ಅಬು ಧಾಬಿ(ನ.20) : ಭಾರತ ಕ್ರಿಕೆಟ್‌ ತಂಡದ ಮಾಜಿ ಆಲ್ರೌಂಡರ್‌ ಯುವ​ರಾಜ್‌ ಸಿಂಗ್‌, ಎರಡು ಮೂರು ವರ್ಷಗಳ ಬಳಿಕ ಕೋಚಿಂಗ್‌ ಕಡೆ ಗಮನ ಹರಿ​ಸು​ವು​ದಾಗಿ ಹೇಳಿ​ದ್ದಾರೆ. ಇದೇ ವರ್ಷ ಜೂನ್‌ನಲ್ಲಿ ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌, ಐಪಿ​ಎಲ್‌ಗೆ ವಿದಾಯ ಘೋಷಿ​ಸಿದ ಯುವ​ರಾಜ್‌, ವಿದೇಶಿ ಲೀಗ್‌ಗಳಲ್ಲಿ ಪಾಲ್ಗೊ​ಳ್ಳು​ತ್ತಿ​ದ್ದಾರೆ. 

ಇದನ್ನೂ ಓದಿ: IPL ಟೂರ್ನಿಯಲ್ಲಿ ಅತೀ ಹೆಚ್ಚು ಬಾರಿ ತಂಡ ಬದಲಾಯಿಸಿದ ಐವರು ಕ್ರಿಕೆಟಿಗರು!

ಸದ್ಯ ಅಬು ಧಾಬಿ ಟಿ10 ಟೂರ್ನಿ​ಯಲ್ಲಿ ಆಡು​ತ್ತಿ​ರುವ ಯುವಿ, ‘ಮುಂದಿನ 2-3 ವರ್ಷಗಳ ಕಾಲ ಎರಡು ಮೂರು ತಿಂಗಳ ಕಾಲ ಕ್ರಿಕೆಟ್‌ ಆಡು​ತ್ತೇನೆ. ಉಳಿದ ಸಮ​ಯ​ದಲ್ಲಿ ವಿಶ್ರಾಂತಿ ಪಡೆ​ಯು​ತ್ತೇನೆ. ಆ ನಂತರ ಕೋಚ್‌ ಆಗ​ಬೇಕು ಎನ್ನುವ ಯೋಚನೆ ಇದೆ’ ಎಂದಿ​ದ್ದಾರೆ.

ಇದನ್ನೂ ಓದಿ: ಮತ್ತೆ ಆಯ್ಕೆ ಸಮಿತಿ ಕಾಲೆಳೆದ ಯುವರಾಜ್ ಸಿಂಗ್

2007 ಹಾಗೂ 2011ರ ವಿಶ್ವಕಪ್ ಟೂರ್ನಿ ಗೆಲುವಿನಲ್ಲಿ ಯುವರಾಜ್ ಸಿಂಗ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಭಾರತದ ಪರ 304 ಏಕದಿನ ಪಂದ್ಯ ಆಡಿರುವ ಯುವಿ, 8701 ರನ್ ಸಿಡಿಸಿದ್ದಾರೆ. 58 ಟಿ20 ಪಂದ್ಯದಿಂದ 1177 ರನ್ ಸಿಡಿಸಿದ್ದಾರೆ. ಇನ್ನು 40 ಟೆಸ್ಟ್ ಪಂದ್ಯದಿಂದ 1900 ರನ್ ಬಾರಿಸಿದ್ದಾರೆ.