ಬೆಂಗಳೂರು[ನ.10]: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್)ನ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣವು, ದಿನೇ ದಿನೇ ಹೊಸ ಆಯಾಮ ಪಡೆದುಕೊಳ್ಳುತ್ತಿದೆ. ಇದೀಗ ಐಸಿಸಿ ಅಂಗೀಕೃತ ಅಬುಧಾಬಿ ಟಿ10 ಕ್ರಿಕೆಟ್ ಲೀಗ್ ಮೇಲೆ ಫಿಕ್ಸಿಂಗ್ ಕರಿನೆರಳು ಬಿದ್ದಿದೆ. ಕೆಪಿಎಲ್ ಫಿಕ್ಸಿಂಗ್, ಬೆಟ್ಟಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಬೆಳಗಾವಿ ಪ್ಯಾಂಥರ್ಸ್‌ ಮಾಲಿಕ ಅಷ್ಫಾಕ್ ಅಲಿ ತಾರಾ ಹಾಗೂ ಬಳ್ಳಾರಿ ಟಸ್ಕರ್ಸ್‌ ಮಾಲಿಕ ಅರವಿಂದ್ ವೆಂಕಟೇಶ್ ರೆಡ್ಡಿ, ಟಿ10 ಲೀಗ್‌ನಲ್ಲಿ ಕೂಡ ಫಿಕ್ಸಿಂಗ್ ಜಾಲ ಬೀಸಿರುವ ಶಂಕೆ ವ್ಯಕ್ತವಾಗಿದೆ. 

ಫಿಕ್ಸಿಂಗ್‌ ಭೀತಿಯಿಂದಲೇ KPL ನಿಲ್ಲಿ​ಸಿದ್ರಾ ಕುಂಬ್ಳೆ?

ಟಿ10ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಹಲವು ಖ್ಯಾತನಾಮರಿದ್ದು, ದೊಡ್ಡ ಮಟ್ಟದಲ್ಲೇ ಫಿಕ್ಸಿಂಗ್ ನಡೆದಿರುವ ಸಾಧ್ಯತೆಯಿದೆ. ಈ ಸಂಬಂಧ ಬೆಂಗಳೂರು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಅಷ್ಫಾಕ್ ಅಲಿ ಟಿ10 ಲೀಗ್‌ನ ಕೇರಳ ನೈಟ್ಸ್ ಸಹ ಮಾಲಿಕತ್ವ ಹೊಂದಿದ್ದಾರೆ. ಕೇರಳ ತಂಡದಲ್ಲಿ ಮೊರ್ಗನ್, ಬೇರ್‌ಸ್ಟೋವ್, ಕ್ರಿಸ್ ಗೇಲ್, ಪೊಲ್ಲಾರ್ಡ್ ಆಡಿದ್ದರು. ಹಾಶೀಂ ಆಮ್ಲಾ, ಎವಿನ್ ಲೆವಿಸ್, ಸ್ಯಾಮುಯೆಲ್ಸ್ ಅರವಿಂದ್ ರೆಡ್ಡಿ ಸಹ ಮಾಲಿಕತ್ವದ ಕರ್ನಾಟಕ ಟಸ್ಕರ್ಸ್‌ ತಂಡವನ್ನು ಪ್ರತಿನಿಧಿಸಿದ್ದರು.

KPL ಫಿಕ್ಸಿಂಗ್: ಗೌತಮ್ ಕಪಾಳಕ್ಕೆ ಬಾರಿಸಿ ಸತ್ಯ ಕಕ್ಕಿಸಿದ ಸಂದೀಪ್ ಪಾಟೀಲ್

ಟ್ರಾವೆಲ್ಸ್ ಕಂಪೆನಿ ಮಾಲಿಕ ಅಷ್ಫಾಕ್‌ಗೆ ದುಬೈ ಸಂಪರ್ಕವಿದೆ. ಅಷ್ಫಾಕ್ ಬಂಧನದ ಬಳಿಕ ಕೇರಳ ನೈಟ್ಸ್ ಫ್ರಾಂಚೈಸಿ ನಿಷೇಧಿಸಲಾಗಿದೆ. 3ನೇ ಆವೃತ್ತಿಯ ಟಿ10 ಲೀಗ್ ನ.14 ರಿಂದ ಆರಂಭವಾಗಲಿದೆ. ಈ ಬಾರಿಯ ಟಿ10 ಲೀಗ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಪ್ರತಿನಿಧಿಸುತ್ತಿದ್ದಾರೆ. ಯುವಿ ಮರಾಠ ಅರೇಬಿಯನ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ.