Asianet Suvarna News Asianet Suvarna News

ನಟಿ ಅನುಷ್ಕಾ ಶರ್ಮಾ ಗರ್ಭಿಣಿ ರೂಮರ್‌ ಬೆನ್ನಲ್ಲೇ ವಿಡಿಯೋ ವೈರಲ್‌

ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟರ್‌ ವಿರಾಟ್ ಕೊಹ್ಲಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಸ್ಟಾರ್‌ ಕಪಲ್‌ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ವರದಿ ಬೆನ್ನಲ್ಲೇ ಅನುಷ್ಕಾ ಶರ್ಮಾ  ಇತ್ತೀಚಿಗಿನ ವಿಡಿಯೋ ವೈರಲ್ ಆಗುತ್ತಿದೆ.

Anushka Sharma asks paparazzi to not take her photos amid pregnancy rumours gow
Author
First Published Oct 2, 2023, 2:18 PM IST

ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟರ್‌ ವಿರಾಟ್ ಕೊಹ್ಲಿ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಸ್ಟಾರ್‌ ಕಪಲ್‌ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ವರದಿ ಬೆನ್ನಲ್ಲೇ ಅನುಷ್ಕಾ ಶರ್ಮಾ  ಇತ್ತೀಚಿಗಿನ ವಿಡಿಯೋ ವೈರಲ್ ಆಗುತ್ತಿದೆ. ನಟಿ ಅನುಷ್ಕಾ ಸಡಿಲವಾದ ಬಟ್ಟೆಗಳನ್ನು ಧರಿಸಿದ್ದು ತಮ್ಮ ಕಾರಿನ ಪ್ರಯಾಣಿಕರ ಮುಂದಿನ ಸಿಟಿನಲ್ಲಿ ಕುಳಿತಿದ್ದಾರೆ.

ಈ ವೀಡಿಯೊ ವೈರಲ್ ಆಗಲು ಕಾರಣವೆಂದರೆ ಅನುಷ್ಕಾ ಶರ್ಮಾ ತನ್ನ ಫೋಟೋ ತೆಗೆಯಲು ಪ್ರಯತ್ನಿಸುತ್ತಿರುವ ಕ್ಯಾಮರಾಗಳನ್ನು ನೋಡಿ ತನ್ನ ಫೋಟೋ ತೆಗೆಯದಂತೆ ಸೂಚಿಸಿರುವುದು. ಬಳಿಕ ಪಾಪರಾಜಿಗಳಿಗೆ ವಿದಾಯ ಹೇಳಿ ಸ್ಥಳದಿಂದ ಹೊರಟಿದ್ದಾರೆ.

ಭಾರತದ ಅತ್ಯಂತ ದುಬಾರಿ 75 ಕೋಟಿಯ ಬ್ಲಾಕ್‌ ಬ್ಲಸ್ಟರ್‌ ಬಜೆಟ್

ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿ ಅವರೊಂದಿಗೆ ಎರಡನೇ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿದೆ. ಅನುಷ್ಕಾ ತನ್ನ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಬಾರಿಯಂತೆ ಅವರು ಮುಂದಿನ ದಿನಗಳಲ್ಲಿ ಔಪಚಾರಿಕವಾಗಿ ಸುದ್ದಿಯನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ಸುದ್ದಿಯಾಗಿದೆ.

ಅನುಷ್ಕಾ ಶರ್ಮಾ  ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ.  ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದರಿಂದಲೇ ಕ್ಯಾಮಾರ ಕಣ್ಣಿನಿಂದ ದೂರವಿದ್ದಾರೆ. ಆಗಾಗ ಹೆರಿಗೆ ಆಸ್ಪತ್ರೆಗೆ ಬಂದು ಹೋಗುತ್ತಿದ್ದಾರೆ ಎಂದು ಮೂಲವು ಹೇಳಿದೆ.

ಸೂಪರ್‌ಸ್ಟಾರ್‌ ನಟನ ಪ್ರೀತಿ ಸಿಗದೆ ವೃತ್ತಿಜೀವನದ

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ 2017 ರಲ್ಲಿ ವಿವಾಹವಾದರು ಮತ್ತು 2021 ರ ಜನವರಿಯಲ್ಲಿ ಅವರ ಮಗಳು ವಮಿಕಾ ಕೊಹ್ಲಿಯನ್ನು ಸ್ವಾಗತಿಸಿದರು. ಕೆಲಸದ ಮುಂಭಾಗದಲ್ಲಿ, ಅನುಷ್ಕಾ ಶರ್ಮಾ ಶೀಘ್ರದಲ್ಲೇ ಭಾರತದ ಮಾಜಿ ಕ್ರಿಕೆಟಿಗ ಜೂಲನ್ ಗೋಸ್ವಾಮಿ ಅವರ ಜೀವನಚರಿತ್ರೆಯಾದ ಚಕ್ಡಾ'ಎಕ್ಸ್‌ಪ್ರೆಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ 2017 ರಲ್ಲಿ ವಿವಾಹವಾದರು ಮತ್ತು 2021 ರ ಜನವರಿಯಲ್ಲಿ ಅವರಿಗೆ ವಮಿಕಾ ಎಂಬ ಮಗಳು ಜನಸಿದಳು. ಅನುಷ್ಕಾ ಶರ್ಮಾ ಅವರ ನಟನೆಯ  ಭಾರತದ ಮಾಜಿ ಕ್ರಿಕೆಟಿಗ ಜೂಲನ್ ಗೋಸ್ವಾಮಿ ಅವರ ಜೀವನಚರಿತ್ರೆಯಾದ ಚಕ್ಡಾ ಎಕ್ಸ್‌ಪ್ರೆಸ್‌ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

Follow Us:
Download App:
  • android
  • ios