CWC 2023: ತುರ್ತು ಕಾರಣಕ್ಕೆ ತಂಡವನ್ನು ತೊರೆದು ಮುಂಬೈಗೆ ಪ್ರಯಾಣಿಸಿದ ವಿರಾಟ್‌ ಕೊಹ್ಲಿ!

ಟೀಂ ಇಂಡಿಯಾ ಭಾನುವಾರ ತಿರುವನಂತಪುರಕ್ಕೆ ಆಗಮಿಸಿದರೆ, ವಿರಾಟ್‌ ಕೊಹ್ಲಿ ಮಾತ್ರ ತಂಡದ ಜೊತೆ ಕಾಣಿಸಿಕೊಂಡಿಲ್ಲ. ಮೂಲಗಳ ಪ್ರಕಾರ, ಟೀಮ್‌ ಮ್ಯಾನೇಜ್‌ಮೆಂಟ್‌ನಿಂದ ಅನುಪತಿ ಪಡೆದು ಕೊಹ್ಲಿ ಮುಂಬೈಗೆ ಪ್ರಯಾಣಿಸಿದ್ದಾರೆ ಎನ್ನಲಾಗಿದೆ.
 

cricket world cup 2023  Virat Kohli flies back to Mumbai due to personal emergency san

ಮುಂಬೈ (ಅ.2): ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಬ್ಯಾಟಿಂಗ್‌ ಸೂಪರ್‌ ಸ್ಟಾರ್‌ ವಿರಾಟ್‌ ಕೊಹ್ಲಿ ತುರ್ತು ಕಾರಣಕ್ಕೆ ತಂಡವನ್ನು ತೊರೆದು ಮುಂಬೈಗೆ ಪ್ರಯಾಣ ಮಾಡಿದ್ದಾರೆ. ಭಾನುವಾರ ಇಡೀ ಭಾರತ ತಂಡ ತಿರುವನಂತರಪುರಕ್ಕೆ ಪ್ರಯಾಣ ಮಾಡಿದರೆ, ತಂಡದೊಂದಿಗೆ ವಿರಾಟ್‌ ಕೊಹ್ಲಿ ಮಾತ್ರ ಬಂದಿರಲಿಲ್ಲ. ಕೌಟುಂಬಿಕ ತುರ್ತುಪರಿಸ್ಥಿತಿಯಿಂದಾಗಿ ಮುಂಬೈಗೆ ತೆರಳಲು ಕೊಹ್ಲಿ ತಂಡದ ಮ್ಯಾನೇಜ್‌ಮೆಂಟ್‌ಗೆ ಅನುಮತಿ ಕೋರಿದ್ದರು. ಅದರಂತೆ ಅವರು ಮುಂಬೈಗೆ ಪ್ರಯಾಣ ಮಾಡಿದ್ದಾರೆ ಎನ್ನಲಾಗಿದೆ.  “ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯ ಮೂಲವೊಂದು ವಿರಾಟ್‌ ಕೊಹ್ಲಿ ವೈಯಕ್ತಿಕ ಕಾರಣಗಳಿಗಾಗಿ ಮುಂಬೈಗೆ ತೆರಳಿದ್ದಾರೆ ಎಂದು ಖಚಿತಪಡಿಸಿದ್ದಾರೆ. ವಿರಾಟ್ ಶೀಘ್ರದಲ್ಲೇ ತಂಡವನ್ನು ಸೇರಿಕೊಳ್ಳಲಿದ್ದಾರೆ, ”ಎಂದು ಕ್ರಿಕೆಟ್‌ ವೆಬ್‌ಸೈಟ್‌ ವರದಿ ಮಾಡಿದೆ.

ವರದಿಯ ಪ್ರಕಾರ, ಸೋಮವಾರ ತಿರುವನಂತಪುರದಲ್ಲಿ ಕೊಹ್ಲಿ ತಂಡವನ್ನು ಮತ್ತೆ ಸೇರಿಕೊಳ್ಳುವ ನಿರೀಕ್ಷೆಯಿದೆ, ಅಲ್ಲಿ ಭಾರತವು ಮಂಗಳವಾರ ನೆದರ್ಲ್ಯಾಂಡ್ಸ್ ವಿರುದ್ಧ ಎರಡನೇ ಮತ್ತು ಅಂತಿಮ ಅಭ್ಯಾಸ ಪಂದ್ಯವನ್ನು ಆಡಲಿದೆ. ಗುವಾಹಟಿಯಲ್ಲಿ ಭಾರೀ ಮಳೆಯಿಂದಾಗಿ ಇಂಗ್ಲೆಂಡ್ ವಿರುದ್ಧದ ಭಾರತದ ಮೊದಲ ಅಭ್ಯಾಸ ಪಂದ್ಯ ಒಂದೂ ಎಸೆತ ಕಾಣದೆ ರದ್ದಾಗಿತ್ತು.
ಗುವಾಹಟಿಯಿಂದ ನಾಲ್ಕು ಗಂಟೆಗಳ ಪ್ರಯಾಣದ ನಂತರ ಭಾರತೀಯ ತಂಡ ವಿಶೇಷ ವಿಮಾನದಲ್ಲಿ ತಿರುವನಂತಪುರಕ್ಕೆ ಆಗಮಿಸಿತು. ಮಂಗಳವಾರ ನಡೆಯಲಿರುವ ಭಾರತ ಮತ್ತು ನೆದರ್ಲೆಂಡ್ಸ್ ನಡುವಿನ ಅಭ್ಯಾಸ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ. ಈಗಾಗಲೇ ಮಳೆಯ ಕಾರಣದಿಂದಾಗಿ ತಿರುವನಂತಪುರದಲ್ಲಿ ನಡೆಯಬೇಕಿದ್ದ ಎರಡೂ ಅಭ್ಯಾಸ ಪಂದ್ಯಗಳು ರದ್ದಾಗಿದೆ.

ಏಕದಿನ ವಿಶ್ವಕಪ್ ಟೂರ್ನಿ ಬಿಸಿ ಏರಿಸಿದ ಹೇಡನ್ ಪುತ್ರಿ, ಬೋಲ್ಡ್ ಲುಕ್‌ಗೆ ಫ್ಯಾನ್ಸ್ ಫಿದಾ!

ಹವಾಮಾನವು ಅನುಮತಿಸಿದರೆ ಭಾರತವು ಸೋಮವಾರ ನೆಟ್ಸ್‌ ಅಭ್ಯಾಸವನ್ನು ಮಾಡಲಿದೆ ಎಂದು ವರದಿಯಾಗಿದೆ. "ಹವಾಮಾನ ಅನುಮತಿ ನೀಡಿದರೆ. ತಿರುವನಂತಪುರಂನ ಕೆಸಿಎ - ಸೇಂಟ್ ಕ್ಸೇವಿಯರ್ಸ್ ಕಾಲೇಜ್ ಕ್ರಿಕೆಟ್ ಮೈದಾನದಲ್ಲಿ ಮಧ್ಯಾಹ್ನ 2 ಗಂಟೆಯಿಂದ ಟೀಂ ಇಂಡಿಯಾ ನೆಟ್ಸ್‌ ಅಭ್ಯಾಸ ಮಾಡಲಿದೆ' ಎಂದು ಟೀಮ್‌ ತಿಳಿಸಿತ್ತು.

ನಟಿ ಅನುಷ್ಕಾ ಶರ್ಮಾ ಗರ್ಭಿಣಿ ರೂಮರ್‌ ಬೆನ್ನಲ್ಲೇ ವಿಡಿಯೋ ವೈರಲ್‌

Latest Videos
Follow Us:
Download App:
  • android
  • ios