ಗಂಗೂಲಿ ಟಾರ್ಗೆಟ್ ಮಾಡಿದ್ದೆ, ಭಯಾನಕ ಗುಟ್ಟು ರಟ್ಟು ಮಾಡಿದ ಅಖ್ತರ್!
ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಖ್ತರ್ ಭಯಾನಕ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. ಟೀಂ ಇಂಡಿಯಾ ಬ್ಯಾಟ್ಸ್‌ಮನ್ ವಿಕೆಟ್‌ಗಿಂತ ಅವರನ್ನು ಗಾಯಗೊಳಿಸುವುದೇ ನಮ್ಮ ಗುರಿಯಾಗಿತ್ತು ಎಂದು ಅಖ್ತರ್ ಹೇಳಿದ್ದಾರೆ. ಇದರಂತೆ ಗಂಗೂಲಿಗೆ ಮಾರಕ ದಾಳಿ ಮೂಲಕ ಪಕ್ಕೆಲುಬು ಮುರಿದಿದ್ದರು.
ನವದೆಹಲಿ(ಆ.19): ಪಾಕಿಸ್ತಾನ ಮಾಜಿ ಶೋಯೆಬ್ ಅಖ್ತರ್ ಕ್ರಿಕೆಟ್ ಜಗತ್ತು ಕಂಡ ಅತ್ಯಂತ ವೇಗದ ಬೌಲರ್. ಅಖ್ತರ್ ದಾಳಿಗೆ ಕ್ರೀಸ್‌ನಲ್ಲಿ ನಿಲ್ಲಲು ಹಲವು ಬ್ಯಾಟ್ಸ್‌ಮನ್ ಭಯಪಡುತ್ತಿದ್ದರು. ಕಾರಣ ಅಖ್ತರ್ ಪ್ರತಿ ಎಸೆತ ಮಾರಕವಾಗಿತ್ತು. ಇದೇ ಮಾರಕ ಅಸ್ತ್ರವನ್ನು ಬಳಸಿಕೊಂಡ ಅಖ್ತರ್ ಕೆಲವು ಬಾರಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಗಾಯಗೊಳಿಸಿದ್ದಾರೆ. ಅದರಲ್ಲೂ ಭಾರತ ವಿರುದ್ದದ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳ ವಿಕೆಟ್ ಕಬಳಿಸುವುದು ಸುಲಭದ ಮಾತಾಗಿರಲಿಲ್ಲ. ಹೀಗಾಗಿ ಅವರ ವಿಕೆಟ್ ಬದಲು ಗಾಯಗೊಳಿಸಲು ನಿರ್ಧರಿಸಿ ದಾಳಿ ಮಾಡಲಾಗುತ್ತಿತ್ತು. ಇದರಂತೆ ಸೌರವ್ ಗಂಗೂಲಿಯನ್ನು ಟಾರ್ಗೆಟ್ ಮಾಡಿ ದಾಳಿ ಮಾಡಿದ್ದೇವು ಎಂದು ಶೋಯೆಬ್ ಅಖ್ತರ್ ಬಹಿರಂಗಪಡಿಸಿದ್ದಾರೆ.
1999ರಲ್ಲಿ ಪಾಕಿಸ್ತಾನ ಭಾರತ ಪ್ರವಾಸ ಕೈಗೊಂಡಿತ್ತು. ಮೊಹಾಲಿಯಲ್ಲಿನ ಏಕದಿನ ಪಂದ್ಯಕ್ಕೂ ಮೊದಲು ಪಾಕಿಸ್ತಾನ ತಂಡ ಮೀಟಿಂಗ್‌ನಲ್ಲಿ ಅಖ್ತರ್ ಪ್ರಸ್ತಾಪವೊಂದನ್ನು ತಂಡದ ಮುಂದಿಟ್ಟಿದ್ದರು. ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳನ್ನು ವಿಕೆಟ್ ಟು ವಿಕೆಟ್ ಬೌಲಿಂಗ್ ಮಾಡಿ ಕಬಳಿಸುವುದು ಸುಲಭವಲ್ಲ. ಹೀಗಾಗಿ ಸೌರವ್ ಗಂಗೂಲಿಯನ್ನು ಟಾರ್ಗೆಟ್ ಮಾಡಿ ಇಂಜುರಿ ಮಾಡಬೇಕು. ಹೆಲ್ಮೆಟ್, ಗ್ಲೌಸ್, ಎಲ್ಬೋ, ಸೇರಿದಂತೆ ಗಂಗೂಲಿಯನ್ನು ಗಾಯಗೊಳಿಸಿದರೆ ಮುಂದಿನ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಪ್ರಮುಖ ಆಟಗಾರರನ್ನು ಟಾರ್ಗೆಟ್ ಮಾಡಿದರೆ ಸರಣಿ ಸುಲಭವಾಗಿ ನಮ್ಮ ಕೈಸೇರಲಿದೆ ಎಂದು ಅಖ್ತರ್ ಹೇಳಿದ್ದರು.
ICC T20 World Cup: ಈ ಬಾರಿ ವಿಶ್ವಕಪ್‌ನಲ್ಲಿ ಭಾರತ ಸೋಲಿಸುವುದು ಪಾಕ್‌ಗೆ ಸುಲಭವಲ್ಲ..!
ಅಖ್ತರ್ ಮಾತಿಗೆ ಪಾಕಿಸ್ತಾನದ ಇತರ ವೇಗಿಗಳು ಸಲೆಹೆಯೊಂದನ್ನು ನೀಡಿದ್ದರು. ಅಖ್ತರ್‌ಗೆ ಹೆಚ್ಚಿನ ವೇಗವಿರುವುದರಿಂದ ಗಾಯಗೊಳಿಸುವುದು ಸುಲಭ. ನಾವು ವಿಕೆಟ್ ಪಡೆಯಲು ಯತ್ನಿಸುತ್ತೇವೆ ಎಂದು ಮೀಟಿಂಗ್‌ನಲ್ಲಿ ಮಾತುಕತೆ ನಡೆಸಿ ಗಂಗೂಲಿ ಸೇರಿದಂತೆ ಟೀಂ ಇಂಡಿಯಾ ಆಟಗಾರರ ಮೇಲೆ ದಾಳಿ ಮಾಡಲಾಗಿತ್ತು ಎಂದು ಸ್ವತಃ ಶೋಯೆಬ್ ಅಖ್ತರ್ ಹೇಳಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಶೋಯೆಬ್ ಅಖ್ತರ್ ಈ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಈ ಸಂದರ್ಶನವನ್ನು ಗಂಗೂಲಿ ನೋಡುತ್ತಿದ್ದಾರೆ ಎಂದು ಸೆಹ್ವಾಗ್ ಅಖ್ತರ್‌ಗೆ ಕಿವಿ ಮಾತು ಹೇಳಿದ್ದಾರೆ. ಈ ವೇಳೆ ಈ ಕುರಿತು ಈಗಾಗಲೇ ಗಂಗೂಲಿಗೆ ಹೇಳಿದ್ದೇನೆ. ಗಂಗೂಲಿ ವಿಕೆಟ್ ಕಬಳಿಸುವುದು ನಮ್ಮ ಉದ್ದೇಶವಾಗಿರಲಿಲ್ಲ. ಇಂಜುರಿ ಮಾಡುವುದೇ ನಮ್ಮ ಮೊದಲ ಗುರಿಯಾಗಿತ್ತು ಅನ್ನೋದನ್ನು ಗಂಗೂಲಿಗೆ ಹೇಳಿದ್ದೇನೆ. ಇದರಲ್ಲಿ ನಾನು ಯಶಸ್ವಿಯಾಗಿದ್ದೇನೆ ಎಂದು ಅಖ್ತರ್ ಹೇಳಿದ್ದಾರೆ. 1999ರಲ್ಲಿ ಮೋಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಸೌರವ್ ಗಂಗೂಲಿ ವೇಗಿ ಅಖ್ತರ್ ಎಸೆತದಲ್ಲಿ ಇಂಜುರಿಗೆ ತುತ್ತಾಗಿದ್ದರು.
Karachi Test ಸಚಿನ್ ಗಾಯಗೊಳಿಸುವುದೇ ನನ್ನ ಗುರಿಯಾಗಿತ್ತು, ಶಾಕಿಂಗ್ ಮಾಹಿತಿ ಬಹಿರಂಗ ಪಡಿಸಿದ ಅಕ್ತರ್