Asianet Suvarna News Asianet Suvarna News

Casteist BCCI Trend: ಜಾತಿ ನೋಡಿ ಕ್ರಿಕೆಟಿಗರ ಆಯ್ಕೆ, ಬಿಸಿಸಿಐ ಮೇಲೆ ಆರೋಪ!

ಕೊನೆಗೂ ಬಿಸಿಸಿಐ ವಿಚಾರದಲ್ಲಿ ಇಂಥದ್ದೊಂದು ಅಪವಾದ ಕೇಳಿ ಬಂದಿದೆ. ಜಾತಿ ನೋಡಿ ಬಿಸಿಸಿಐ ತನ್ನ ಆಟಗಾರರನ್ನು ಆಯ್ಕೆ ಮಾಡುತ್ತದೆ ಎನ್ನುವ ಆರೋಪವನ್ನಿ ಅಭಿಮಾನಿಗಳು ಮಾಡಿದ್ದಾರೆ. ಸೂರ್ಯಕುಮಾರ್‌ ಯಾದವ್‌ ಹಾಗೂ ಸಂಜು ಸ್ಯಾಮ್ಸನ್‌ ಅವರನ್ನು ಬಾಂಗ್ಲಾದೇಶದ ವಿರುದ್ಧದ ಏಕದಿನ ಸರಣಿಗೆ ಕೈಬಿಟ್ಟ ಬೆನ್ನಲ್ಲಿಯೇ ಟ್ವಿಟರ್‌ನಲ್ಲಿ ಕಾಸ್ಟಿಯೆಸ್ಟ್‌ ಬಿಸಿಸಿಐ ಎನ್ನುವ ಪದ ಟ್ರೆಂಡ್‌ ಆಗಿದೆ.

Casteist BCCI  Controversy Sanju Samson and Suryakumar out of Bangladesh ODI allegation of promoting caste san
Author
First Published Nov 25, 2022, 12:10 PM IST

ಬೆಂಗಳೂರು (ನ.25): ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಂದರೆ ಬಿಸಿಸಿಐ ತನ್ನ ಆಟಗಾರರನ್ನು ಜಾತಿ ನೋಡಿ ಆಯ್ಕೆ ಮಾಡುತ್ತದೆಯೇ? ಹಿಂದೆಲ್ಲಾ ಇಂಥ ಆರೋಪಗಳು ಬಂದಾಗ ಜನ ಹೆಚ್ಚಾಗಿ ತಲೆಕೆಡಿಸಿಕೊಳ್ಳುತ್ತಿರಲ್ಲ. ಆಸ್ಟ್ರೇಲಿಯಾದ ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌ ಸೇರಿದಂತೆ ಕೆಲ ಪತ್ರಿಕೆಗಳು ಹಿಂದೆಲ್ಲಾ ಈ ಸುದ್ದಿ ಮಾಡಿದಾಗ ಅದು ಹಾಗೆ ಮರೆಯಾಗುತ್ತಿದ್ದವು. ಆದರೆ, ಮುಂಬರುವ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಸೂರ್ಯಕುಮಾರ್‌ ಯಾದವ್‌ ಹಾಗೂ ಸಂಜು ಸ್ಯಾಮ್ಸನ್‌ ಅವರನ್ನು ಕೈಬಿಟ್ಟ ಬೆನ್ನಲ್ಲಿಯೇ ಕಾಸ್ಟಿಯೆಸ್ಟ್‌ ಬಿಸಿಸಿಐ ಎನ್ನುವ ವಿಚಾರ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದ್ದರು, ಸಾಕಷ್ಟು ಮಂದಿ ಬಿಸಿಸಿಐ ವಿರುದ್ಧ ಜಾತಿ ಆಧಾರದಲ್ಲಿ ಆಟಗಾರರ ಆಯ್ಕೆ ಮಾಡುತ್ತಿದೆ ಎಂದು ಆರೋಪ ಮಾಡಿದ್ದಾರೆ. ಅದಕ್ಕೆ ಕೆಲವೊಂದು ಸಾಕ್ಷ್ಯಗಳನ್ನು ಅವರು ಪೋಸ್ಟ್‌ ಮಾಡಿದ್ದಾರೆ. ಬಾಂಗ್ಲಾದೇಶ ವಿರುದ್ಧ ಮುಂದಿನ ತಿಂಗಳು ಏಕದಿನ ಸರಣಿ ನಡೆಯಲಿದೆ. ಆದರೆ, ಈ ಸರಣಿಗೆ ಫಾರ್ಮ್‌ನಲ್ಲಿರುವ ಆಟಗಾರ ಸೂರ್ಯಕುಮಾರ್‌ ಯಾದವ್‌ ಹಾಗೂ ಅನುಭವಿ ವಿಕೆಟ್‌ ಕೀಪರ್‌ ಸಂಜು ಸ್ಯಾಮ್ಸರ್‌ ಅವರನ್ನು ಆಯ್ಕೆ ಮಾಡಲಾಗಿಲ್ಲ. ಇದರ ಬೆನ್ನಲ್ಲಿಯೇ ಕ್ಯಾಸ್ಟಿಯೆಸ್ಟ್ ಬಿಸಿಸಿಐ ಎನ್ನುವ ಶಬ್ದ ಟ್ವಿಟರ್‌ನಲ್ಲಿ ಟ್ರೆಂಡ್‌ ಆಗಿದೆ.


ಅಂದಾಜು 50 ಸಾವಿರ ಮಂದಿಯಿಂದ ಟ್ವೀಟ್‌: ಸೂರ್ಯಕುಮಾರ್‌ ಯಾದವ್‌ ಹಾಗೂ ಸಂಜು ಸ್ಯಾಮ್ಸನ್‌ ಅವರನ್ನು ಬಾಂಗ್ಲಾದೇಶ ಪ್ರವಾಸದ ಏಕದಿನ ಸರಣಿಯಿಂದ ಕೈಬಿಟ್ಟ ಬೆನ್ನಲ್ಲಿಯೇ ಟ್ವಿಟರ್‌ನಲ್ಲಿ #CastistBCCI ಎನ್ನುವ ಶಬ್ದ ಟ್ರೆಂಟ್‌ ಆಗಿದೆ. ಅಂದಾಜು 50 ಸಾವಿರಕ್ಕೂ ಅಧಿಕ ಅಭಿಮಾನಿಗಳು ಬಿಸಿಸಿಐ ಜಾತಿ ಆಧಾರದಲ್ಲಿ ಆಟಗಾರರನ್ನು ಆಯ್ಕೆ ಮಾಡುತ್ತಿದೆ ಎಂದು ಆರೋಪ ಮಾಡಿದ್ದಾರೆ. ಈ ಸುದ್ದಿ ಬರೆಯವ ವೇಳೆಗೆ 50 ಸಾವಿರಕ್ಕೂ ಅಧಿಕ ಮಂದಿಯಿಂದ ಕ್ಯಾಸ್ಟಿಯೆಸ್ಟ್‌ ಬಿಸಿಸಿಐ ಎನ್ನುವ ಹ್ಯಾಶ್‌ಟ್ಯಾಗ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ. ಇದು ಟ್ವಿಟರ್‌ನಲ್ಲಿ ಟ್ರೆಂಡಿಂಗ್‌ ಹ್ಯಾಶ್‌ಟ್ಯಾಗ್‌ಗಳಲ್ಲೂ ಒಂದಾಗಿದೆ.

ಪಂತ್‌ಗೆ ಯಾಕೆ ಚಾನ್ಸ್‌ ನೀಡ್ತಿದ್ದೀರಿ: ಹೆಚ್ಚಿನ ಪೋಸ್ಟ್‌ಗಳಲ್ಲಿ ದೆಹಲಿಯ ವಿಕೆಟ್‌ ಕೀಪರ್ ರಿಷಭ್‌ ಪಂತ್‌ಗೆ ಅಷ್ಟೆಲ್ಲಾ ಚಾನ್ಸ್ ನೀಡುತ್ತಿರುವುದೇಕೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ, ರಿಷಭ್‌ ಪಂತ್‌ ಪದೇ ಪದೇ ವಿಫಲವಾಗುತ್ತಿದ್ದರೂ ಅವರಿಗೆ ಸಾಕಷ್ಟು ಅವಕಾಶಗಳನ್ನು ನೀಡಲಾಗುತ್ತಿದೆ ಎಂದು ಆರೋಪ ಮಾಡಲಾಗಿದೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ರಿಷಭ್‌ ಪಂತ್‌ ನಿರೀಕ್ಷೆಯಂತೆ ಈವರೆಗೂ ಪ್ರದರ್ಶನ ನೀಡಿಲ್ಲ. 27 ಏಕದಿನ ಪಂದ್ಯಗಳನ್ನು ಆಡಿರುವ ರಿಷಭ್‌ ಪಂತ್‌ 84 ರನ್‌ ಬಾರಿಸಿದ್ದಾರೆ. ಅವರ ಸರಾಸರಿ 36.52 ಮಾತ್ರ. ಇನ್ನು ಟಿ20 ಮಾದರಿಯಲ್ಲಿ ಅವರ ಪ್ರದರ್ಶನ ಇನ್ನೂ ಕೆಟ್ಟದಾಗಿದೆ. 66 ಪಂದ್ಯಗಳನ್ನು ಆಡಿರುವ ಪಂತ್‌ 22ರ ಸರಾಸರಿಯಲ್ಲಿ 987 ರನ್‌ಗಳನ್ನು ಬಾರಿಸಿದ್ದಾರೆ.

ರಿಷಭ್‌ ಪಂತ್‌ ಬದಲು ಕೇರಳ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ ಈ ಸ್ಥಾನಕ್ಕೆ ಸೂಕ್ತ ಆಯ್ಕೆ. ಭಾರತದ ಪರವಾಗಿ ಆಡಿರುವ 10 ಪಂದ್ಯಗಳಿಂದ 73.50ರ ಸರಾಸರಿಯಲ್ಲಿ 294 ರನ್‌ ಬಾರಿಸಿದ್ದಾರೆ. ಆದರೆ, ಟಿ20ಯಲ್ಲಿ ಅವರ ನಿರ್ವಹಣೆ ಪಂತ್‌ ಅವರಷ್ಟೇ ಕಳಪೆಯಾಗಿದೆ. ಆಡಿದ 16 ಟಿ20 ಪಂದ್ಯಗಳಿಂದ 21ರ ಸರಾಸರಿಯಲ್ಲಿ 296 ರನ್‌ ಬಾರಿಸಿದ್ದಾರೆ. ಆದರೆ, ಅವರಿಗೆ ಟೀಮ್‌ ಇಂಡಿಯಾದಲ್ಲಿ ಸ್ಥಿರ ಸ್ಥಾನ ಸಿಗದೇ ಇರುವುದು ನಿರ್ವಹಣೆಯ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

ಬಾಂಗ್ಲಾದೇಶ ಸರಣಿಗೆ ಟೀಂ ಇಂಡಿಯಾದಲ್ಲಿ ಮಹತ್ತರ ಬದಲಾವಣೆ ಮಾಡಿದ ಬಿಸಿಸಿಐ!

ಸೂರ್ಯಕುಮಾರ್‌ಗೆ ವಿಶ್ರಾಂತಿ ನೀಡಿದ್ದೇವೆ: ನಿರಂತರವಾಗಿ ಆಟವಾಡುತ್ತಿರುವ ಸೂರ್ಯಕುಮಾರ್‌ ಯಾದವ್‌ಗೆ ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ ಎಂದು ಬಿಸಿಸಿಐ ಹೇಳಿದೆ. ಜುಲೈನಿಂದ ಅವರು ನಿರಂತವಾಗಿ ಆಟವಾಡುತ್ತಿದ್ದಾರೆ. ವಿಶ್ವಕಪ್‌ ಬಳಿಕ ನ್ಯೂಜಿಲೆಂಡ್‌ ವಿರುದ್ಧದ ಸರಣಿಯಲ್ಲೂ ಅವರು ಆಡುತ್ತಿದ್ದಾರೆ. ಈ ಕುರಿತಾಗಿ ಬಿಸಿಸಿಐ ಅಧಿಕಾರಿಗಳನ್ನು ಪ್ರಶ್ನೆ ಮಾಡಲಾಗಿದ್ದು ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಮೇಲೆ ಸೂರ್ಯಕುಮಾರ್‌ ಯಾದವ್‌ಗೆ ವಿಶ್ರಾಂತಿ ನೀಡಲಾಗಿದೆ. ಆದರೆ, ಸೂರ್ಯಕುಮಾರ್‌ ಯಾದವ್‌ ಅಭಿಮಾನಿಗಳಿಗೆ ಇದು ಇಷ್ಟವಾಗಿಲ್ಲ. ಅವರಿಗೆ ಭಾರತದ ಪರವಾಗಿ ಆಡಲು ತುಂಬಾ ತಡವಾಗಿ ಅವಕಾಶ ಸಿಕ್ಕಿದೆ. ಇಂಥ ಸಮಯದಲ್ಲಿ ಅವರಿಗೆ ಹೆಚ್ಚಿನ ಅವಕಾಶವನ್ನು ನೀಡಬೇಕು. ಅದಕ್ಕಿಂತ ಮುಖ್ಯವಾಗಿ ಅವರು ಉತ್ತಮ ಫಾರ್ಮ್‌ನಲ್ಲಿಯೂ ಇದ್ದಾರೆ ಎಂದಿದ್ದಾರೆ.

ಟೀಂ ಇಂಡಿಯಾ ನೂತನ ಆಯ್ಕೆ ಸಮಿತಿಗೆ 8 ಜವಾಬ್ದಾರಿ, ಮೂರು ಮಾದರಿಗೆ 3 ತಂಡ!

ಬ್ರಾಹ್ಮಣ ಆಟಗಾರರಿಗೆ ಹೆಚ್ಚಿನ ಪ್ರಾಧಾನ್ಯತೆ: ತಂಡದಲ್ಲಿ ಹೆಚ್ಚಿನ ಬ್ರಾಹ್ಮಣ ಆಟಗಾರರಿಗೆ ಬಿಸಿಸಿಐ ಪ್ರಾಮುಖ್ಯತೆ ನೀಡುತ್ತಿದೆ ಎಂದು ಹ್ಯಾಶ್‌ಟ್ಯಾಗ್‌ನಲ್ಲಿ ಅಭಿಮಾನಿಗಳು ಆರೋಪ ಮಾಡಿದ್ದಾರೆ. ಹಿರಿಯ ಪತ್ರಕರ್ತ ದಿಲೀಪ್‌ ಮಂಡಲ್‌ ಕೂಡ ಈ ಬಗ್ಗೆ ಬರೆದಿದ್ದು, ತಂಡದಲ್ಲಿ ಇರುವ 11 ಆಟಗಾರರ ಪೈಕಿ 7 ಮಂದಿ ಬ್ರಾಹ್ಮಣರಾಗಿದ್ದಾರೆ. ಅದಲ್ಲದೆ, ಕೋಚ್ ರಾಹುಲ್‌ ದ್ರಾವಿಡ್‌ ಹಾಗೂ ನಾಯಕ ರೋಹಿತ್‌ ಶರ್ಮ ಕೂಡ ಬ್ರಾಹ್ಮಣರಾಗಿದ್ದಾರೆ ಎಂದು ಹೇಳಿದ್ದಾರೆ. ಮಂಡಲ್ ಅವರು ಭಾರತೀಯ ಕ್ರಿಕೆಟ್‌ನಲ್ಲಿ ಹಿಂದುಳಿದ ಜಾತಿಗಳು ಮತ್ತು ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯವನ್ನು ಮಾಡಲಾಗುತ್ತಿದೆ ಎಂದಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಅವರು ಪೋಸ್ಟ್ ಒಂದನ್ನು ಕೂಡ ಶೇರ್ ಮಾಡಿದ್ದು, ಅದರ ಪ್ರಕಾರ ಭಾರತ ಪರ ಟೆಸ್ಟ್ ಆಡಿರುವ 302 ಕ್ರಿಕೆಟಿಗರ ಪೈಕಿ ಶೇ.5ರಷ್ಟು ಮಾತ್ರ ಮುಸ್ಲಿಮರು. ಅದೇ ಸಮಯದಲ್ಲಿ, ಪರಿಶಿಷ್ಟ ಜಾತಿಗಳಿಗೆ ಕೇವಲ 8% ಪ್ರಾತಿನಿಧ್ಯ ಸಿಕ್ಕಿದೆ. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು ಸುಮಾರು 15% ಮತ್ತು ಪರಿಶಿಷ್ಟ ಜಾತಿ ಜಾತಿಗಳ ಪಾಲು 25%.  ಆಗಿದೆ ಎಂದಿದ್ದಾರೆ.

Follow Us:
Download App:
  • android
  • ios