* ಟಿ20 ವಿಶ್ವಕಪ್‌ ಕ್ರಿಕೆಟ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ತಂಡ ಪ್ರಕಟ* ಫಾಫ್‌ ಡು ಪ್ಲೆಸಿಸ್‌, ಇಮ್ರಾನ್ ತಾಹಿರ್, ಕ್ರಿಸ್‌ ಮೋರಿಸ್‌ಗಿಲ್ಲ ತಂಡದಲ್ಲಿ ಸ್ಥಾನ* ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 17ರಿಂದ ಆರಂಭ

ಜೊಹಾನ್ಸ್‌ಬರ್ಗ್‌(ಸೆ.09): ಯುಎಇನಲ್ಲಿ ಅಕ್ಟೋಬರ್ 17ರಿಂದ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ 15 ಆಟಗಾರರನ್ನೊಳಗೊಂಡ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಪ್ರಕಟವಾಗಿದ್ದು, ಫಾಫ್‌ ಡು ಪ್ಲೆಸಿಸ್ ಸೇರಿದಂತೆ ಕೆಲವು ತಾರಾ ಆಟಗಾರರನ್ನು ತಂಡದಿಂದ ಕೈಬಿಡಲಾಗಿದೆ.

ಫಾಫ್ ಡು ಪ್ಲೆಸಿಸ್‌ ಕಳೆದ ಫೆಬ್ರವರಿಯಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು, ಇದೇ ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ತಾವು ಲಭ್ಯವಿರುವುದಾಗಿ ಡು ಪ್ಲೆಸಿಸ್ ಖಚಿತಪಡಿಸಿದ್ದರು. ಆದರೆ ಕಳೆದ ಡಿಸೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ದ ಕೊನೆಯ ಬಾರಿಗೆ ಕಣಕ್ಕಿಳಿದಿದ್ದ ಡು ಪ್ಲೆಸಿಸ್‌ ಇದಾದ ಬಳಿಕ ಹರಿಣಗಳ ತಂಡದ ಪರ ಯಾವುದೇ ಸೀಮಿತ ಓವರ್‌ಗಳ ಪಂದ್ಯವನ್ನಾಡಿರಲಿಲ್ಲ. ಇನ್ನು ಶ್ರೀಲಂಕಾ ವಿರುದ್ದದ ಸೀಮಿತ ಓವರ್‌ಗಳ ಸರಣಿಯಿಂದಲೂ ಡು ಪ್ಲೆಸಿಸ್‌ ಅವರನ್ನು ಕೈಬಿಡಲಾಗಿತ್ತು. 

Scroll to load tweet…

T20 World Cup ಟೂರ್ನಿಗೆ ಬಲಿಷ್ಠ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟ..!

ಇನ್ನು ಫಾಫ್ ಡು ಪ್ಲೆಸಿಸ್‌ ಮಾತ್ರವಲ್ಲದೇ ಅನುಭವಿ ಲೆಗ್‌ ಸ್ಪಿನ್ನರ್ ಇಮ್ರಾನ್ ತಾಹಿರ್ ಹಾಗೂ ಸ್ಟಾರ್ ಆಲ್ರೌಂಡರ್ ಕ್ರಿಸ್‌ ಮೋರಿಸ್‌ ಕೂಡಾ ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಈ ಇಬ್ಬರು ಆಟಗಾರರು 2019ರ ಏಕದಿನ ವಿಶ್ವಕಪ್ ಟೂರ್ನಿ ಬಳಿಕ ಹರಿಣಗಳ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. 

Scroll to load tweet…

ದಕ್ಷಿಣ ಆಫ್ರಿಕಾ ತಂಡ ಹೀಗಿದೆ ನೋಡಿ

ತೆಂಬಾ ಬವುಮಾ(ನಾಯಕ), ಕೇಶವ್ ಮಹರಾಜ್‌, ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ಬಿಜೋರ್ನ್‌ ಫೋರ್ಟೈನ್‌, ರೀಜಾ ಹೆಂಡ್ರಿಕ್ಸ್‌, ಹೆನ್ರಿಚ್ ಕ್ಲಾಸೆನ್‌, ಏಯ್ಡನ್ ಮಾರ್ಕ್‌ರಮ್‌, ಡೇವಿಡ್ ಮಿಲ್ಲರ್, ಮುಲ್ಡರ್, ಲುಂಗಿ ಎಂಗಿಡಿ, ಏನ್ರಿಚ್‌ ನೊಕಿಯೇ, ಡ್ವೇಯ್ನ್ ಪ್ರಿಟೋರಿಯಸ್‌, ಕಗಿಸೋ ರಬಾಡ, ತಬ್ರಿಜ್ ಸಂಶಿ, ರಾಸ್ಸಿ ವ್ಯಾನ್ ಡರ್ ಡುಸೇನ್.

ಮೀಸಲು ಆಟಗಾರರು:
ಆಂಡಿಲೇ ಫೆಲಿಕ್ವಿಯೋ, ಲಿಜಾಡ್‌ ವಿಲಿಯಮ್ಸ್‌, ಜಾರ್ಜ್ ಲಿಂಡೆ.