ಬೆಂಗಳೂರು(ಅ.10): ಟೀಂ ಇಂಡಿಯಾ ಕ್ರಿಕೆಟಿಗ, ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. 30ರ ಹರೆಯದ ಹ್ಯಾಂಡ್ಸಮ್ ಹಂಕ್, ಸ್ಟೈಲೀಶ್ ಕ್ರಿಕೆಟರ್ ಮನೀಶ್ ಪಾಂಡೆ ಮದುವೆಯಾಗುತ್ತಿದ್ದಾರೆ. ಪಾಂಡೆ ಮನಸ್ಸು ಕದ್ದ ಹುಡುಗಿ ಬೇರೆ ಯಾರು ಅಲ್ಲ, ದಕ್ಷಿಣ ಭಾರತದ ನಟಿ ಆಶ್ರಿತಾ ಶೆಟ್ಟಿ.

ಇದನ್ನೂ ಓದಿ: ವಿಜಯ್‌ ಹಜಾರೆ ಟ್ರೋಫಿ: ರಾಜ್ಯಕ್ಕೆ ಪಾಂಡೆ ನಾಯ​ಕ

ಸದ್ಯ ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸುತ್ತಿರುವ ಮನೀಶ್ ಪಾಂಡೆ, ಬಹುಕಾಲದ ಗೆಳತಿ, ನಟಿ ಆಶ್ರಿತಾ ಶೆಟ್ಟಿ ಕೈಹಿಡಿಯಲು ರೆಡಿಯಾಗಿದ್ದಾರೆ. ಪಾಂಡೆ ಹಾಗೂ ಆಶ್ರಿತಾ ಮದುವೆ ಮುಂಬೈನಲ್ಲಿ ನಡೆಯಲಿದೆ. 2 ದಿನಗಳ ಕಾಲ ನಡೆಯಲಿರುವ ಮದುವೆಯಲ್ಲಿ ಕೆಲ ಟೀಂ ಇಂಡಿಯಾ ಕ್ರಿಕೆಟಿಗರು ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ಕೊಹ್ಲಿಗೆ ಪಾಕ್ ಅಭಿಮಾನಿಯ ವಿಶೇಷ ಮನವಿ; ಭಾರತೀಯರಿಂದ ಸಕಾರಾತ್ಮಕ ಸ್ಪಂದನೆ!

ಡಿಸೆಂಬರ್ 2 ರಂದು ಅದ್ದೂರಿಯಾಗಿ ಪಾಂಡೆ-ಆಶ್ರಿತಾ ವಿವಾಹ ಮಹೋತ್ಸವ ನಡೆಯಲಿದೆ. 2 ದಿನಗಳ ಕಾಲ ನಡೆಯಲಿರುವ ಪಂದ್ಯಕ್ಕೆ ಮುಂಬೈನ ಪಂಚತಾರ ಹೊಟೆಲ್ ಸಜ್ಜಾಗುತ್ತಿದೆ. ಹಲವು ವರ್ಷಗಳಿಂದ ಗಪ್ ಚುಪ್ ಪ್ರೀತಿಯಲ್ಲಿದ್ದ ಈ ಜೋಡಿ ಇದೀಗ ಹಸೆಮಣೆ ಏರಲು ಸಿದ್ಧತೆ ನಡೆಸಿದ್ದಾರೆ.

ದಕ್ಷಿಣ ಭಾರತದ ಚಿತ್ರಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ 26 ವರ್ಷದ ಆಶ್ರಿತಾ ಶೆಟ್ಟಿ, ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಆದರೆ ಮೂಲತಃ ಮಂಗಳೂರಿನವರಾಗಿರುವ ಆಶ್ರಿತಾ 2012ರಲ್ಲಿ ತೆಲಿಕೆದ ಬೊಳ್ಳಿ ತುಳು ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. 

ಇದನ್ನೂ ಓದಿ: ಮೋಸ್ಟ್ ಬ್ಯೂಟಿಫುಲ್ ಕಪಲ್; ದಿನೇಶ್ ಕಾರ್ತಿಕ್-ದೀಪಿಕಾಗೆ ಅಗ್ರಸ್ಥಾನ!

ತುಳು ಚಿತ್ರದಿಂದ ನೇರವಾಗಿ ತಮಿಳು ಚಿತ್ರಕ್ಕೆ ಕಾಲಿಟ್ಟರು. ಇಂದ್ರಜಿತ್, ಉದಯಂ NH4 ಹಾಗೂ ಒರು ಕಣ್ಣಿಯುಂ ಮೂನು ಕಲಾವಾಣಿಕಲುಂ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದರು. ಇದೇ ವೇಳೆ ಮನೀಶ್ ಪಾಂಡೆ ಜೊತೆಗಿನ ಪರಿಚಯ, ಪ್ರೀತಿಯಾಗಿ, ಪ್ರೀತಿ ಇದೀಗ ಮದುವೆಯ ಅರ್ಥ ಪಡೆಯುತ್ತಿದೆ. 

ಪಾಂಡೆ ಆಶ್ರಿತಾ ಮದುವೆ ಡಿಸೆಂಬರ್ 2 ರಂದು ನಡೆಯಲಿದೆ. ಇದೇ ವೇಳೆ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ದದ ಟಿ20 ಸರಣಿಗಾಗಿ ಮುಂಬೈನಲ್ಲೇ ತಂಗಲಿದೆ. ಹೀಗಾಗಿ ವಿರಾಟ್ ಕೊಹ್ಲಿ ಸೈನ್ಯ, ಪಾಂಡೆ ಮದುವೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.