೆಯನ್ನು ಮಾಡಬಲ್ಲೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣವಾದ ಇನ್’ಸ್ಟಾಗ್ರಾಂನಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿದ್ದಾರೆ. ನನ್ನ ವಿಶ್ರಾಂತಿಯ ಥೆರಫಿ, ನನ್ನ ಸಹಾಯಕ ಚೆಫ್ ಪೂರ್ಣಿಮಾ ಜತೆ ಒಳ್ಳೆಯ ಸಮಯವನ್ನ ಕಳೆದೆ ಎಂದು ಅಡಿಮಾಡುವ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಸ್ಮೃತಿ ಮಂಧನಾ ಕಳೆದ ಮೂರು ವರ್ಷಗಳಿಂದ ಭಾರತ ಮಹಿಳಾ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಿದ ಮಂಧನಾ, ಐಸಿಸಿ ವರ್ಷದ ಬ್ಯಾಟ್ಸ್’ವುಮನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.
23 ವರ್ಷದ ಮಂಧನಾ ಕಳೆದೊಂದು ವರ್ಷದಲ್ಲಿ 12 ಏಕದಿನ ಪಂದ್ಯಗಳನ್ನಾಡಿ 66.90ರ ಸರಾಸರಿಯಲ್ಲಿ 669 ರನ್ ಬಾರಿಸಿದ್ದರು. ಇನ್ನು 25 ಪಂದ್ಯಗಳನ್ನಾಡಿ 622 ರನ್ ಬಾರಿಸುವುದರ ಜತೆಗೆ ಐಸಿಸಿ ಏಕದಿನ ಹಾಗೂ ಟಿ20 ವರ್ಷದ ಆಟಗಾರ್ತಿ ಗೌರವಕ್ಕೂ ಭಾಜನರಾಗಿದ್ದರು. ಇತ್ತೀಚೆಗಷ್ಟೇ ಮಂಧನಾ ವಿಸ್ಡನ್ ಮಹಿಳಾ ಆಟಗಾರ್ತಿ ಎನ್ನುವ ಗೌರವಕ್ಕೂ ಪಾತ್ರರಾಗಿದ್ದಾರೆ.