ಬೆಂಗಳೂರು[ಸೆ.22]: ಸೆ. 24 ರಿಂದ ಅ. 13 ರವರೆಗೆ ನಡೆಯಲಿರುವ ವಿಜಯ್‌ ಹಜಾರೆ ಟ್ರೋಫಿ ಏಕದಿನ ಟೂರ್ನಿಯ ಮೊದಲ 3 ಪಂದ್ಯಗಳಿಗೆ 15 ಆಟಗಾರರ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. 

ವಿಶ್ವ ಕುಸ್ತಿ ಚಾಂಪಿ​ಯನ್‌ಶಿಪ್‌: ಫೈನಲ್‌ಗೇರಿ ಇತಿಹಾಸ ಬರೆದ ದೀಪಕ್‌!

ಕರ್ನಾಟಕ ತಂಡಕ್ಕೆ ಮನೀಶ್‌ ಪಾಂಡೆ ನಾಯಕರಾಗಿದ್ದು, ಕೆ.ಎಲ್‌. ರಾಹುಲ್‌ ಉಪನಾಯಕರಾಗಿದ್ದಾರೆ. ಈ ಹಿಂದಿನ ರಣಜಿ ಋುತುವಿನಲ್ಲಿ ಆಡಿದ ಬಹುತೇಕ ಆಟಗಾರರನ್ನು ಉಳಿಸಿಕೊಳ್ಳಲಾಗಿದೆ. ಎಲೈಟ್‌ ‘ಎ’ ಗುಂಪಿನಲ್ಲಿರುವ ಕರ್ನಾಟಕ ತಂಡ, ಸೆ. 24 ರಂದು ಹೈದರಾಬಾದ್‌ ವಿರುದ್ಧ ಮೊದಲ ಪಂದ್ಯವನ್ನಾಡಲಿದೆ. ಕರ್ನಾಟಕದ ಪಂದ್ಯಗಳು ಬೆಂಗಳೂರಲ್ಲಿ ನಡೆ​ಯ​ಲಿವೆ.

ವಿಜಯ್ ಹಜಾರೆ ಟೂರ್ನಿಗೆ ಕರ್ನಾಟಕದ ಸಂಭಾವ್ಯ ತಂಡ ಪ್ರಕಟ

ಮನೀಶ್ ಪಾಂಡೆ ಹಾಗೂ ಕೆ.ಎಲ್ ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದು, ಭಾನುವಾರ ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯ ಮುಕ್ತಾಯದ ಬಳಿಕ ರಾಜ್ಯ ತಂಡವನ್ನು ಕೂಡಿಕೊಳ್ಳಲಿದ್ದಾರೆ. 

ತಂಡ: ಮನೀಶ್‌ ಪಾಂಡೆ (ನಾಯಕ), ಕೆ.ಎಲ್‌. ರಾಹುಲ್‌, ದೇವದತ್‌ ಪಡಿಕ್ಕಲ್‌, ಸಿದ್ಧಾಥ್‌ರ್‍ ಕೆ.ವಿ., ಪ್ರವೀಣ್‌ ದುಬೆ, ಪವನ್‌ ದೇಶಪಾಂಡೆ, ಅಭಿಷೇಕ್‌ ರೆಡ್ಡಿ, ಕೆ.ಗೌತಮ್‌, ಸುಚಿತ್‌ ಜೆ., ಅಭಿಮನ್ಯು ಮಿಥುನ್‌, ಪ್ರಸಿದ್‌್ಧ ಕೃಷ್ಣ, ರೋನಿತ್‌ ಮೋರೆ, ಶರತ್‌ ಶ್ರೀನಿವಾಸ್‌, ಶ್ರೇಯಸ್‌ ಗೋಪಾಲ್‌, ವಿ. ಕೌಶಿಕ್‌.