Karachi Test ಸಚಿನ್ ಗಾಯಗೊಳಿಸುವುದೇ ನನ್ನ ಗುರಿಯಾಗಿತ್ತು, ಶಾಕಿಂಗ್ ಮಾಹಿತಿ ಬಹಿರಂಗ ಪಡಿಸಿದ ಅಕ್ತರ್
- 2006ರ ಕರಾಚಿ ಟೆಸ್ಟ್ ಪಂದ್ಯದ ಸೀಕ್ರೆಟ್ ಪ್ಲಾನ್ ಬಹಿರಂಗ
- ಸಚಿನ್ ತೆಂಡೂಲ್ಕರ್ ವಿಕೆಟ್ ಬದಲು ಇಂಜುರಿ ಮೇಲೆ ಫೋಕಸ್
- ಸಚಿನ್ ಹೆಲ್ಮೆಟ್ ಗುರಿಯಾಗಿಸಿ ಅಕ್ತರ್ ಬೌಲಿಂಗ್ ದಾಳಿ
ಕರಾಚಿ(ಜೂ.05): ಮಾಸ್ಟರ್ ಬ್ಲಾಸ್ಟರ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕ್ರಿಕೆಟ್ ಕರಿಯರ್‌ನಲ್ಲಿ ಬಹುತೇಕ ಎಲ್ಲಾ ಬೌಲರ್‌ಗಳ ನಿದ್ದೆಗೆಡಿಸಿದ್ದಾರೆ. ಸಚಿನ್‌ಗೆ ಬೌಲಿಂಗ್ ಮಾಡುವುದು ಅಂದರೆ ಎಲ್ಲರಿಗೂ ಭಯ. ಈ ಭಯ ಮಾರಕ ವೇಗಿ ಪಾಕಿಸ್ತಾನದ ಶೋಯೆಬ್ ಅಕ್ತರ್‌ಗೂ ಇತ್ತು. ಇದೀಗ ಅಕ್ತರ್ 2006ರ ಕರಾಚಿ ಟೆಸ್ಟ್ ಪಂದ್ಯದ ಸೀಕ್ರೆಟ್ ಪ್ಲಾನ್ ಬಹಿರಂಗ ಪಡಿಸಿದ್ದಾರೆ. ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಗಾಯಗೊಳಿಸುವುದೇ ನನ್ನ ಉದ್ದೇಶವಾಗಿತ್ತು ಎಂದು ಅಕ್ತರ್ ಹೇಳಿದ್ದಾರೆ.
ಸಚಿನ್ ತೆಂಡುಲ್ಕರ್ ವಿಕೆಟ್ ಕಬಳಿಸುವುದು ಕಷ್ಟವಾಗಿತ್ತು. ಸಚಿನ್ ಕ್ರೀಸ್‌ನಲ್ಲಿದ್ದರೆ ರನ್ ಹರಿದು ಬರುವುದರಲ್ಲಿ ಯಾವುದೇ ಸಂದೇಹವಿಲ್ಲ. ಹೀಗಾಗಿ ಸಚಿನ್ ತೆಂಡುಲ್ಕರ್ ಮೇಲೆ ಮಾರಕ ಬೌಲಿಂಗ್ ದಾಳಿ ಮಾಡಿ ಗಾಯಗೊಳಿಸಿವುದು ನನ್ನ ಗುರಿಯಾಗಿತ್ತು. ಇದಕ್ಕಾಗಿ ಸಚಿನ್‌ಗೆ ಬೌನ್ಸರ್ ಮೇಲೆ ಬೌನ್ಸರ್ ಹಾಕಿದ್ದೆ ಎಂದು ಶೋಯಿಬ್ ಅಕ್ತರ್ ಸ್ಪೋರ್ಟ್ಸ್‌ಕೀಡಾ ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.
ಭಾರತ ರತ್ನ ಗೌರವ ಪಡೆದ ಏಕೈಕ ಕ್ರೀಡಾಪಟು ಸಚಿನ್ ತೆಂಡೂಲ್ಕರ್, ವಿವಾದವಿಲ್ಲದ ವೃತ್ತಿ ಬದುಕು!
2006ರಲ್ಲಿ ಭಾರತ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಈ ವೇಳೆ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಕರಾಚಿಯಲ್ಲಿ ಆಯೋಜಿಸಲಾಗಿತ್ತು. ಪಂದ್ಯಕ್ಕೂ ಮೊದಲೇ ನಾನು ನಿರ್ಧರಿಸಿದ್ದೆ. ಈ ಪಂದ್ಯದಲ್ಲಿ ಸಚಿನ್ ಗಾಯಗೊಳ್ಳಬೇಕು. ಇದಕ್ಕಾಗಿ ಸಚಿನ್ ತಲೆ ಎತ್ತರಕ್ಕೆ ಬೌನ್ಸ್ ಹಾಕುತ್ತಿದ್ದೆ. ನಾಯಕ ಇನ್ಜಮಾಮ್ ಉಲ್ ಹಕ್, ವಿಕೆಟ್ ಟು ವಿಕೆಟ್ ಬೌಲಿಂಗ್ ಮಾಡಲು ಸೂಚಿಸಿದ್ದರು. ಆದರೆ ನಾನು ಮಾತ್ರ ಸಚಿನ್‌ಗೆ ಬೌನ್ಸರ್ ಹಾಕಿದ್ದೆ.
ಒಂದು ಬೌನ್ಸರ್ ಸಚಿನ್ ಹೆಲ್ಮೆಟ್‌ಗೆ ಬಡಿದಿತ್ತು. ನನ್ನ ಗುರಿ ಸಾಧಿಸಿದೆ ಅಂದುಕೊಂಡೆ. ಆದರೆ ವಿಡಿಯೋ ನೋಡುವಾಗ ಸಚಿನ್ ಬೌನ್ಸರ್ ಏಟಿನಿಂದ ತಪ್ಪಿಸಿಕೊಂಡಿದ್ದರು. ಈ ಮಾಹಿತಿಯನ್ನು ನಾನು ಮೊದಲ ಬಾರಿಗೆ ಬಹಿರಂಗ ಪಡಿಸುತ್ತಿದ್ದೇನೆ ಎಂದು ಅಕ್ತರ್ ಹೇಳಿದ್ದಾರೆ.
ಕರಾಚಿ ಟೆಸ್ಟ್ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್‌ಗೆ ಬೌನ್ಸರ್ ಮಾತ್ರ ಹಾಕಿದ್ದರು. ಹೀಗಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಸಚಿನ್ ತೆಂಡುಲ್ಕರ್ 23 ರನ್ ಸಿಡಿಸಿ ಅಬ್ದುಲ್ ರಜಾಕ್‌ಗೆ ವಿಕೆಟ್ ಒಪ್ಪಿಸಿದ್ದರು. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ 26 ರನ್ ಸಿಡಿಸಿ ಮೊಹಮ್ಮದ್ ಆಸಿಫ್‌ಗೆ ವಿಕೆಟ್ ಒಪ್ಪಿಸಿದರು.
ಸಚಿನ್ ಕಾಲಿಗೆ ಬಿದ್ದು ನಮಸ್ಕರಿಸಿದ ಜಾಂಟಿ ರೋಡ್ಸ್, ಕ್ರಿಕೆಟ್ ದೇವರ ಕಾಲಿಗೆ ಬಿದ್ದಿದ್ಯಾಕೆ?
ಈ ಪಂದ್ಯದಲ್ಲಿ ಮೊಹಮ್ಮದ್ ಆಸಿಫ್ ಮಾರಕ ದಾಳಿಗೆ ಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳು ತತ್ತರಿಸಿದ್ದರು. ಹೀಗಾಗಿ ಭಾರತ ಈ ಪಂದ್ಯವನ್ನು 341 ರನ್‌ಗಳಿಂದ ಸೋಲು ಕಂಡಿತ್ತು. ಇಷ್ಟೇ ಭಾರತ ಸರಣಿಯನ್ನು 0-1 ಅಂತರದಲ್ಲಿ ಕೈಚೆಲ್ಲಿತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿ ಇರ್ಫಾನ್ ಪಠಾಣ್ ಮೊದಲ ಓವರ್‌ನನಲ್ಲೇ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದರು.
ಕಾರ್ಗಿಲ್ ವೇಳೆ ಕೌಂಟಿ ಆಫರ್ ಬಿಟ್ಟಿದ್ದೆ
ಕಾರ್ಗಿಲ್ ಯುದ್ಧದ ಸಮಯದಲ್ಲಿ ತಮಗೆ ದೊರೆತ ಇಂಗ್ಲೆಂಡ್ ಕೌಂಟಿ ಆಫರನ್ನು ತಿರಸ್ಕರಿಸಿದ್ದಾಗಿ ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್ ಹೇಳಿಕೊಂಡಿದ್ದಾರೆ. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಖ್ತರ್, ‘1999ರಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ತಂಡ 1.75 ಲಕ್ಷ ಪೌಂಡ್ ಗುತ್ತಿಗೆ ಪ್ರಸ್ತಾಪ ನೀಡಿತ್ತು. ಆದರೆ ಕಾರ್ಗಿಲ್ ಯುದ್ಧದ ಸಮಯವದು. ನಾನೂ ಯುದ್ಧದಲ್ಲಿ ಪಾಲ್ಗೊಂಡು ದೇಶಕ್ಕಾಗಿ ಪ್ರಾಣ ಬಿಡಲು ಸಿದ್ಧನಿದ್ದೆ. ಲಾಹೋರ್‌ನ ಹೊರವಲಯದಲ್ಲಿ ನಿಂತು ಹೋರಾಡಲು ಕಾಯುತ್ತಿದೆ’ ಎಂದು ಹೇಳಿಕೊಂಡಿದ್ದಾರೆ.