ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು ಆಸ್ಟ್ರೇಲಿಯಾ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಕೊನೆಯ ಪಂದ್ಯದಲ್ಲೂ ಅಜೇಯರಾಗುಳಿದೆ ಡೇವಿಡ್ ವಾರ್ನರ್ 3 ಅಪರೂಪದ ದಾಖಲೆಗಳನ್ನು ಬರೆದರು. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಮೆಲ್ಬರ್ನ್[ನ.02]: ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯನ್ನು ಆಸ್ಟ್ರೇಲಿಯಾ ಕ್ಲೀನ್ ಸ್ವೀಪ್ ಮಾಡಿದೆ. ಶುಕ್ರವಾರ ಇಲ್ಲಿ ನಡೆದ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ 7 ವಿಕೆಟ್‌ಗಳಿಂದ ಜಯಿಸಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕ್ರಿಕೆಟ್‌ನಿಂದ ದೂರ ಸರಿದ ಆಸಿಸ್ ಆಲ್ರೌಂಡರ್ ಮ್ಯಾಕ್ಸ್‌ವೆಲ್‌

Scroll to load tweet…

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಕುಸಾಲ್ ಪೆರೇರಾ (57) ಅವರ ಆಕರ್ಷಕ ಅರ್ಧಶತಕದ ನೆರವಿನಿಂದ 20 ಓವರಲ್ಲಿ 6 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು. ಆಸೀಸ್ ಪರ ಸ್ಟಾರ್ಕ್, ರಿಚರ್ಡ್‌ಸನ್ ಹಾಗೂ ಕಮಿನ್ಸ್ ತಲಾ 2 ವಿಕೆಟ್ ಕಿತ್ತರು.

Scroll to load tweet…

ಇನ್ನು ಸುಲಭ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾಗೆ ವಾರ್ನರ್ ಆಸರೆಯಾದರು. ಅಜೇಯ 57 ರನ್ ಗಳಿಸಿದ ವಾರ್ನರ್, ಸರಣಿಯಲ್ಲಿ ಒಮ್ಮೆಯೂ ಔಟಾಗದೆ 217 ರನ್ ಕಲೆಹಾಕಿದರು. ಆಸ್ಟ್ರೇಲಿಯಾ 17.4 ಓವರಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಮುಟ್ಟಿತು.

ಅತಿ ಹೆಚ್ಚು ಎಸೆತಗಳನ್ನೆದುರಿಸಿದ ಕ್ರಿಕೆಟಿಗರು; ಐವರಲ್ಲಿ ನಾಲ್ವರು ಕ್ಯಾಪ್ಟನ್..!

ಒಂದೇ ಪಂದ್ಯದಲ್ಲಿ ವಾರ್ನರ್ ಮೂರು ದಾಖಲೆ:

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸಿದ್ದ ಡೇವಿಡ್ ವಾರ್ನರ್ ಬ್ಯಾಟ್, ಇಂಗ್ಲೆಂಡ್ ವಿರುದ್ಧ ನಡೆದ ಆ್ಯಷಸ್ ಸರಣಿಯಲ್ಲಿ ಅಕ್ಷರಶಃ ಮಂಕಾಗಿತ್ತು. ಆದರೀಗ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ 3 ಪಂದ್ಯದಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ಸರಣಿ ಕ್ಲೀನ್ ಸ್ವೀಪ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಅದರಲ್ಲೂ ಅಂತಿಮ ಪಂದ್ಯವೊಂದರಲ್ಲೇ ವಾರ್ನರ್ ಮೂರು ಅಪರೂಪದ ದಾಖಲೆಗಳನ್ನೂ ಬರೆದರು.

1. ಡೇವಿಡ್ ವಾರ್ನರ್ 37 ರನ್ ಬಾರಿಸುತ್ತಿದ್ದಂತೆ, ಟಿ20 ಕ್ರಿಕೆಟ್’ನಲ್ಲಿ 9 ಸಾವಿರ ರನ್ ಬಾರಿಸಿದ ಆಸ್ಟ್ರೇಲಿಯಾದ ಮೊದಲ ಕ್ರಿಕೆಟಿಗ ಎನಿಸಿದರು.

2. ಇನ್ನು ವಾರ್ನರ್ 49 ರನ್ ಬಾರಿಸಿದಾಗ, ಆಸ್ಟ್ರೇಲಿಯಾ ಪರ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ 2 ಸಾವಿರ ರನ್ ಪೂರೈಸಿದ ಮೊದಲ ಕ್ರಿಕೆಟಿಗ ಎನಿಸಿದರು.

3. ಲಂಕಾ ಬೌಲರ್ ಲಹಿರು ಕುಮಾರ ಎದುರು ಸಿಕ್ಸರ್ ಬಾರಿಸುತ್ತಿದ್ದಂತೆ, ಆಸ್ಟ್ರೇಲಿಯಾ ನೆಲದಲ್ಲಿ 100+ ಸಿಕ್ಸರ್ ಬಾರಿಸಿದ ಎರಡನೇ ಕ್ರಿಕೆಟಿಗ ಎನ್ನುವ ಗೌರವಕ್ಕೆ ವಾರ್ನರ್ ಭಾಜನರಾದರು. ಈ ಮೊದಲು ಆ್ಯಡಂ ಗಿಲ್ ಕ್ರಿಸ್ಟ್[105] ಈ ಸಾಧನೆ ಮಾಡಿದ್ದರು.

ಸ್ಕೋರ್:

ಶ್ರೀಲಂಕಾ 142/6 (ಕುಸಾಲ್ 57, ಕಮಿನ್ಸ್ 2-23),

ಆಸ್ಟ್ರೇಲಿಯಾ 145/3(ವಾರ್ನರ್ 57, ಫಿಂಚ್ 37)