ಪುರುಷರು ಅಸಡ್ಡೆ, ಮಹಿಳೆಯರು ಅವಿದ್ಯಾವಂತರು; ಹೀಗಾಗಿ ಜನಸಂಖ್ಯೆ ನಿಯಂತ್ರಣಕ್ಕೆ ಬರಲ್ಲ: ನಿತೀಶ್ ಕುಮಾರ್
ಮಹಿಳೆಯರು ಅಧ್ಯಯನ ಮಾಡಿದರೆ ಫಲವತ್ತತೆ ಪ್ರಮಾಣ ಕುಸಿಯುತ್ತದೆ. ಇದು ವಾಸ್ತವ. ಇಂದಿನ ದಿನಗಳಲ್ಲಿ ಮಹಿಳೆಯರು ಶಿಕ್ಷಣ ಪಡೆಯುತ್ತಿಲ್ಲ. ಪ್ರತಿದಿನ ಜನ್ಮ ನೀಡಬೇಕಾಗಿಲ್ಲ ಎಂಬುದನ್ನು ಪುರುಷರು ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.
ಮಹಿಳೆಯರು (Women) ವಿದ್ಯಾವಂತರಲ್ಲ (Uneducated) ಮತ್ತು ಪುರುಷರು (Men) ಅಸಡ್ಡೆ ತೋರುವುದರಿಂದ (Not Responsible) ರಾಜ್ಯದಲ್ಲಿ (State) ಜನಸಂಖ್ಯೆ ನಿಯಂತ್ರಣಕ್ಕೆ (Population Control) ಬರುವುದಿಲ್ಲ ಎಂದು ಹೇಳುವ ಮೂಲಕ ಬಿಹಾರ ಮುಖ್ಯಮಂತ್ರಿ (Bihar Chief Minister) ನಿತೀಶ್ ಕುಮಾರ್ (Nitish Kumar) ಅವರು ವಿವಾದಕ್ಕೆ ಕಾರಣರಾಗಿದ್ದಾರೆ. ಜನತಾ ದಳ-ಯುನೈಟೆಡ್ (ಜೆಡಿಯು) (Janata Dal United) ಮುಖ್ಯಸ್ಥರು ಶನಿವಾರ ನಡೆಸುತ್ತಿರುವ ಸಮಾಧಾನ್ ಯಾತ್ರೆಯ (Samadhan Yatra) ನಡುವೆ ವೈಶಾಲಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ನಿತೀಶ್ ಕುಮಾರ್ ಈ ಹೇಳಿಕೆ ನೀಡಿದ್ದಾರೆ.
ಮಹಿಳೆಯರು ಅಧ್ಯಯನ ಮಾಡಿದರೆ ಫಲವತ್ತತೆ ಪ್ರಮಾಣ ಕುಸಿಯುತ್ತದೆ. ಇದು ವಾಸ್ತವ. ಇಂದಿನ ದಿನಗಳಲ್ಲಿ ಮಹಿಳೆಯರು ಶಿಕ್ಷಣ ಪಡೆಯುತ್ತಿಲ್ಲ. ಪ್ರತಿದಿನ ಜನ್ಮ ನೀಡಬೇಕಾಗಿಲ್ಲ ಎಂಬುದನ್ನು ಪುರುಷರು ನೆನಪಿನಲ್ಲಿಟ್ಟುಕೊಳ್ಳುವುದಿಲ್ಲ ಎಂದೂ ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.
ಇದನ್ನು ಓದಿ: ಬಿಹಾರದಲ್ಲಿ ಬಹುನಿರೀಕ್ಷಿತ ಜಾತಿ ಗಣತಿ ಆರಂಭ
ಮಹಿಳೆಯರು ಉತ್ತಮ ಶಿಕ್ಷಣ ಪಡೆದಿದ್ದರೆ ಅಥವಾ ಅವರಿಗೆ ತಿಳುವಳಿಕೆ ಇದ್ದರೆ, ಅವರು ಗರ್ಭಿಣಿಯಾಗದಂತೆ ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂದು ತಿಳಿದಿರುತ್ತಾರೆ. ಆದರೆ, ಪುರುಷರು ಅಸಡ್ಡೆ ಹೊಂದಿದ್ದಾರೆ ಮತ್ತು ಮಹಿಳೆಯರು ಸರಿಯಾಗಿ ಶಿಕ್ಷಣ ಪಡೆಯದ ಕಾರಣ ಅವರು ತಮ್ಮ ಕಾಲುಗಳನ್ನು ಕೆಳಗೆ ಇಡಲು ಮತ್ತು ಜನಸಂಖ್ಯೆಯ ಬೆಳವಣಿಗೆಯನ್ನು ತಡೆಯಲು ಸಾಧ್ಯವಾಗುವುದಿಲ್ಲ ಎಂದು ಬಿಹಾರ ಸಿಎಂ ಹೇಳಿದ್ದಾರೆ.
ಬಿಜೆಪಿಯಿಂದ ಟೀಕೆ..!
ಇನ್ನು, ಬಿಹಾರ ಸಿಎಂ ಅವರ ವಿವಾದಾತ್ಮಕ ಹೇಳಿಕೆಯನ್ನು ಪ್ರತಿಪಕ್ಷ ಬಿಜೆಪಿಯು ಟೀಕಿಸಿದೆ. ಅವರ ಅಸಭ್ಯ ಭಾಷೆ ಮತ್ತು ಮುಖ್ಯಮಂತ್ರಿಯಾಗಿ ಸಾರ್ವಜನಿಕವಾಗಿ ಈ ರೀತಿ ಮಾತನಾಡಿರುವುದು ರಾಜ್ಯದ ಪ್ರತಿಷ್ಠೆಗೆ ಕಳಂಕ ತಂದಿದೆ ಎಂದು ಹೇಳಿವೆ. ರಾಜ್ಯದಲ್ಲಿ ಫಲವತ್ತತೆ ದರವನ್ನು ವಿವರಿಸಲು ಅನುಚಿತ ಭಾಷೆಯನ್ನು ಬಳಸಿದ್ದಕ್ಕಾಗಿ ನಿತೀಶ್ ಕುಮಾರ್ ಅವರು ತಮ್ಮ ಹುದ್ದೆಯ ಇಮೇಜ್‌ಗೆ ಕಳಂಕ ತಂದಿದ್ದಾರೆ ಎಂದು ಪ್ರತಿಪಕ್ಷಗಳು ಟೀಕೆ ಮಾಡಿವೆ.
ಇದನ್ನೂ ಓದಿ: ಬಿಹಾರದಲ್ಲಿ 30 ಬೀದಿ ನಾಯಿಗಳನ್ನು ಗುಂಡಿಕ್ಕಿ ಕೊಂದ ನಿತೀಶ್ ಕುಮಾರ್ ಸರ್ಕಾರ..!
ಸಾರ್ವಜನಿಕವಾಗಿ ಅಸಭ್ಯ ಮತ್ತು ಅವಹೇಳನಕಾರಿ ಭಾಷೆಯನ್ನು ಬಳಸಿದ್ದಾರೆ ಎಂದು ಆರೋಪಿಸಿ ಬಿಹಾರ ಮುಖ್ಯಮಂತ್ರಿ ವಿರುದ್ಧ ಅಲ್ಲಿನ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಸಾಮ್ರಾಟ್ ಚೌಧರಿ ಅವರು ವಾಗ್ದಾಳಿ ನಡೆಸಿದ್ದಾರೆ. "ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಅವರು ಬಳಸಿರುವ ಅಸಭ್ಯ ಪದಗಳು ಅಸೂಕ್ಷ್ಮತೆಯ ಪರಮಾವಧಿಯಾಗಿದೆ. ಅಂತಹ ಪದಗಳನ್ನು ಬಳಸುವ ಮೂಲಕ ಅವರು ಮುಖ್ಯಮಂತ್ರಿ ಹುದ್ದೆಯ ಘನತೆಗೆ ಮಸಿ ಬಳಿಯುತ್ತಿದ್ದಾರೆ" ಎಂದು ಸಾಮ್ರಾಟ್ ಚೌಧರಿ ಟ್ವೀಟ್ ಮಾಡಿದ್ದಾರೆ.
ಜಾತಿಗಣತಿ ಆರಂಭಿಸಿದ ಬಿಹಾರ ಸರ್ಕಾರ..!
ಇನ್ನೊಂದೆಡೆ, ಬಿಹಾರ ಸರ್ಕಾರ ಬಹುನಿರೀಕ್ಷಿತ ಜಾತಿಗಣತಿಯನ್ನು ಆರಂಭಿಸಿದೆ. ಈ ಗಣತಿಯಿಂದಾಗಿ ಪ್ರತಿ ಸಮುದಾಯದ ಜನರ ಆರ್ಥಿಕ ಪರಿಸ್ಥಿತಿಗಳು ತಿಳಿಯಲಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನೆರವಾಗಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಮಾಧ್ಯಮವೊಂದರ ಜೊತೆ ಮಾತನಾಡಿರುವ ಅವರು, ನಾವು ಮೊದಲಿನಿಂದಲೂ ಜಾತಿ ಗಣತಿ ನಡೆಸಬೇಕು ಎಂಬ ಬೇಡಿಕೆ ಸಲ್ಲಿಸುತ್ತಲೇ ಇದ್ದೆವು. ಇದರಿಂದಾಗಿ ಎಲ್ಲಾ ಸಮುದಾಯಗಳ ಜನರ ಆರ್ಥಿಕ ಸ್ಥಿತಿ ಸರ್ಕಾರಕ್ಕೆ ತಿಳಿಯಲಿದೆ. ಕೆಳಗಿರುವವರನ್ನು ಆರ್ಥಿಕವಾಗಿ ಮೇಲೆತ್ತಲು ಇದು ಸಹಾಯ ಮಾಡುತ್ತದೆ.
ಇದನ್ನೂ ಓದಿ: ನವ ಭಾರತದ 'ರಾಷ್ಟ್ರಪಿತ' ದೇಶಕ್ಕಾಗಿ ಏನು ಮಾಡಿದ್ದಾರೆ ಎಂದು ಪ್ರಧಾನಿಯನ್ನು ವ್ಯಂಗ್ಯವಾಡಿದ ನಿತೀಶ್
2011ರ ಜನಗಣತಿಯ ಬಳಿಕ ಸರ್ಕಾರ ಜಾತಿ ಆಧಾರಿತ ಗಣತಿಯನ್ನು ನಡೆಸಿತ್ತು. ಆದರೆ ಅದು ಸರಿಯಾಗಿರಲಿಲ್ಲ ಮತ್ತು ಆ ವರದಿಯನ್ನು ಬಿಡುಗಡೆ ಮಾಡಲಿಲ್ಲ. ಆದರೆ ಮತ್ತೊಮ್ಮೆ ಜಾತಿ ಗಣತಿ ನಡೆಸುವಂತೆ ನಾವು ಅವರಿಗೆ (ಮೈತ್ರಿ ಸರ್ಕಾರ) ಕೇಳಿದೆವು. ಆದರೆ ಅವರು ಒಪ್ಪಲಿಲ್ಲ ಎಂದೂ ಪರೋಕ್ಷವಾಗಿ ಬಿಜೆಪಿಯನ್ನು ಟೀಕಿಸಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿಯಾದ್ರೆ ವಿರೋಧ ಇಲ್ಲ: ನಿತೀಶ್ ಕುಮಾರ್