ಕ್ರಿಕೆಟ್‌ನಿಂದ ದೂರ ಸರಿದ ಆಸಿಸ್ ಆಲ್ರೌಂಡರ್ ಮ್ಯಾಕ್ಸ್‌ವೆಲ್
ಆಸಿಸ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ದಿಢೀರ್ ಆಗಿ ಕ್ರಿಕೆಟ್‌ನಿಂದ ದೂರ ಸರಿದ್ದಾರೆ. ಮಾನಸಿಕ ಸಮಸ್ಯೆ ಎದುರಿಸುತ್ತಿರುವ ಮ್ಯಾಕ್ಸ್‌ವೆಲ್ ಕೆಲದಿನಗಳ ಮಟ್ಟಿಗೆ ಕ್ರಿಕೆಟ್‌ನಿಂದ ಬ್ರೇಕ್ ಪಡೆದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಮೆಲ್ಬರ್ನ್[ನ.01]: ಆಸ್ಪ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಮಾನಸಿಕ ಒತ್ತಡ ಸಮಸ್ಯೆ ಎದುರಿಸುತ್ತಿದ್ದು, ಕೆಲ ದಿನಗಳ ಮಟ್ಟಿಗೆ ಕ್ರಿಕೆಟ್‌ನಿಂದ ದೂರವಿರಲು ನಿರ್ಧರಿಸಿದ್ದಾರೆ.
ದೆಹಲಿಯಲ್ಲೇ ನಡೆಯುತ್ತೆ ಮೊದಲ ಟಿ20!
ಶ್ರೀಲಂಕಾ, ಪಾಕಿಸ್ತಾನ ವಿರುದ್ಧ ಟಿ20 ಸರಣಿಯಿಂದ ಹಿಂದೆ ಸರಿಯಲು ತಾವು ನಿರ್ಧರಿಸಿರುವುದಾಗಿ ಕ್ರಿಕೆಟ್ ಆಸ್ಪ್ರೇಲಿಯಾಗೆ ತಿಳಿಸಿರುವ ಮ್ಯಾಕ್ಸ್‌ವೆಲ್‌ಗೆ ತಂಡದ ವೈದ್ಯಕೀಯ ಸಿಬ್ಬಂದಿ ಹಾಗೂ ಆಟಗಾರರಿಂದ ಸಂಪೂರ್ಣ ಬೆಂಬಲ ದೊರೆತಿದೆ. ‘ನಮ್ಮ ಆಟಗಾರರು ಕ್ಷೇಮವಾಗಿರುವುದು ನಮಗೆ ಮುಖ್ಯ. ಮ್ಯಾಕ್ಸ್‌ವೆಲ್‌ಗೆ ಎಲ್ಲಾ ರೀತಿಯಲ್ಲೂ ಬೆಂಬಲ ನೀಡಲಿದ್ದೇವೆ’ ಎಂದು ಕ್ರಿಕೆಟ್ ಆಸ್ಪ್ರೇಲಿಯಾದ ಪ್ರಧಾನ ವ್ಯವಸ್ಥಾಪಕ ಬೆನ್ ಆಲಿವರ್ ತಿಳಿಸಿದ್ದಾರೆ. ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ಸಹ ಮ್ಯಾಕ್ಸ್‌ವೆಲ್‌ಗೆ ಬೆಂಬಲ ನೀಡಿದ್ದಾರೆ.
ಟ್ರೋಲ್ ಆಯ್ತು ಕೊಹ್ಲಿ ಪೋಸ್ಟ್; ವಿಶ್ವಕಪ್ ಸೆಮಿಫೈನಲ್ ನೆನಪಿಸಿದ ಫ್ಯಾನ್ಸ್!
ರನೌಟ್ ನಿಯಮ ಗೊತ್ತಿರದ ಲಂಕಾದ ಸಂದಕನ್ ಎಡವಟ್ಟು!
ಸೀಮಿತ ಓವರ್’ಗಳ ಕ್ರಿಕೆಟ್’ನಲ್ಲಿ ಆಸೀಸ್ ತಂಡದ ಪ್ರಮುಖ ಆಲ್ರೌಂಡರ್ ಆಗಿ ಗುರುತಿಸಿಕೊಂಡಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಲಂಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕೇವಲ 28 ಎಸೆತಗಳಲ್ಲಿ 62 ರನ್ ಚಚ್ಚಿದ್ದರು. ಫೀಲ್ಡಿಂಗ್’ನಲ್ಲೂ ತಂಡಕ್ಕೆ ಅಪರೂಪದ ಕಾಣಿಕೆ ನೀಡಿದ್ದಾರೆ. ಮುಂಬರುವ ಟಿ20 ವಿಶ್ವಕಪ್ ವೇಳೆಗೆ ಮ್ಯಾಕ್ಸ್‌ವೆಲ್ ತಂಡ ಕೂಡಿಕೊಳ್ಳಲಿದ್ದಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ನವೆಂಬರ್ 1ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: