ಜಿಂಬಾಬ್ವೆ ವಿರುದ್ಧ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ಮೂಲಕ ಭಾರತದ ಗೆಲುವಿಗೆ ನರೆವಾಗಿದ್ದಾರೆ. ಆದರೆ ಸರಣಿ ಗೆಲುವಿನ ಬೆನ್ನಲ್ಲೇ ಕೋಚ್ ವಿವಿಎಸ್ ಲಕ್ಷ್ಮಣ್, ಯುವ ಕ್ರಿಕೆಟಿಗ ಸೂರ್ಯವಂಶಿಗೆ ವಾರ್ನಿಂಗ್ ನೀಡಿದ್ದಾರೆ.
ಹರಾರೆ (ಜು.27) ಜಿಂಬಾಬ್ವೆ ವಿರುದ್ದದ ಟಿ20 ಸರಣಿಯನ್ನು ಭಾರತ 3-0 ಅಂತರದಲ್ಲಿ ಗೆದ್ದುಕೊಂಡಿದೆ. ಸರಣಿಯಲ್ಲಿ ವೈಭವ್ ಸೂರ್ಯವಂಶಿ ದಿಟ್ಟ ಹೋರಾಟ ನೀಡಿದ್ದರು. 3ನೇ ಪಂದ್ಯದಲ್ಲಿ 81 ರನ್ ಸಿಡಿಸಿ ಗೆಲುವಿನ ರೂವಾರಿಯಾಗಿದ್ದರು. ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಅಬ್ಬರಕ್ಕೆ ಕೋಚ್ ವಿವಿಎಸ್ ಲಕ್ಷ್ಮಣ್ ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಯುವ ಕ್ರಿಕೆಟಿಗನಿಗೆ ಕೋಚ್ ಮಹತ್ವದ ಸಂದೇಶ ನೀಡಿದ್ದಾರೆ.
ವೈಭವ್ ಸೂರ್ಯವಂಶಿಗೆ ಕೋಚ್ ಹೇಳಿದ್ದೇನು?
ವೈಭವ್ ಸೂರ್ಯವಂಶಿ ಪ್ರತಿಭೆ, ದಿಟ್ಟ ಹೋರಾಟ ನೀಡುವ ಮನೋಭಾವ ಎಲ್ಲವನ್ನು ವಿವಿಎಸ್ ಲಕ್ಷ್ಣಣ್ ಶ್ಲಾಘಿಸಿದ್ದಾರೆ. ಆದರೆ ವೈಭವ್ ಸೂರ್ಯವಂಶಿ ಫಿಟ್ನೆಸ್ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ. ಸೂರ್ಯವಂಶಿ ಕೇವಲ 15 ವಯಸ್ಸಿನಲ್ಲೇ ಹಿರಿಯ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಮಾತ್ರವಲ್ಲ, ಮೆಚ್ಯುರಿಟಿ ಮೂಲಕ ಬ್ಯಾಟಿಂಗ್ ಮಾಡಿದ್ದಾರೆ. ಹೀಗಾಗಿ ಯುವ ಕ್ರಿಕೆಟಿಗನ ಬ್ಯಾಟಿಂಗ್ ಕುರಿತು ಎರಡು ಮಾತಿಲ್ಲ. ಆದರೆ ಫಿಟ್ನೆಸ್ ಅತ್ಯಂತ ಪ್ರಮುಖ ವಿಚಾರ. ಸೂರ್ಯವಂಶಿ ತಮ್ಮ ಫಿಟ್ನೆಸ್ ಕುರಿತು ಹೆಚ್ಚಿನ ಗಮನ ಹರಿಸಬೇಕು ಎಂದು ಎಚ್ಚರಿಸಿದ್ದಾರೆ.
ವಯಸ್ಸು ಗಮನದಲ್ಲಿಡಬೇಕು
ಪಂದ್ಯದ ನಡುವೆ ಎದುರಾಗುವ ಸವಾಲು, ಪರಿಸ್ಥಿತಿಯನ್ನು ವೈಭವ್ ಸೂರ್ಯವಂಶಿ ಉತ್ತಮವಾಗಿ ಅರ್ಥಮಾಡಿಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಮುಂದಿನ ಟೂರ್ನಿಗಳಲ್ಲಿ ವೈಭವ್ ಸೂರ್ಯವಂಶಿ ತಮ್ಮ ಫಿಟ್ನೆಸ್ ಮತ್ತಷ್ಟು ಸುಧಾರಿಸಿಕೊಳ್ಳಬೇಕು. ಫಿಟ್ನೆಸ್ ಅತ್ಯಂತ ಪ್ರಮುಖ ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ. ಸದ್ಯ ವೈಭವ್ ಸೂರ್ಯವಂಶಿ ಕೇವಲ 15ನೇ ವಯಸ್ಸಿನ ಹುಡುಗ. ಹೀಗಾಗಿ ಆತನ ವಯಸ್ಸನ್ನು ಗಮನದಲ್ಲಿಡಬೇಕು ಎಂದಿದ್ದಾರೆ.
2024ರ ಅಂಡರ್ 19 ವಿಶ್ವಕಪ್ ಟೂರ್ನಿಗೂ ಮೊದಲು ವೈಭವ್ ಸೂರ್ಯವಂಶಿಯನ್ನು ನಾವು ಗಮನಿಸಿದ್ದೇವು. ಆತನ ಟ್ಯಾಲೆಂಟ್, ಕಿರಿಯ ವಯಸ್ಸಿನಲ್ಲಿ ತೋರಿದ ಮೆಚ್ಯುರಿಟೆಗೆ ನಾವು ಬೆರಗಾಗಿದ್ದೆವು. ಸರಿಸುಮೂರು ಎರಡೂವರೆ ವರ್ಷಗಳ ಮೊದಲು ವಿಜಯವಾಡದಲ್ಲಿ ನಡೆದ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ಪಾಲ್ಗೊಂಡಿದ್ದರು. ಉತ್ತಮ ಪ್ರದರ್ಶನ ನೀಡಿದ ಯುವ ಕ್ರಿಕೆಟಿಗನನ್ನು ಕಿರಿಯರ ತಂಡಕ್ಕೆಆಯ್ಕೆ ಮಾಡಲಾಗಿತ್ತು ಎಂದು ಕೋಚ್ ಹೇಳಿದ್ದಾರೆ.


