ಟೀಂ ಇಂಡಿಯಾ ಆಟಗಾರ ವಿರಾಟ್‌ ಕೊಹ್ಲಿ ಹಾಗೂ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ, ರಿಯಲ್‌ ಎಸ್ಟೇಟ್‌ ನಲ್ಲಿ ಹೂಡಿಕೆ ಮುಂದುವರೆಸಿದ್ದಾರೆ. ಆಸ್ತಿ ಖರೀದಿಗೆ ಅವರು ಆಸಕ್ತಿ ತೋರುತ್ತಿದ್ದಾರೆ. ಈಗ ಮುಂಬೈನಲ್ಲಿ ಮತ್ತೊಂದು ಅಪಾರ್ಟ್‌ಮೆಂಟ್‌ ಖರೀದಿ ಮಾಡಿದ್ದಾರೆ.

ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಆಸ್ತಿ ಖರೀದಿ ಮುಂದುವರೆದಿದೆ. ಈಗ ಮುಂಬೈನ ವರ್ಸೋವಾ ಪ್ರದೇಶದಲ್ಲಿ ಹೊಸ ಐಷಾರಾಮಿ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ.

ಅಪಾರ್ಟ್‌ಮೆಂಟ್‌ ಬೆಲೆ ಎಷ್ಟು? 

ವಿರುಷ್ಕಾ ಮುಂಬೈನ ವರ್ಸೋವಾದಲ್ಲಿ ಅಪಾರ್ಟ್‌ಮೆಂಟ್‌ ಖರೀದಿ ಮಾಡಿದ್ದು, ವರದಿಗಳ ಪ್ರಕಾರ, ಈ ಅಪಾರ್ಟ್ಮೆಂಟ್ನ ಬೆಲೆ 18.29 ಕೋಟಿ ರೂಪಾಯಿ. ಇದು ವರ್ಸೋವಾದ ಗೋದ್ರೆಜ್ ಸ್ಕೈಶೋರ್ ಕಟ್ಟಡದ ಮೇಲಿನ ಮಹಡಿಯಲ್ಲಿದೆ. ಸುಮಾರು 2,644 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಮನೆಯಲ್ಲಿ 316 ಚದರ ಅಡಿ ವಿಶೇಷ ತೆರೆದ ಜಾಗ ಹಾಗೂ ಮೂರು ಕಾರುಗಳ ಪಾರ್ಕಿಂಗ್ ಸೌಲಭ್ಯವೂ ಇದೆ.

https://kannada.asianetnews.com/gallery/cricket-sports/who-is-suryansh-shedge-suryansh-shedge-profile-and-his-cricket-journey-gkn-veiz6u7

ಆಸ್ತಿಯ ನೋಂದಣಿ ಜುಲೈ 21, 2026ರಂದು ನಡೆದಿದೆ. ಇದಕ್ಕಾಗಿ 1.09 ಕೋಟಿ ಸ್ಟಾಂಪ್ ಡ್ಯೂಟಿ ಹಾಗೂ 30 ಸಾವಿರ ನೋಂದಣಿ ಶುಲ್ಕವನ್ನು ದಂಪತಿ ಪಾವತಿಸಿದ್ದಾರೆ. ಒಂದು ಚದರ ಅಡಿಗೆ ಸುಮಾರು 69,159 ದರದಲ್ಲಿ ಈ ವ್ಯವಹಾರ ನಡೆದಿರುವುದಾಗಿ ವರದಿಯಾಗಿದೆ.

ವರ್ಸೋವಾ ಈಗ ಮುಂಬೈನ ಪ್ರಮುಖ ಐಷಾರಾಮಿ ವಸತಿ ಪ್ರದೇಶಗಳಲ್ಲಿ ಒಂದಾಗಿ ಬೆಳೆಯುತ್ತಿದೆ. ಮನರಂಜನಾ ಕ್ಷೇತ್ರದ ಸಮೀಪದಲ್ಲಿರುವುದು ಹಾಗೂ ಪ್ರಸ್ತಾವಿತ ಮುಂಬೈ ಕೋಸ್ಟಲ್ ರೋಡ್ ನಾರ್ತ್ ಯೋಜನೆಯಿಂದ ಈ ಭಾಗದ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಇದೇ ಕಾರಣಕ್ಕೆ ಸೆಲೆಬ್ರಿಟಿಗಳು ಮತ್ತು ಶ್ರೀಮಂತ ಹೂಡಿಕೆದಾರರು ಈ ಪ್ರದೇಶದಲ್ಲಿ ಮನೆ ಖರೀದಿಸಲು ಆಸಕ್ತಿ ತೋರಿಸುತ್ತಿದ್ದಾರೆ.

ಅಲಿಬಾಗ್‌ ನಲ್ಲಿ ಆಸ್ತಿ ಖರೀದಿ

ಇದಕ್ಕೂ ಮೊದಲು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅಲಿಬಾಗ್ನ ಜಿರಾಡ್ ಗ್ರಾಮದಲ್ಲಿ 37.86 ಕೋಟಿ ಮೌಲ್ಯದ ಐದು ಎಕರೆಗೂ ಹೆಚ್ಚು ಭೂಮಿಯನ್ನು ಖರೀದಿಸಿದ್ದರು. 2022ರಲ್ಲೂ ಇದೇ ಪ್ರದೇಶದಲ್ಲಿ ಫಾರ್ಮ್ಹೌಸ್ ನಿರ್ಮಾಣಕ್ಕಾಗಿ ಭೂಮಿ ಖರೀದಿಸಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ಅಲಿಬಾಗ್ನಲ್ಲಿ ಇದು ಅವರ ಎರಡನೇ ದೊಡ್ಡ ಹೂಡಿಕೆಯಾಗಿದೆ.

https://kannada.asianetnews.com/cricket-sports/who-won-yesterday-india-vs-zimbabwe-3rd-t20i-in-harare-kvn/articleshow-ngkrye2

ಅದಕ್ಕೂ ಮೊದಲು ವಿರಾಟ್ ಕೊಹ್ಲಿ ಮುಂಬೈನ ಪ್ರತಿಷ್ಠಿತ ವರ್ಲಿ ಪ್ರದೇಶದಲ್ಲಿ ಸಮುದ್ರದ ನೋಟವಿರುವ ಐಷಾರಾಮಿ ಅಪಾರ್ಟ್ಮೆಂಟ್ನ್ನು ಸುಮಾರು 34 ಕೋಟಿಗೆ ಬುಕ್ ಮಾಡಿದ್ದರು. 2016ರಲ್ಲಿ ಬುಕ್ ಮಾಡಲಾಗಿದ್ದ ಈ ನಾಲ್ಕು ಬೆಡ್ರೂಮ್ಗಳ ಮನೆ ಸುಮಾರು 7,171 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಕಟ್ಟಡದ 35ನೇ ಮಹಡಿಯಲ್ಲಿ ಇತ್ತು. ಆದರೆ ಬಳಿಕ ಆ ಫ್ಲಾಟ್ ಬುಕ್ಕಿಂಗ್ ಅನ್ನು ವಿರಾಟ್ ಕೊಹ್ಲಿ ರದ್ದುಮಾಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿತ್ತು.