ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಮಾಧಾನ ಯಾತ್ರೆಯಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ನಡೆದು ಬರುತ್ತಿದ್ದ ನಿತೀಶ್ ಮೇಲೆ ಮುರಿದು ಕುರ್ಚಿ ಎಸೆಯಲಾಗಿದೆ. ತಕ್ಷಣ ಭದ್ರತಾ ತಂಡ ನಿತೀಶ್ ಕುಮಾರ್ ಸುತ್ತುವರಿದು ರಕ್ಷಣೆ ನೀಡಿದೆ.
ಪಾಟ್ನ(ಫೆ.13); ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಮಾಧಾನ ಯಾತ್ರೆಯಲ್ಲಿ ಕುರ್ಚಿ ಎಸೆದ ಘಟನೆ ನಡೆದಿದೆ. ಪಾಟ್ನಾದ ಔರಂಗಬಾದ್‌ನಲ್ಲಿ ಪಂಚಾಯತ್ ಕಟ್ಟಡ ಉದ್ಘಾಟನೆಗೆ ತೆರಳಿದ ನಿತೀಶ್ ಕುಮಾರ್‌ಗೆ ಭಾರಿ ಮುಖಭಂಗವಾಗಿದೆ. ಔರಂಗಬಾದ್‌ನಲ್ಲಿ ಸಮಾಧಾನ್ ಯಾತ್ರೆ ನಡೆಸಿದ ನಿತೀಶ್ ಕುಮಾರ್ ಭಾರಿ ಬದ್ರತೆಯೊಂದಿಗೆ ಬಂದಿದ್ದಾರೆ. ಈ ವೇಳೆ ನೆರೆದಿದ್ದ ಜನರ ನಡುವಿನಿಂದ ಮುರಿದ ಕುರ್ಚಿಯನ್ನು ನಿತೀಶ್ ಕುಮಾರ್ ಗುರಿಯಾಗಿಸಿ ಎಸೆಯಲಾಗಿದೆ. ಮುರಿದ ಕುರ್ಚಿ ತುಂಡು ನಿತೀಶ್ ಕುಮಾರ್ ಪಕ್ಕದಲ್ಲೇ ಬಂದು ಬಿದ್ದಿದೆ. ತಕ್ಷಣ ಎಚ್ಚೆತ್ತ ಭದ್ರತಾ ತಂಡ ನಿತೀಶ್ ಕುಮಾರ್ ಸುತ್ತಿವರಿದು ರಕ್ಷಣೆ ನೀಡಿತು. ಜೊತೆಗೆ ಜನರನ್ನು ಚದುರಿಸುವ ಯತ್ನ ನಡೆಯಿತು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಅಪಾಯ ಸಂಭವಿಸಿಲ್ಲ.
ಔರಂಗಬಾದ್‌ನಲ್ಲಿ ಪಂಚಾಯತ್ ಕಟ್ಟಡ ಉದ್ಘಾಟಿಸಿದ ಬಳಿಕ ಸಮಾಧಾನ್ ಯಾತ್ರಾ ಅನ್ನೋ ಕಾರ್ಯಕ್ರಮ ಆಯೋಜಿಸಲಾಗಿದೆ. ಕಟ್ಟಡ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಆಗಮಿಸುವ ವೇಳೆ ಮುರಿದ ಕುರ್ಚಿ ಎಸೆಯಲಾಗಿದೆ. ಸಿಎಂ ಭದ್ರತಾ ಅಧಿಕಾರಿಗಳ ತಂಡ ನಿತೀಶ್ ಕುಮಾರ್ ಸುತ್ತುವರಿದು ರಕ್ಷಣೆ ನೀಡಿದರೆ, ಇತ್ತ ಪೊಲೀಸರ ತಂಡ ಮುರಿದ ಕುರ್ಚಿ ಎಸೆದ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಸ್ಥಳದಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇತ್ತ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ದೃಶ್ಯಗಳತ್ತವೂ ಪೊಲೀಸರು ಚಿತ್ತ ಹರಿಸಿದ್ದಾರೆ.
ಒಡಿಶಾ ಸಚಿವ ಹತ್ಯೆ ಬೆನ್ನಲ್ಲೇ ಜೆಡಿಯು ನಾಯಕನ ವಾಹನದ ಮೇಲೆ ದಾಳಿ..! ಗಲಭೆಯಲ್ಲಿ ಇಬ್ಬರಿಗೆ ಗಾಯ
ಮದ್ಯ ಮಾರಾಟ ನಿಷೇಧ ಹಾಗೂ ಅಕ್ರಮ ಮದ್ಯ ಕುಡಿದು ಅಮಾಯಕರು ಬಲಿಯಾಗುತ್ತಿರುವ ವಿಚಾರ ಬಿಹಾರದಲ್ಲಿ ಭಾರಿ ಆಕ್ರೋಶ ಹಾಗೂ ಚರ್ಚೆಗೆ ಕಾರಣಾಗಿದೆ. ಮದ್ಯ ಮಾರಾಟ ನಿಷೇಧ ನಿಯಮದಿಂದ ಬಿಹಾರದಲ್ಲಿ ಅಕ್ರಮ ದಂಧೆ ಹೆಚ್ಚಾಗಿದೆ. ಇದರಿಂದ ಅಮಾಯಕರು ಬಲಿಯಾಗುತ್ತಿದ್ದಾರೆ ಅನ್ನೋ ಆರೋಪವೂ ಕೇಳಿಬರುತ್ತಿದೆ. ಇತ್ತ ಸರ್ಕಾರ ಜಾಗೃತಿ ಕೆಲಸ ಮಾಡುತ್ತಿಲ್ಲ ಅನ್ನೋ ವಾದವೂ ಹುಟ್ಟಿಕೊಂಡಿದೆ. ಇದೇ ಕಾರಣದಿಂದ ನಿತೀಶ್ ಕುಮಾರ್ ಮೇಲೆ ಮುರಿದ ಕುರ್ಚಿ ಎಸೆದಿರುವ ಸಾಧ್ಯತೆ ಇದೆ ಅನ್ನೋ ಮಾತುಗಳು ಕೇಳಿಬಂದಿದೆ.
ಔರಂಗಬಾದ್ ಕಾರ್ಯಕ್ರಮಕ್ಕೂ ಮೊದಲು ರೋಹ್ಟಾಸ್ ಜಿಲ್ಲೆಗೆ ಭೇಟಿ ನೀಡಿದ ನಿತೀಶ್ ಕುಮಾರ್ ಸರ್ಕಾರಿ ಯೋಜನೆಗಳ ಕಾಮಗಾರಿ ಪರಿಶೀಲನೆ ನಡೆಸಿದರು. ಇದೇ ವೇಳೆ ಅಕ್ರಮ ಮದ್ಯ ಸೇವನೆ, ಅಕ್ರಮ ಮದ್ಯ ಮಾರಾಟ ಕುರಿತು ಜಾಗೃತಿ ಮೂಡಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಾಲಕಿ ಸಲೋನಿ ಭೇಟಿಯಾದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಜಾಗೃತಿ ಮೂಡಿಸುತ್ತಿರುವ ಹಾಗೂ ಶಾಲೆಯಲ್ಲಿ ಮಕ್ಕಳ ಮೂಲಕ ಪೋಷಕರಿಗೆ ಜಾಗೃತಿ ಮೂಡಿಸುತ್ತಿರುವ ಸಲೋನಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪುರುಷರು ಅಸಡ್ಡೆ, ಮಹಿಳೆಯರು ಅವಿದ್ಯಾವಂತರು; ಹೀಗಾಗಿ ಜನಸಂಖ್ಯೆ ನಿಯಂತ್ರಣಕ್ಕೆ ಬರಲ್ಲ: ನಿತೀಶ್ ಕುಮಾರ್
2016ರಲ್ಲಿ ನಿತೀಶ್ ಕುಮಾರ್ ಬಿಹಾರದಲ್ಲಿ ಮದ್ಯಪಾನ ನಿಷೇಧ ಮಾಡಿದ್ದಾರೆ. ಇದರಿಂದ ಬಿಹಾರದ ಹಲವು ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟ, ಕಳ್ಳ ಬಟ್ಟಿಗಳು ಎಗ್ಗಿಲ್ಲದೆ ನಡೆಯುತ್ತಿದೆ. ಇದರಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ.
ಅಧಿಕಾರಿಗಳಿಗೆ ನಿತೀಶ್ ನೊಟಿಸ್
ಟ್ವೀಟ್ ಮಾಡುವುದು ನಿಮ್ಮ ಕೆಲಸವಲ್ಲ. ನಿಮ್ಮ ಸಮಸ್ಯೆಗಳನ್ನು ನೀವು ನಿಮ್ಮ ಹಿರಿಯರೊಂದಿಗೆ ಚರ್ಚಿಸಿ ಸರಿಪಡಿಸಿಕೊಳ್ಳಿ’’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಧಿಕಾರಿಗಳಿಗೆ ಚಾಟಿ ಬೀಸಿದ್ದಾರೆ. ‘ಬಿಹಾರದ ಅಗ್ನಿಶಾಮಕ ದಳದ ಐಜಿ ಆಗಿರುವ ವಿಕಾಸ್ ವೈಭವ್ ನನ್ನ ಮೇಲೆ ಡಿಜಿ ಶೋಭಾ ಅಹೋಟ್ಕರ್ ವೈಯಕ್ತಿಕ ದಾಳಿ ಮಾಡುತ್ತಿದ್ದಾರೆ. ಅಲ್ಲದೇ ಪ್ರತಿ ದಿನ ನನ್ನನ್ನು ಗುರಿಯಾಗಿಸಿಕೊಂಡು ಹೀಯಾಳಿಸುತ್ತಾರೆ’ ಎಂದು ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದರು. ಇದನ್ನು ಗಮನಿಸಿದ ನಿತೀಶ್, ‘ನಿಮ್ಮ ಕೆಲಸ ಟ್ವೀಟ್ ಮಡುವುದಲ್ಲ, ಏನೇ ಸಮಸ್ಯೆ ಇದ್ದರು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕು’ ಎಂದು ಆದೇಶಿಸಿದ್ದಾರೆ. ವಿಕಾಸ್ ವೈಭವ್ ವಿರುದ್ಧ ಶೋಕಾಸ್ ನೋಟಿಸ್ ಕೋಡ ಜಾರಿ ಮಾಡಿದ್ದಾರೆ.
