ಕೊಲಂಬೊ(ನ.13): ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರ ತಡೆಯಲು ಶ್ರೀಲಂಕಾ ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಂಡಿದ್ದು, ಮ್ಯಾಚ್ ಫಿಕ್ಸಿಂಗ್ ಅನ್ನು ಕ್ರಿಮಿನಲ್ ಅಪರಾಧವೆಂದು ಘೋಷಿಸಿದೆ. ಫಿಕ್ಸಿಂಗ್ ಕ್ರಿಮಿನಲ್ ಅಪರಾಧ ಎಂದು ಘೋಷಿಸಿದ ದಕ್ಷಿಣ ಏಷ್ಯಾದ ಮೊದಲ ರಾಷ್ಟ್ರ ಶ್ರೀಲಂಕಾ. ಸೋಮವಾರ ಕ್ರೀಡಾ ಸಚಿವ ಹರಿನ್ ಫೆರ್ನಾಂಡೋ ಮಸೂದೆ ಮಂಡಿಸಿದರು.

ಇದನ್ನೂ ಓದಿ: KPL ಫಿಕ್ಸಿಂಗ್: ಸಿಸಿಬಿಯಿಂದ ಅಂತಾರಾಷ್ಟ್ರೀಯ ಬುಕ್ಕಿಯ ಬಂಧನ

ಲಂಕಾದ ವಿಶ್ವಕಪ್ ವಿಜೇತ ನಾಯಕ, ಹಾಲಿ ಸಚಿವ ಅರ್ಜುನ ರಣತುಂಗ ಮಸೂದೆಗೆ ಬೆಂಬಲ ಸೂಚಿಸಿ ದರು. ‘ಆಟದಲ್ಲಿ ಯಾವುದೇ ಪ್ರಕಾರದ ಭ್ರಷ್ಟಾಚಾರವನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗುತ್ತದೆ.  ಈ ಮೂಲಕ  ಕ್ರಿಕೆಟ್ ಕಳ್ಳಾಟವನ್ನು ಕ್ರಿಮಿನಲ್ ಅಪರಾಧ ಎಂದು ಘೋಷಿಸಿದ ಏಷ್ಯಾದ ಮೊದಲ ರಾಷ್ಟ್ರ ಅನ್ನೋ ಹೆಗ್ಗಳಿಕೆಗೆ ಶ್ರೀಲಂಕ ಪಾತ್ರವಾಗಿದೆ. 

ಇದನ್ನೂ ಓದಿ: ಟಿ10 ಲೀಗ್ ನಲ್ಲಿ ಫಿಕ್ಸಿಂಗ್ ಛಾಯೆ..?.

ಗರಿಷ್ಠ 10 ವರ್ಷ ಜೈಲು ಶಿಕ್ಷೆ ಹಾಗೂ ದಂಡ ಹಾಕಲಾಗುತ್ತದೆ’ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಪಿಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಸೇರಿದಂತೆ ಹಲವು ಪ್ರಕರಣಗಳನ್ನು ಲಂಕಾದ ಕ್ರಿಕೆಟಿಗರು, ಕ್ಯುರೇಟರ್‌ಗಳು, ಆಡಳಿತಗಾರರು
ಎದುರಿಸುತ್ತಿದ್ದಾರೆ.