12 ಸಾವಿರ ಡಾಕ್ಟರ್‌ಗಳ ಜತೆ ಸಮಾಲೋಚನೆ ನಡೆಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್
ಕೊರೋನಾ ಭೀತಿ, ಲಾಕ್‌ಡೌನ್ ನಡುವೆ ಸಚಿನ್ ತೆಂಡುಲ್ಕರ್ 12 ಸಾವಿರದ ವೈದ್ಯರ ಜತೆ ಮಾತುಕತೆ ನಡೆಸಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಮುಂಬೈ(ಏ.13): ತಮ್ಮ ಅನುಭವ ಹಾಗೂ ಜ್ಞಾನವನ್ನು ಹಂಚಿಕೊಳ್ಳುವ ವಿಚಾರದಲ್ಲಿ ಸದಾ ತುಡಿಯುವ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಸ್ಪೋರ್ಟ್ಸ್ ಇಂಜುರಿ ಕುರಿತಂತೆ ದೇಶಾದ್ಯಂತ ಇರುವ ಸುಮಾರು 12 ಸಾವಿರ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. 2 ದಶಕಗಳ ಕಾಲ ದೀರ್ಘಕಾಲಿಕ ಕ್ರಿಕೆಟ್ ವೃತ್ತಿಜೀವನದಲ್ಲಿ ಸಚಿನ್ ತೆಂಡುಲ್ಕರ್ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದಾರೆ. ಅದರಲ್ಲೂ ಎಲ್ಬೋ ಇಂಜುರಿಗೆ ಸಾಕಷ್ಟು ಬಾರಿ ತುತ್ತಾಗಿದ್ದಾರೆ.
50 ಲಕ್ಷ ರೂ ದೇಣಿಗೆ ಬಳಿಕ 5 ಸಾವಿರ ಕುಟುಂಬಕ್ಕೆ ತಿಂಗಳ ರೇಶನ್ ನೀಡಿದ ತೆಂಡುಲ್ಕರ್!
ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಎರಡು ಮಾದರಿಯ ಕ್ರಿಕೆಟ್‌ನಲ್ಲಿ(ಟೆಸ್ಟ್ 200, ಏಕದಿನ 463) ಗರಿಷ್ಠ ಪಂದ್ಯಗಳನ್ನಾಡಿದ ಅನುಭವ ಇರುವ ಸಚಿನ್ ತೆಂಡುಲ್ಕರ್ ಶನಿವಾರ(ಏ.11) ಲಾಕ್‌ಡೌನ್ ಸಂದರ್ಭದಲ್ಲಿ ವೆಬಿನಾರ್ಸ್ ಮೂಲಕ 12,000 ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು. ಖ್ಯಾತ ಆರ್ಥೋಪೆಡಿಕ್ ಸರ್ಜನ್ ಡಾಕ್ಟರ್ ಸುಧೀರ್ ವಾರಿಯರ್ ಮಾರ್ಗದರ್ಶನದಲ್ಲಿ ದೇಶಾದ್ಯಂತ ಇರುವ ಯುವ ಡಾಕ್ಟರ್‌ಗಳಿಗೆ ಅನುಕೂಲವಾಗಲು ಸ್ಪೋರ್ಟ್ಸ್ ಇಂಜುರಿ ಕುರಿತಂತೆ ವೆಬಿನಾರ್ ಸೆಷನ್ ಆಯೋಜಿಸಿದ್ದರು.
ಸಾರ್ವಕಾಲಿಕ ಶ್ರೇಷ್ಠ ತಂಡ ಪ್ರಕಟಿಸಿದ ಶಾಹಿದ್ ಅಫ್ರಿದಿ, ಏಕೈಕ ಭಾರತೀಯನಿಗೆ ಸ್ಥಾನ..!
ವೈದ್ಯರು ತಮಗೆ ನೀಡಿದ ಸೇವೆಗೆ ತಾವೆಂದು ಕೃತಜ್ಞರಾಗಿರುವುದಾಗಿ 46 ವರ್ಷದ ಸಚಿನ್ ತೆಂಡುಲ್ಕರ್ ಹೇಳಿದ್ದರು. ಇದೇ ವೇಳೆ ಸಾಮಾನ್ಯ ಜನರು ಎದುರಿಸುವ ಮೂಳೆ ಸಮಸ್ಯೆಗೂ ಒಬ್ಬ ಅಥ್ಲೀಟ್ ಎದುರಿಸುವ ಆರ್ಥೋಪೆಡಿಕ್ ಸಮಸ್ಯೆಗೂ ಇರುವ ವ್ಯತ್ಯಾಸಗಳೇನು ಎನ್ನುವುದನ್ನು ಸಚಿನ್ ಅರ್ಥೈಸಿದರು ಎಂದು ಮೂಲಗಳು ತಿಳಿಸಿವೆ.
ಈ ಸೆಷನ್ ನನ್ನು ಡಾಕ್ಟರ್ ಸುಧೀರ್ ವಾರಿಯರ್ಸ್ ನಿರ್ವಹಿಸಿದರು. ಈ ವೇಳೆ ಟೀಂ ಇಂಡಿಯಾ ಹಾಗೂ ಮುಂಬೈ ಇಂಡಿಯನ್ಸ್ ಪರ ಫಿಸಿಯೋ ಥೆರಪಿಸ್ಟ್ ಆಗಿ ಕಾರ್ಯ ನಿರ್ವಹಿಸುವ ಡಾಕ್ಟರ್ ನಿತಿನ್ ಪಟೇಲ್ ಹಾಜರಿದ್ದರು.
ಸದ್ಯ ಕೊರೋನಾ ವೈರಸ್ ಭೀತಿಯಿಂದಾಗಿ ದೇಶಾದ್ಯಂತ 21 ದಿನಗಳ ಕಾಲ ಲಾಕ್‌ಡೌನ್ ಘೋಷಣೆಯಾಗಿದೆ. ಹೀಗಾಗಿ ಎಲ್ಲಾ ಕ್ರೀಡಾ ಚಟುವಟಿಕೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ. 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೂಡಾ ಏಪ್ರಿಲ್ 15ರವರೆಗೆ ಮುಂದೂಡಲಾಗಿದೆಯಾದರೂ, ಸದ್ಯಕ್ಕೆ ಟೂರ್ನಿ ನಡೆಯುವುದು ಅನುಮಾನ ಎನಿಸಿದೆ.
"