ನವದೆಹಲಿ(ನ.05): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ 31ನೇ ವರ್ಷದ ಹುಟ್ಟು ಹಬ್ಬ.  ಬಾಂಗ್ಲಾದೇಶ ವಿರುದ್ದದ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿರುವ ಕೊಹ್ಲಿ, ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜೊತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. 

ಇದನ್ನೂ ಓದಿ: ರನ್ ಮಷೀನ್ ವಿರಾಟ್ ಕೊಹ್ಲಿ ಬರ್ತ್ ಡೇ @31

ನವೆಂಬರ್ 5, 1988ರಲ್ಲಿ ಹುಟ್ಟಿದ ವಿರಾಟ್ ಕೊಹ್ಲಿ, 2008ರಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದರು. ಶ್ರೀಲಂಕಾ ವಿರುದ್ದದ ಏಕದಿನ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪರಿಚಯವಾದ ಕೊಹ್ಲಿ, 2011ರ ವಿಶ್ವಕಪ್ ವಿಜೇತ ತಂಡದ ಪ್ರಮುಖ ಸದಸ್ಯ. ಆಧುನಿಕ ಕ್ರಿಕೆಟ್‌ನ ಮಾಸ್ಟರ್ ಎಂದೇ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿಗೆ ಟೀಂ ಇಂಡಿಯಾ ಕ್ರಿಕೆಟಿಗರು ಮಾತ್ರವಲ್ಲ ವಿಶ್ವ ಕ್ರಿಕೆಟಿಗರು ಶುಭಕೋರಿದ್ದಾರೆ.