ಬೆಂಗಳೂರು[ನ.26]: ಟಿ 10 ಲೀಗ್ ಟೂರ್ನಿಯಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಪ್ರತಿನಿಧಿಸಿದ ಮರಾಠ ಅರೇಬಿಯನ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಚಾಂಪಿಯನ್ ಆಟಗಾರ ಯುವಿ ಮತ್ತೊಂದು ಚಾಂಪಿಯನ್ ತಂಡದ ಭಾಗವಾಗಿದ್ದಾರೆ.

ಆ ದಿನಗಳನ್ನು ನೆನಪಿಸಿದ ಜಹೀರ್ ಖಾನ್ ಯಾರ್ಕರ್..!

ಹೌದು, ಈ ಮೊದಲು ಅಂಡರ್ 19 ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, ಏಕದಿನ ವಿಶ್ವಕಪ್, ಐಪಿಎಲ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಪ್ರತಿನಿಧಿಸಿದ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ನಿವೃತ್ತಿಯ ಬಳಿಕ ಇದೇ ಮೊದಲ ಬಾರಿಗೆ ಅಬುದಾಬಿ ಟಿ10 ಲೀಗ್ ಟೂರ್ನಿಯಲ್ಲಿ ಯುವಿ ಪಾಲ್ಗೊಂಡಿದ್ದರು. ಇದೀಗ ಯುವಿ ತಂಡವೇ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ತಾವೊಬ್ಬ ಲಕ್ಕಿ ಆಟಗಾರ ಎನ್ನುವುದನ್ನು ಎಡಗೈ ಬ್ಯಾಟ್ಸ್’ಮನ್ ಸಾಬೀತು ಮಾಡಿದ್ದಾರೆ.
ಟಾಸ್ ಗೆದ್ದ ಮರಾಠ ಅರೇಬಿಯನ್ಸ್ ತಂಡದ ನಾಯಕ ಡ್ವೇನ್ ಬ್ರಾವೋ ಹಾಲಿ ಚಾಂಪಿಯನ್ ತಂಡವಾದ ಡೆಕನ್ ಗ್ಲಾಡಿಯೇಟರ್ಸ್ ತಂಡವನ್ನು ಬ್ಯಾಟಿಂಗ್’ಗೆ ಆಹ್ವಾನಿಸಿದರು. ಗ್ಲಾಡಿಯೇಟರ್ಸ್ ತಂಡ ನಿಗದಿತ 10 ಓವರ್’ಗಳಲ್ಲಿ ಕೇವಲ 87 ರನ್ ಗಳಿಸಲಷ್ಟೇ ಶಕ್ತವಾಯಿತು. ಗುರಿ ಬೆನ್ನತ್ತಿದ ಮರಾಠ ಅರೇಬಿಯನ್ಸ್ ತಂಡ ಚಾಡ್ವಿಕ್ ವಾಲ್ಟನ್ ಸ್ಫೋಟಕ[26 ಎಸೆತಗಳಲ್ಲಿ 51 ರನ್] ಬ್ಯಾಟಿಂಗ್ ನೆರವಿನಿಂದ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. 

ಪ್ರಿಂಟೌಟ್ ಇಲ್ಲದ ಕಾರಣ ಪಂದ್ಯ ರದ್ದು; ಕ್ರಿಕೆಟ್ ಇತಿಹಾಸದಲ್ಲೇ ಮೊದಲು!

ಚಾಂಪಿಯನ್ ಪಟ್ಟ ಅಲಂಕರಿಸಿರುವುದು ನಿಜಕ್ಕೂ ಅದ್ಭುತ ಕ್ಷಣವಾಗಿದೆ. ಬಲಿಷ್ಠ ಎರಡು ತಂಡಗಳು ಫೈನಲ್’ನಲ್ಲಿ ಮುಖಾಮುಖಿಯಾಗಿದ್ದವು. ಇದು ನನಗೆ ಅದ್ಭುತ ಅನುಭವವಾಗಿದೆ. ನಾನು ಮುಂದಿನ ವರ್ಷವೂ ಟಿ10 ಲೀಗ್ ಆಡಲು ಎದುರು ನೋಡುತ್ತಿದ್ದೇನೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.