ಕೊಹ್ಲಿ ಸಂದರ್ಶನವೊಂದರಲ್ಲಿ ಮಾತನಾಡುತ್ತಿರುವ ದೃಶ್ಯವನ್ನು ಕಿಡಿಗೇಡಿಗಳು ಎಡಿಟ್ ಮಾಡಿದ್ದಾರೆ. ಎಐ ತಂತ್ರಜ್ಞಾನದ ಮೂಲಕ ಕೊಹ್ಲಿಯ ಶಬ್ಧವನ್ನು ಬಳಕೆ ಮಾಡಿ ಆ್ಯಪ್‌ನ ಪ್ರಚಾರ ಮಾಡುತ್ತಿರುವಂತೆ ವಿಡಿಯೋ ಹರಿಬಿಟ್ಟಿದ್ದಾರೆ
ನವದೆಹಲಿ(ಫೆ.21): ಹಲವು ತಾರಾ ನಟ-ನಟಿಯರು, ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಫೇಕ್ ಬಳಿಕ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಗೂ ಡೀಪ್ ಫೇಕ್ ಬಿಸಿ ತಟ್ಟಿದೆ. ಕೊಹ್ಲಿ ಅವರು ಬೆಟ್ಟಿಂಗ್ ಆ್ಯಪ್ ಬಗ್ಗೆ ಪ್ರಚಾರ ಮಾಡುತ್ತಿರುವಂತೆ ಕಾಣುವ ಎಡಿಟೆಡ್ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಕೊಹ್ಲಿ ಸಂದರ್ಶನವೊಂದರಲ್ಲಿ ಮಾತನಾಡುತ್ತಿರುವ ದೃಶ್ಯವನ್ನು ಕಿಡಿಗೇಡಿಗಳು ಎಡಿಟ್ ಮಾಡಿದ್ದಾರೆ. ಎಐ ತಂತ್ರಜ್ಞಾನದ ಮೂಲಕ ಕೊಹ್ಲಿಯ ಶಬ್ಧವನ್ನು ಬಳಕೆ ಮಾಡಿ ಆ್ಯಪ್‌ನ ಪ್ರಚಾರ ಮಾಡುತ್ತಿರುವಂತೆ ವಿಡಿಯೋ ಹರಿಬಿಟ್ಟಿದ್ದಾರೆ. ಕಡಿಮೆ ಹಣ ಹೂಡಿಕೆ ಮಾಡಿ ಲಕ್ಷಾಂತರ ರೂಪಾಯಿ ಗಳಿಸುವ ತಂತ್ರಗಳನ್ನು ವಿರಾಟ್ ಕೊಹ್ಲಿ ಹೇಳುವ ರೀತಿ ವಿಡಿಯೋದಲ್ಲಿ ತೋರಿಸಲಾಗಿದೆ. ಅಲ್ಲದೆ ಸುದ್ದಿ ಮಾಧ್ಯಮ ನಿರೂಪಕಿಯೊಬ್ಬರ ಶಬ್ಧವನ್ನೂ ಎಡಿಟ್ ಮಾಡಿದ್ದಾರೆ.
Ranchi Test: ಭಾರತ ತಂಡ ಪ್ರಕಟ, ಇಬ್ಬರು ಸ್ಟಾರ್ ಕ್ರಿಕೆಟಿಗರು ಔಟ್..!
ಈ ಮೊದಲು ಸಚಿನ್ ತೆಂಡುಲ್ಕರ್ ಅವರು ಕೂಡಾ ಬೆಟ್ಟಿಂಗ್ ಆ್ಯಪ್ ಬಗ್ಗೆ ಪ್ರಚಾರ ಮಾಡುವ ರೀತಿ ವಿಡಿಯೋ ಹರಿಬಿಡಲಾಗಿತ್ತು. ಬಳಿಕ ತಂತ್ರಜ್ಞಾನದ ದುರ್ಬಳಕೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದ ಸಚಿನ್, ಡೀಪ್ ಫೇಕ್ ಹಾಗೂ ತಪ್ಪು ಮಾಹಿತಿ ಹರಡುವಿಕೆಯನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದ್ದರು.
ಎರಡನೇ ಮಗುವಿಗೆ ತಂದೆಯಾದ ಕೊಹ್ಲಿ
ನವದೆಹಲಿ: ಭಾರತದ ತಾರಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಪತ್ನಿ, ಖ್ಯಾತ ಬಾಲಿವುಡ್ ನಟಿ ಅನುಷ್ಕಾ ಶರ್ಮಾ 2ನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ವಿರಾಟ್ ಕೊಹ್ಲಿ ಮಂಗಳವಾರ ಸಾಮಾಜಿಕ ತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದು, ಫೆ.15ರಂದು ಅನುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ಅಕಾಯ್ ಎಂದು ನಾಮಕರಣ ಮಾಡಿದ್ದಾಗಿ ತಿಳಿಸಿದ್ದಾರೆ. 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಕೊಹ್ಲಿ-ಅನುಷ್ಕಾ ದಂಪತಿಗೆ ಈಗಾಗಲೇ ವಾಮಿಕಾ ಹೆಸರಿನ ಹೆಣ್ಣು ಮಗುವಿದೆ.
IPL 2024 ಆರಂಭ ಯಾವಾಗ..? ಇಲ್ಲಿದೆ ನೋಡಿ ಐಪಿಎಲ್ ಚೇರ್‌ಮನ್ ಕೊಟ್ಟ ಅಧಿಕೃತ ಅಪ್‌ಡೇಟ್
ಸದ್ಯ ಕೊಹ್ಲಿ-ಅನುಷ್ಕಾ ಲಂಡನ್‌ನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಕೊಹ್ಲಿ ವೈಯಕ್ತಿಕ ಕಾರಣ ನೀಡಿ ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದರು. ಅನುಷ್ಕಾ ಗರ್ಭಿಣಿಯಾಗಿರುವ ಕಾರಣ ಕೊಹ್ಲಿ ಸರಣಿಯಲ್ಲಿ ಆಡುತ್ತಿಲ್ಲ ಎಂದು ವರದಿಯಾಗಿತ್ತು.
ವಿಮಾನದಲ್ಲಿ ಬಾಟಲಿ ಜತೆ ಮಯಾಂಕ್ ಸೆಲ್ಫಿ!
ಹುಬ್ಬಳ್ಳಿ: ಇತ್ತೀಚೆಗಷ್ಟೇ ವಿಮಾನದಲ್ಲಿ ದ್ರವ ಪದಾರ್ಥ ಕುಡಿದು ಅಸ್ವಸ್ಥಗೊಂಡಿದ್ದ ಕರ್ನಾಟಕ ಕ್ರಿಕೆಟಿಗ ಮಯಾಂಕ್ ಅಗರ್‌ವಾಲ್ ಈ ಬಾರಿ ವಿಮಾನ ಪ್ರಯಾಣಕ್ಕೆ ಸ್ವಂತ ನೀರಿನ ಬಾಟಲಿ ಕೊಂಡೊಯ್ದಿದ್ದಾರೆ. ಜೊತೆಗೆ ಬಾಟಲಿ ಜೊತೆ ಸೆಲ್ಫಿಯನ್ನೂ ತೆಗೆದು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದು, ಮತ್ತೊಮ್ಮೆ ಕಷ್ಟ ಆಗುವುದು ಬೇಡ ಎಂದು ಬರೆದುಕೊಂಡಿದ್ದಾರೆ. ತ್ರಿಪುರಾ ವಿರುದ್ಧ ಪಂದ್ಯದ ಬಳಿಕ ಸೂರತ್‌ಗೆ ತೆರಳುತ್ತಿದ್ದಾಗ ವಿಮಾನದಲ್ಲಿ ದ್ರವ ಪದಾರ್ಧ ಸೇವಿಸಿದ್ದರಿಂದ ಮಯಾಂಕ್ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದರು.
