Asianet Suvarna News Asianet Suvarna News

ಬಾಂಗ್ಲಾದೇಶ ಸರಣಿಗೆ ಟೀಂ ಇಂಡಿಯಾದಲ್ಲಿ ಮಹತ್ತರ ಬದಲಾವಣೆ ಮಾಡಿದ ಬಿಸಿಸಿಐ!

ನ್ಯೂಜಿಲೆಂಡ್ ವಿರುದ್ದದ ಏಕದಿನ ಸರಣಿ ಮುಗಿಸಿದ ಬಳಿಕ ಟೀಂ ಇಂಡಿಯಾ ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸಲಿದೆ.  ಈಗಾಗಲೇ ಬಾಂಗ್ಲಾದೇಶ ಸರಣಿಗೆ ಟೀಂ ಇಂಡಿಯಾ ತಂಡ ಪ್ರಕಟಗೊಂಡಿದೆ. ಆದರೆ ಈ ತಂಡದಲ್ಲಿ ಬಿಸಿಸಿಐ ಎರಡು ಮಹತ್ತರ ಬದಲಾವಣೆ ಮಾಡಿದೆ.
 

BCCI announces replacements for Yash Dayal and Ravindra Jadeja for upcoming 3 match ODI series against Bangladesh ckm
Author
First Published Nov 23, 2022, 9:59 PM IST

ಮುಂಬೈ(ನ.23):  ನ್ಯೂಜಿಲೆಂಡ್ ವಿರುದ್ದದ ಏಕದಿನ ಸರಣಿ ನವೆಂಬರ್ 25ರಿಂದ ಆರಂಭಗೊಳ್ಳುತ್ತಿದೆ. ಮೂರು ಏಕದಿನ ಸರಣಿಯಲ್ಲಿ ಶಿಖರ್ ಧವನ್ ಟೀಂ ಇಂಡಿಯಾ ಮುನ್ನಡೆಸಲಿದ್ದಾರೆ. ನವೆಂಬರ್ 30ಕ್ಕೆ ಏಕದಿನ ಸರಣಿ ಅಂತ್ಯಗೊಳ್ಳಲಿದೆ. ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರು ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಡಿಸೆಂಬರ್ 4ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭಗೊಳ್ಳಲಿದೆ. ಬಾಂಗ್ಲಾದೇಶ ಸರಣಿಗೆ ಈಗಾಗಲೇ ಟೀಂ ಇಂಡಿಯಾ ಪ್ರಕಟಿಸಲಾಗಿದೆ. ಆದರೆ ಅನಿವಾರ್ಯವಾಗಿ ಈ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಇಂಜುರಿಗೆ ತುತ್ತಾಗಿರುವ ಅಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ಯಶ್ ದಯಾಳ್ ಕೈಬಿಡಲಾಗಿದೆ. ಇವರ ಸ್ಥಾನಕ್ಕೆ ಕುಲ್ದೀಪ್ ಸೇನ್ ಹಾಗೂ ಶಹಬಾಜ್ ಅಹಮ್ಮದ್‌ಗ ಸ್ಥಾನ ನೀಡಲಾಗಿದೆ.

ಇಂಜುರಿಯಿಂದ ಚೇತರಿಸಿಕೊಳ್ಳದ ಕಾರಣ ರವೀಂದ್ರ ಜಡೇಜಾ ಹಾಗೂ ಯಶ್ ದಯಾಳ್‌ಗೆ ವಿಶ್ರಾಂತಿ ನೀಡಲಾಗಿದೆ. ದಯಾಳ್ ಬೆನ್ನು ನೋವಿನಿಂದ ಚೇತರಿಸಿಕೊಳ್ಳುತ್ತಿದ್ದರೆ, ರವೀಂದ್ರ ಜಡೇಜಾ ಮೊಣಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಬಿಸಿಸಿಐ ಮೆಡಿಕಲ್ ತಂಡದ ಸೂಚನೆಯಂತೆ ಇಬ್ಬರು ಆಟಗಾರರಿಗೆ ಹೆಚ್ಚಿನ ವಿಶ್ರಾಂತಿ ನೀಡಲಾಗಿದೆ.

ಟೀಂ ಇಂಡಿಯಾ ನೂತನ ಆಯ್ಕೆ ಸಮಿತಿಗೆ 8 ಜವಾಬ್ದಾರಿ, ಮೂರು ಮಾದರಿಗೆ 3 ತಂಡ!

ಬಾಂಗ್ಲಾದೇಶ ಏಕದಿನ ಸರಣಿಗೆ ಟೀಂ ಇಂಡಿಯಾ
ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಬ್ ಪಂತ್, ಇಶಾನ್ ಕಿಶನ್, ಶಹಬಾಜ್ ಅಹಮ್ಮದ್, ಅಕ್ಸರ್ ಪಟೇಲ್, ವಾಶಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್, ಕುಲ್ದೀಪ್ ಸೇನ್

ಟೀಂ ಇಂಡಿಯಾ ಆಯ್ಕೆ ಸಮಿತಿ ಬಾಂಗ್ಲಾದೇಶ ಎ ತಂಡದ ವಿರುದ್ದದ ಪಂದ್ಯಕ್ಕಾಗಿ ಭಾರತ ಎ ತಂಡವನ್ನು ಪ್ರಕಟಿಸಿದೆ. ನಾಲ್ಕು ದಿನದ ಎರಡು ಪಂದ್ಯಗಳನ್ನು ಆಯೋಜಿಸಲಾಗಿದೆ. 

MS Dhoni Team India: ವಿಶ್ವಕಪ್‌ನಲ್ಲಿ ಕೆಟ್ಟ ನಿರ್ವಹಣೆ, ಎಂಎಸ್‌ ಧೋನಿಗೆ ಬಿಸಿಸಿಐ ಬುಲಾವ್‌?

ಮೊದಲ ಪಂದ್ಯಕ್ಕೆ ಭಾರತ ಎ ತಂಡ:
ಅಭಿವಮನ್ಯು ಈಶ್ವರನ್(ನಾಯಕ), ರೋಹನ್ ಕುನ್ನುಮಲ್, ಯಶಸ್ವಿ ಜೈಸ್ವಾಲ್, ಯಶ್ ಧೂಲ್, ಸರ್ಫರಾಜ್ ಖಾನ್, ತಿಲಕ್ ವರ್ಮಾ, ಉಪೇಂದ್ರ ಯಾದವ್, ಸೌರಬ್ ಕುಮಾರ್, ರಾಹುಲ್ ಚಹಾರ್, ಜಯಂತ್ ಯಾದವ್, ಮುಕೇಶ್ ಕುಮಾರ್, ನವದೀಪ್ ಸೈನಿ, ಅತಿತ್ ಸೇಥ್

ಎರಡನೇ ಪಂದ್ಯಕ್ಕೆ ಭಾರತ ಎ ತಂಡ
ಅಭಿಮನ್ಯು ಈಶ್ವರನ್(ನಾಯಕ), ರೋಹನ್ ಕುನ್ನುಮಲ್, ಯಶಸ್ವಿ ಜೈಸ್ವಾಲ್, ಯಶ್ ಧೂಲ್, ಸರ್ಫರಾಜ್ ಖಾನ್, ಉಪೇಂದ್ರ ಯಾದವ್, ಸೌರಬ್ ಕುಮಾರ್, ರಾಹುಲ್ ಚಹಾರ್, ನವದೀಪ್ ಸೈನಿ, ಅತಿತ್ ಸೇಥ್, ಚೇತೇಶ್ವರ್ ಪೂಜಾರ, ಉಮೇಶ್ ಯಾದವ್, ಕೆಎಸ್ ಭರತ್ 

Follow Us:
Download App:
  • android
  • ios