ಮುಂಬೈ(ಡಿ.12): ಟೀಂ ಇಂಡಿಯಾದ ಶ್ರೇಷ್ಠ ಅಲ್ರೌಂಡರ್, ವಿಶ್ವಕಪ್ ಹೀರೋ ಯುವರಾಜ್ ಸಿಂಗ್ 38ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಹೋರಾಟ ನೀಡೋ ಮೂಲಕ ಭಾರತಕ್ಕೆ ಟ್ರೋಫಿ ಗೆಲ್ಲಿಸಿಕೊಟ್ಟ ಮ್ಯಾಚ್ ವಿನ್ನರ್ ಯುವರಾಜ್ ಸಿಂಗ್. ಕ್ರಿಕೆಟ್‌ಗೆ ವಿದಾಯ ಹೇಳಿರುವ ಯುವಿ, ಪತ್ನಿ ಹಾಗೂ ಕುಟುಂಬದ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

ಇದನ್ನೂ ಓದಿ: ಚಾಂಪಿಯನ್ ಕ್ರಿಕೆಟಿಗ ಯುವಿಯನ್ನು ಅರಸಿ ಬಂತು ಮತ್ತೊಂದು ಕಪ್..!

2011ರ ವಿಶ್ವಕಪ್ ಟೂರ್ನಿ ವೇಳೆ ಕ್ಯಾನ್ಸರ್‌ಗೆ ತುತ್ತಾಗಿದ್ದರು. ಆದರೆ ಯುವಿ ಕ್ಯಾನ್ಸರ್ ಲೆಕ್ಕಿಸದೆ ಭಾರತಕ್ಕಾಗಿ ಹೋರಾಟ ನಡೆಸಿದ್ದರು. 28 ವರ್ಷಗಳ ಬಳಿಕ ಟೀಂ ಇಂಡಿಯಾ ವಿಶ್ವಕಪ್ ಗೆದ್ದು ಸಂಭ್ರಮಿಸಿತು. ಸರಣಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದ ಯುವಿ ಸರಣಿ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ್ದರು. ಈ ನೆನಪುಗಳು ಭಾರತೀಯರಿಗೆ ಇನ್ನು ಹಚ್ಚ ಹಸುರಾಗಿದೆ. ಇದೀಗ ಯುವಿ ಹುಟ್ಟು ಹಬ್ಬಕ್ಕೆ ಸಹ ಕ್ರಿಕೆಟಿಗರು ಯುವಿ ವಿಶ್ವಕಪ್ ಗೆಲುವಿನ ನೆನಪು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: 3 ವರ್ಷಗಳ ಬಳಿಕ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಯುವರಾಜ್!

2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸ್ಟುವರ್ಟ್ ಬ್ರಾಡ್ ಓವರ್‌ನ 6 ಎಸೆತಗಳನ್ನೂ ಸಿಕ್ಸರ್ ಸಿಡಿಸಿ ದಾಖಲೆ ಬರೆದ ವೀರನಿಗೆ ಟೀಂ ಇಂಡಿಯಾ ಕ್ರಿಕೆಟಿಗರು ಮಾತ್ರವಲ್ಲ, ಐಸಿಸಿ  ಹಾಗೂ ಇತರ ಕ್ರಿಕೆಟಿಗರು ಶುಭಕೋರಿದ್ದಾರೆ.