ಕಾಮನ್‌ವೆಲ್ತ್ ಗೇಮ್ಸ್ ಮಹಿಳಾ ಕ್ರಿಕೆಟ್‌ನಲ್ಲಿಂದು ಅತ್ಯಂತ ರೋಚಕ ಪಂದ್ಯ. ಭಾರತ ಹಾಗೂ ಪಾಕಿಸ್ತಾನ ಹೋರಾಟಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಪಂದ್ಯ ಆರಂಭಕ್ಕೂ ಮುನ್ನವೇ ಮಳೆ ವಕ್ಕರಿಸಿದೆ. ಹೀಗಾಗಿ ಪಂದ್ಯ ಆರಂಭ ವಿಳಂಬವಾಗಲಿದೆ.
ಬರ್ಮಿಂಗ್‌ಹ್ಯಾಮ್(ಜು.31): ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾ ಕೂಟದಲ್ಲಿ ಇದೇ ಮೊದಲ ಬಾರಿಗೆ ಕ್ರಿಕೆಟ್ ಸೇರಿಸಲಾಗಿದೆ. ಈಗಾಗಲೇ ನಾಲ್ಕು ಪಂದ್ಯಗಳು ನಡೆದಿದೆ. ಆದರೆ ಇಂದಿನ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೋರಾಟದ ಮೇಲೆ ಎಲ್ಲರೂ ಕಣ್ಣಿಟ್ಟಿದ್ದಾರೆ. ಈ ರೋಚಕ ಹೋರಾಟ ಕೊಂಚ ವಿಳಂಬವಾಗಲಿದೆ. ಕಾರಣ ಪಂದ್ಯ ಆರಂಭಕ್ಕೂ ಮುನ್ನವೇ ಮಳೆ ವಕ್ಕರಿಸಿದೆ. ಹೀಗಾಗಿ ಪಂದ್ಯದ ಟಾಸ್ ವಿಳಂಬವಾಗಿದೆ. ಆರಂಭಿಕ ಪಂದ್ಯದಲ್ಲಿ ಮುಗ್ಗರಿಸಿರುವ ಭಾರತ ಮಹಿಳಾ ತಂಡ ಇಂದು ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡುವ ತವಕದಲ್ಲಿದೆ. ಇತ್ತ ಪಾಕಿಸ್ತಾನ ಮಹಿಳಾ ತಂಡ ಕೂಡ ಮೊದಲ ಪಂದ್ಯದಲ್ಲಿ ಸೋಲು ಕಂಡಿದೆ. ಬಾರ್ಬಡೋಸ್ ವಿರುದ್ಧ ಪಾಕಿಸ್ತಾನ ಸೋಲು ಅನುಭವಿಸಿದೆ. ಹೀಗಾಗಿ ಭಾರತ ಹಾಗೂ ಪಾಕಿಸ್ತಾನ ಎರಡೂ ತಂಡಗಳು ಗೆಲುವಿನ ನಿರೀಕ್ಷೆಯಲ್ಲಿದೆ.
ಭಾರತ ಮಹಿಳಾ ತಂಡ:
ಸ್ಮೃತಿ ಮಂಧಾನ, ಶೆಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್(ನಾಯಕಿ), ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್, ಮೇಘನಾ ಸಿಂಗ್, ರೇಣುಕಾ ಸಿಂಗ್, ಸ್ನೇಹ ರಾಣಾ, ಸಬ್ಬಿನೇನಿ ಮೇಘನಾ, ಪೂಜಾ ವಸ್ತ್ರಾತಿಯಾ
ಜಿಂಜಾಬ್ವೆ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟ, ಧವನ್ ನಾಯಕ, ಕೊಹ್ಲಿಗೆ ರೆಸ್ಟ್!
ಪಾಕಿಸ್ತಾನ ಮಹಿಳಾ ತಂಡ:
ಇರಾಮ್ ಜಾವೇದ್, ಮುನೀಬಾ ಅಲಿ, ಒಮೈಮಾ ಸೊಹೈಲ್, ಬಿಸ್ಮಾ ಮರೂಫ್(ನಾಯಕಿ), ನಿದಾ ದಾರ್, ಅಲಿಯಾ ರಿಯಾಜ್, ಆಯೇಶಾ ನಸೀಮ್, ಫಾತಿಮಾ ಸನಾ, ತುಬಾ ಹಸನ್, ಡಯಾನಾ ಬೇಗ್, ಅನಮ್ ಅಮೀನ್, ಐಮನ್ ಅನ್ವರ್, ಕೈನಾತ್ ಇಮ್ತಿಯಾಜ್, ಸಾದಿಯಾ ಇಕ್ಬಾಲ್, ಗುಲ್ ಫಿರೋಜಾ
ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿದ್ದ ಭಾರತ
ವೇಗಿ ರೇಣುಕಾ ಸಿಂಗ್ ತಮ್ಮ ವೃತ್ತಿಬದುಕಿನ ಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರಿದರೂ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಗೆಲುವಿನ ಆರಂಭ ಪಡೆಯಲು ಸಾಧ್ಯವಾಗಿರಲಿಲ್ಲ. ಆಸ್ಪ್ರೇಲಿಯಾ ವಿರುದ್ಧ ‘ಎ’ ಗುಂಪಿನ ಪಂದ್ಯದಲ್ಲಿ ಭಾರತ 3 ವಿಕೆಟ್ ಸೋಲು ಕಂಡಿತ್ತು. ಗೆಲ್ಲಲು 155 ರನ್ ಗುರಿ ಬೆನ್ನತ್ತಿದ್ದ ಆಸ್ಪ್ರೇಲಿಯಾ 49 ರನ್‌ಗೆ 5 ವಿಕೆಟ್ ಕಳೆದುಕೊಂಡಿತು. ರೇಣುಕಾ 4 ಓವರಲ್ಲಿ 18 ರನ್‌ಗೆ 4 ಪ್ರಮುಖ ವಿಕೆಟ್ ಕಬಳಿಸಿದರು. ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ಆಶ್ಲೆ ಗಾಡ್ರ್ನರ್ ಆಘಾತ ನೀಡಿದರು. 35 ಎಸೆತಗಳಲ್ಲಿ ಔಟಾಗದೆ 52 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಮೊದಲು ಗ್ರೇಸ್ ಹ್ಯಾರಿಸ್(37) ಜೊತೆ 51 ರನ್ ಜೊತೆಯಾಟದಲ್ಲಿ ಭಾಗಿಯಾದ ಗಾಡ್ರ್ನರ್, ಬಳಿಕ ಅಲಾನ ಕಿಂಗ್(18) ಜೊತೆ 47 ರನ್ ಜೊತೆಯಾಟವಾಡಿದರು. ಇನ್ನೂ ಒಂದು ಓವರ್ ಬಾಕಿ ಇರುವಂತೆ ಆಸೀಸ್ ಜಯಗಳಿಸಿತು.
Commonwealth Games 2022: ಕಂಚಿನ ಪದಕ ಜಯಿಸಿದ ಕನ್ನಡಿಗ ಗುರುರಾಜ ಪೂಜಾರಿ
ಹರ್ಮನ್ ಅರ್ಧಶತಕ: ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಶಫಾಲಿ ಉತ್ತಮ ಆರಂಭ ನೀಡಿದರು. 33 ಎಸೆತಗಳಲ್ಲಿ 48 ರನ್ ಸಿಡಿಸಿದರು. ಆದರೆ ನಾಯಕಿ ಹರ್ಮನ್‌ಪ್ರೀತ್ ಕೌರ್‌ರ ಆಟ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾಯಿತು. 34 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್‌ನೊಂದಿಗೆ 52 ರನ್ ಗಳಿಸಿದ ಹರ್ಮನ್‌ಪ್ರೀತ್, ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳಾ ಟಿ20ಯಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದ ದಾಖಲೆ ಬರೆದರು. ಜೆಸ್ ಜೊನಾಸ್ಸೆನ್ 4 ವಿಕೆಟ್ ಕಬಳಿಸಿದರು. ಸ್ಕೋರ್: ಭಾರತ 20 ಓವರಲ್ಲಿ 154/8(ಹರ್ಮನ್‌ಪ್ರೀತ್ 52, ಶಫಾಲಿ 48, ಜೊನಾಸ್ಸೆನ್ 4-22), ಆಸ್ಪ್ರೇಲಿಯಾ 19 ಓವರಲ್ಲಿ 157/7(ಗಾಡ್ರ್ನರ್ 52, ಹ್ಯಾರಿಸ್ 37, ರೇಣುಕಾ 4-18)
