ಮುದ್ದಾದ ಹೆಣ್ಣಾಗಿ ಬದಲಾದ ಖ್ಯಾತ ಕ್ರಿಕೆಟರ್ ಪುತ್ರ: ಆರ್ಯನ್ ಈಗ ಅನಾಯಾ

ಭಾರತದ ಮಾಜಿ ಆಲ್‌ರೌಂಡರ್ ಸಂಜಯ್ ಬಂಗಾರ್ ಅವರ ಪುತ್ರ ಆರ್ಯನ್ ಬಂಗಾರ್ ಲಿಂಗ ಪರಿವರ್ತನೆ ಮಾಡಿಕೊಂಡು ಅನಾಯಾ ಬಂಗಾರ್ ಆಗಿದ್ದಾರೆ. 

cricketer Sanjay Bangar son turned as daughter as he underwent sex change operation

ಭಾರತದ ಮಾಜಿ ಆಲ್‌ರೌಂಡರ್ ಸಂಜಯ್ ಬಂಗಾರ್ ಅವರು ಮೈದಾನದ ಒಳಗೆ ಮತ್ತು ಹೊರಗೆ ತಮ್ಮ ಅದ್ಭುತವಾದ ಸ್ಪಿರೀಟ್‌ಗೆ ಹೆಸರುವಾಸಿಯಾಗಿದ್ದವರು. ರೈಲ್ವೇಸ್ ಆಲ್‌ರೌಂಡರ್ ಹಾಗೂ ಟೀಮ್ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್ ಆಗಿದ್ದ ಸಂಜಯ್ ಬಂಗಾರ್‌ ಯಾವುದೇ ಸಂದರ್ಭಗಳಲ್ಲೂ ಹಿಂದೆ ಸರಿಯದೇ ತಮ್ಮ ನಿರ್ಧಾರದ ಗಟ್ಟಿತನಕ್ಕೆ ಹೆಸರುವಾಸಿಯಾದವರು.  

ಆದರೆ ಈಗ ಅವರ ಪುತ್ರ ಆರ್ಯನ್ ಬಂಗಾರ್ ಅವರು ಲಿಂಗ ಪರಿವರ್ತನೆ ಮಾಡುವ ಮೂಲಕ ಅನಾಯಾ ಬಂಗಾರ್ ಆಗಿ ಬದಲಾಗಿದ್ದಾರೆ. ಕ್ರಿಕೆಟ್‌ನಲ್ಲಿ ತಂದೆಯಂತೆ ಅತೀವ ಆಸಕ್ತಿ ಇರುವ ಅನಾಯಾ ಬಂಗಾರ್ ಅವರು ಟ್ರಾನ್ಸ್‌ವುಮೆನ್ ಕ್ರಿಕೆಟರ್‌ ಆಗಲು ಬಯಸಿದ್ದಾರೆ. ಆರ್ಯನ್ ಅಥವಾ ಅನಾಯಾ,  ಇತ್ತಿಚೆಗೆ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, ಅದಕ್ಕಾಗಿ ಪಟ್ಟ ಕಷ್ಟವನ್ನು ಹೇಳಿಕೊಂಡಿದ್ದಾರೆ. ಲಿಂಗ ರೂಪಾಂತರಕ್ಕಾಗಿ 10 ತಿಂಗಳ ಹಾರ್ಮೋನ್ ರೂಪಾಂತರ ಕಾರ್ಯವಿಧಾನದ ಹಾಗೂ ಅದರ ಪರಿಣಾಮಗಳನ್ನು ಹೇಳಿಕೊಂಡಿದ್ದಾರೆ.

ಶಸ್ತ್ರಚಿಕಿತ್ಸೆಯ ಸುಮಾರು 11 ತಿಂಗಳ ನಂತರ, ಕ್ರಿಕೆಟಿಗನ ಪುತ್ರ  ತನ್ನನ್ನು ಅರ್ಯನ್ ಬದಲಾಗಿ ಅನಾಯಾ ಎಂದು ಗುರುತಿಸಿಕೊಂಡಿದ್ದಾಳೆ. ಮಗಳಾಗಿ ಬದಲಾಗಿರುವ ಅನಯಾ ತಂದೆಯಂತೆ, ಈಗ ಎಡಗೈ ಬ್ಯಾಟರ್ ಆಗಿದ್ದಾರೆ ಮತ್ತು ಸ್ಥಳೀಯ ಕ್ಲಬ್ ಕ್ರಿಕೆಟ್‌ನಲ್ಲಿ ಇಸ್ಲಾಂ ಜಿಮ್ಖಾನಾ ತಂಡದ ಪರ ಆಡುತ್ತಿದ್ದರು. ಇದರ ಜೊತೆ ಲೀಸೆಸ್ಟರ್‌ಶೈರ್‌ನ ಹಿಂಕ್ಲೆಯ ಕ್ರಿಕೆಟ್ ಕ್ಲಬ್ ಅನ್ನು ಪ್ರತಿನಿಧಿಸಿ ಟನ್‌ಗಳಷ್ಟು ರನ್ ಗಳಿಸಿದ್ದಾರೆ. 

ಪ್ರಸ್ತುತ ತಮ್ಮ ಇಷ್ಟದ ಕ್ರಿಕೆಟನ್ನು ತ್ಯಜ್ಯಿಸಿದ್ದರು, ಅನಯಾ ಹೆಣ್ಣಾಗಿ ಬದಲಾಗುವ ಮೂಲಕ ತಮ್ಮ ಮೂಲತನವನ್ನು ಕಂಡುಕೊಂಡಿದ್ದಕ್ಕೆ ಸಂತೃಪ್ತರಾಗಿದ್ದಾರೆ.  ಚಿಕ್ಕ ವಯಸ್ಸಿನಿಂದಲೂ ಕ್ರಿಕೆಟ್ ನನ್ನ ಜೀವನದ ಭಾಗವಾಗಿತ್ತು. ಬೆಳೆಯುತ್ತಿರುವಾಗ, ನನ್ನ ತಂದೆ ದೇಶವನ್ನು ಪ್ರತಿನಿಧಿಸುತ್ತಿರುವಾಗ ಮತ್ತು ತರಬೇತಿ ನೀಡುತ್ತಿರುವಾಗ ನಾನು ವಿಸ್ಮಯದಿಂದ ನೋಡುತ್ತಿದೆ ಮತ್ತು ನಾನು ಅವರ ಹೆಜ್ಜೆಗಳನ್ನು ಅನುಸರಿಸುವ ಬಗ್ಗೆ ಕನಸು ಕಾಣಲು ಪ್ರಾರಂಭಿಸುವ ಮುಂಚೆಯೇ. ಅವರು ಕ್ರೀಡೆಯಲ್ಲಿ ತೋರಿದ ಉತ್ಸಾಹ, ಶಿಸ್ತು ಮತ್ತು ಸಮರ್ಪಣಾ ಮನೋಭಾವವು ನನಗೆ ಆಳವಾಗಿ ಸ್ಫೂರ್ತಿ ನೀಡಿತು. ಕ್ರಿಕೆಟ್ ನನ್ನ ಪ್ರೀತಿ, ನನ್ನ ಮಹತ್ವಾಕಾಂಕ್ಷೆ ಮತ್ತು ನನ್ನ ಭವಿಷ್ಯವಾಯಿತು. ನನ್ನ ಇಡೀ ಜೀವನವನ್ನು ನನ್ನ ಕೌಶಲ್ಯಗಳನ್ನು ಗೌರವಿಸಲು ನಾನು ಕಳೆದಿದ್ದೇನೆ, ಒಂದು ದಿನ, ಅವನಂತೆಯೇ ನನ್ನ ದೇಶವನ್ನು ಪ್ರತಿನಿಧಿಸುವ ಅವಕಾಶವನ್ನು ನಾನು ಪಡೆಯುತ್ತೇನೆ ಎಂದು ಆಶಿಸುತ್ತೇನೆ ಎಂದು ಅನಯಾ ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ. 

ನನ್ನ ಉತ್ಸಾಹ, ನನ್ನ ಪ್ರೀತಿ ಆಗಿರುವ ಕ್ರೀಡೆಯನ್ನು ತ್ಯಜಿಸಲು ನಾನು ಯೋಚಿಸಬೇಕಾಗಿಲ್ಲ. ಆದರೆ ಇಲ್ಲಿ ನಾನು ನೋವಿನ ವಾಸ್ತವವನ್ನು ಎದುರಿಸುತ್ತಿದ್ದೇನೆ. ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿ (HRT) ನಲ್ಲಿ ಟ್ರಾನ್ಸ್ ಮಹಿಳೆಯಾಗಿ, ನನ್ನ ದೇಹವು ತೀವ್ರವಾಗಿ ಬದಲಾಗಿದೆ. ನಾನು ಒಮ್ಮೆ ಅವಲಂಬಿಸಿದ್ದ ನನ್ನ ಸ್ನಾಯುವಿನ ದ್ರವ್ಯರಾಶಿ, ಶಕ್ತಿ, ಸ್ನಾಯುವಿನ ಸ್ಮರಣೆ ಮತ್ತು ಅಥ್ಲೆಟಿಕ್ ಸಾಮರ್ಥ್ಯಗಳನ್ನು ಕಳೆದುಕೊಳ್ಳುತ್ತಿದ್ದೇನೆ. ನಾನು ಇಷ್ಟು ದಿನ ಪ್ರೀತಿಸುತ್ತಿದ್ದ ಆಟ ನನ್ನಿಂದ ದೂರ ಸರಿಯುತ್ತಿದೆ,  ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿಯಿಂದಾಗಿ ಕ್ರಿಕೆಟ್‌ನಿಂದ ದೂರ ಸರಿಯುತ್ತಿರುವ ಬಗ್ಗೆ ಅನಯಾ ಹಂಚಿಕೊಂಡಿದ್ದಾರೆ.

ಪ್ರಸ್ತುತ ಅನಯಾ ಮ್ಯಾಂಚೆಸ್ಟರ್‌ನಲ್ಲಿ ವಾಸ ಮಾಡುತ್ತಿದ್ದು, ಕಂಟ್ರಿ ಕ್ಲಬ್‌ ಕ್ರಿಕೆಟ್ ಟೀಮ್‌ಗಳಿಗಾಗಿ ಹೆಚ್ಚು ಆಡುತ್ತಿದ್ದರು. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) 2025 ರಿಂದ ಟ್ರಾನ್ಸ್ ಮಹಿಳೆಯರು ಮಹಿಳಾ ದೇಶೀಯ ಕ್ರಿಕೆಟ್‌ನಲ್ಲಿ ಆಡುವುದನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಪುರುಷ ಪ್ರೌಢಾವಸ್ಥೆಯನ್ನು ದಾಟಿದ ಯಾವುದೇ ಆಟಗಾರರು ಮಹಿಳೆಯರಾಗಿ ಬದಲಾಗಿ ಅಗ್ರ ಎರಡು ಹಂತಗಳಲ್ಲಿ ಕಾಣಿಸಿಕೊಳ್ಳಲು ಅರ್ಹರಾಗಿರುವುದಿಲ್ಲ ಎಂದು ಅದು ಹೇಳಿದೆ.

Latest Videos
Follow Us:
Download App:
  • android
  • ios