Asianet Suvarna News Asianet Suvarna News

ಕ್ರಿಕೆಟ್ ಪ್ರೇಮಿಗಳಿಗೆ ಗುಡ್‌: ನ್ಯೂಸ್ ಭಾರತ-ಆಸ್ಟ್ರೇಲಿಯಾ 5ನೇ ಟಿ20ಗೆ ಚಿನ್ನಸ್ವಾಮಿ ಸ್ಟೇಡಿಯಂ ಆತಿಥ್ಯ?

ತೆಲಂಗಾಣ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಂದ್ಯಕ್ಕೆ ಹೆಚ್ಚುವರಿ ಭದ್ರತೆ ನೀಡಲು ಪೊಲೀಸ್‌ ಇಲಾಖೆ ಹಿಂದೇಟು ಹಾಕುತ್ತಿರುವ ಹಿನ್ನೆಲೆ ಪಂದ್ಯ ಅಲ್ಲಿಂದ ಸ್ಥಳಾಂತರಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಜೊತೆ ಕಟಕ್‌ ಕ್ರೀಡಾಂಗಣ ಕೂಡಾ ಪಂದ್ಯ ಅತಿಥ್ಯದ ರೇಸ್‌ನಲ್ಲಿದೆ.

Bengaluru M Chinnaswamy stadium likely to host India vs Australia 5th T20I Says report kvn
Author
First Published Nov 11, 2023, 2:50 PM IST

ಬೆಂಗಳೂರು(ನ.11): ವಿಶ್ವಕಪ್‌ ಬಳಿಕ ನಡೆಯಲಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಟಿ20 ಸರಣಿಯ 5ನೇ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ನ.23ರಂದು ಟಿ20 ಸರಣಿ ಆರಂಭಗೊಳ್ಳಲಿದ್ದು, ಕೊನೆ ಪಂದ್ಯ ಹೈದ್ರಾಬಾದ್‌ನಲ್ಲಿ ಡಿ.3ಕ್ಕೆ ನಿಗದಿಯಾಗಿದೆ. 

ಆದರೆ ತೆಲಂಗಾಣ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಂದ್ಯಕ್ಕೆ ಹೆಚ್ಚುವರಿ ಭದ್ರತೆ ನೀಡಲು ಪೊಲೀಸ್‌ ಇಲಾಖೆ ಹಿಂದೇಟು ಹಾಕುತ್ತಿರುವ ಹಿನ್ನೆಲೆ ಪಂದ್ಯ ಅಲ್ಲಿಂದ ಸ್ಥಳಾಂತರಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಜೊತೆ ಕಟಕ್‌ ಕ್ರೀಡಾಂಗಣ ಕೂಡಾ ಪಂದ್ಯ ಅತಿಥ್ಯದ ರೇಸ್‌ನಲ್ಲಿದೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಮಾನತುಗೊಳಿಸಿದ ಐಸಿಸಿ..!

ದುಬೈ: ಸರ್ಕಾರದ ಹಸ್ತಕ್ಷೇಪ ಹಿನ್ನೆಲೆಯಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿ(ಎಸ್‌ಎಲ್‌ಸಿ)ಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ಅಮಾನತುಗೊಳಿಸಿ ಆದೇಶಿಸಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿದ ಐಸಿಸಿ, ‘ಕ್ರಿಕೆಟ್ ಮಂಡಳಿ ಆಡಳಿಯದಲ್ಲಿ ಸರ್ಕಾರದ ಹಸ್ತಕ್ಷೇಪ ಐಸಿಸಿ ನಿಯಮಗಳ ಗಂಭೀರ ಉಲ್ಲಂಘನೆ. ಮಂಡಳಿಯು ಸ್ವಾಯತ್ತವಾಗಿ ಕಾರ್ಯನಿರ್ವಹಿಸುವ ಅಗತ್ಯವಿದ್ದು, ಸರ್ಕಾರದ ಹಸ್ತಕ್ಷೇಪವಿಲ್ಲ ಎಂಬುದನ್ನು ಐಸಿಸಿ ಖಚಿತಪಡಿಸಲು ಬಯಸುತ್ತದೆ’ ಎಂದಿದೆ. 

ಬೆಂಗಳೂರು ಮೂಲದ ಕಿವೀಸ್ ಆಲ್ರೌಂಡರ್ ರಚಿನ್‌ ರವೀಂದ್ರಗೆ ಒಲಿದ ಐಸಿಸಿ ತಿಂಗಳ ಆಟಗಾರ ಗೌರವ

ಇತ್ತೀಚೆಗಷ್ಟೇ ವಿಶ್ವಕಪ್‌ನ ಕಳಪೆ ಪ್ರದರ್ಶನ ಹಿನ್ನೆಲೆಯಲ್ಲಿ ಮಂಡಳಿಯನ್ನು ಲಂಕಾ ಸರ್ಕಾರ ವಜಾಗೊಳಿಸಿತ್ತು. ಬಳಿಕ ಅಲ್ಲಿನ ನ್ಯಾಯಾಲಯ ಮಂಡಳಿಯನ್ನು ಮತ್ತೆ ಮರುಸ್ಥಾಪಿಸಿ ಆದೇಶ ಹೊರಡಿಸಿತ್ತು.

ಎರಡು ದಿನದಲ್ಲಿ ಸ್ಪೋಟಕ ಮಾಹಿತಿ: ಕಳಪೆ ಆಟದ ಬಗ್ಗೆ ಲಂಕಾ ಆಯ್ಕೆಗಾರ!

ಕೊಲಂಬೊ: ವಿಶ್ವಕಪ್‌ನಲ್ಲಿ ಶ್ರೀಲಂಕಾದ ಕಳಪೆ ಪ್ರದರ್ಶನಕ್ಕೆ ಹೊರಗಿನವರ ಪಿತೂರಿಯೇ ಕಾರಣ ಎಂದು ಲಂಕಾ ಆಯ್ಕೆ ಸಮಿತಿ ಮುಖ್ಯಸ್ಥ ಪ್ರಮೋದಯಾ ವಿಕ್ರಮಸಿಂಘೆ ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ಇನ್ನೆರಡು ದಿನಗಳಲ್ಲಿ ಸ್ಫೋಟಕ ಮಾಹಿತಿ ನೀಡುತ್ತೇನೆ ಎಂದಿದ್ದಾರೆ. ತಂಡ ಶುಕ್ರವಾರ ಲಂಕಾಕ್ಕೆ ಮರಳಿದ್ದು, ಈ ವೇಳೆ ವಿಕ್ರಮಸಿಂಘೆ ಮಾತನಾಡಿದರು. ‘ಕಳಪೆ ಪ್ರದರ್ಶನಕ್ಕೆ ನಾನೇ ಜವಾಬ್ದಾರಿ ಹೊರುತ್ತೇನೆ. ಆದರೆ ಕಳಪೆ ಆಟಕ್ಕೆ ಹೊರಗಿನವರ ಪಿತೂರಿ ಕಾರಣ. ಇದನ್ನು ಶೀಘ್ರವೇ ಬಹಿರಂಗ ಪಡಿಸುತ್ತೇನೆ’ ಎಂದಿದ್ದಾರೆ.

World Cup 2023: ಉತ್ಸಾಹಿ ಅಫ್ಘಾನಿಸ್ತಾನ ತಂಡವನ್ನು ಬಗ್ಗುಬಡಿದ ದಕ್ಷಿಣ ಆಫ್ರಿಕಾ!

ಪಂದ್ಯ ನಡೆಸದೆ ಸ್ಕೋರ್‌ ಅಪ್ಡೇಟ್‌: ಫ್ರಾನ್ಸ್‌ ಕ್ರಿಕೆಟ್‌ ವಿರುದ್ಧ ಐಸಿಸಿ ತನಿಖೆ!

ಪ್ಯಾರಿಸ್‌: ಕ್ರಿಕೆಟ್‌ ಪಂದ್ಯಗಳನ್ನು ನಡೆಸದೆ ಸ್ಕೋರ್‌ ವಿವರ ದಾಖಲಿಸಿ ವಂಚಿಸುತ್ತಿದ್ದ ಬಗ್ಗೆ ಫ್ರಾನ್ಸ್‌ ಕ್ರಿಕೆಟ್‌ ವಿರುದ್ಧ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ತನಿಖೆಗೆ ಐಸಿಸಿ ಮುಂದಾಗಿದೆ. ಫ್ರಾನ್ಸ್‌ ಕ್ರಿಕೆಟ್‌ ಸಮಿತಿ ಐಸಿಸಿಯ ಅಸೋಸಿಯೇಟ್‌ ಸದಸ್ಯ ದೇಶವಾಗಿದ್ದು, ವಂಚನೆ, ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಎದುರಿಸುತ್ತಿದೆ. ಈ ಬಗ್ಗೆ ಫ್ರೆಂಚ್‌ ಮಾಧ್ಯಮಗಳು ವರದಿ ಮಾಡಿದ್ದು, ಕೆಲ ಪಂದ್ಯಗಳನ್ನು ನಡೆಸದೆ ಸ್ಕೋರ್‌ ವಿವರವನ್ನು ಸಲ್ಲಿಸುತ್ತಿದೆ ಎಂದು ಆರೋಪಿಸಿದೆ. ಆದರೆ ಈ ಎಲ್ಲಾ ಆರೋಪಗಳನ್ನು ಫ್ರಾನ್ಸ್‌ ಕ್ರಿಕೆಟ್‌ ನಿರಾಕರಿಸಿದೆ.

2ನೇ ಮಗುವಿನ ನಿರೀಕ್ಷೆಯಲ್ಲಿ ವಿರಾಟ್‌-ಅನುಷ್ಕಾ ದಂಪತಿ?

ಬೆಂಗಳೂರು: ಭಾರತದ ತಾರಾ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ 2ನೇ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಉಹಾಪೋಹ ಹರಿದಾಡುತ್ತಿದೆ. ಅನುಷ್ಕಾ ಅವರ ಬೇಬಿ ಬಂಪ್ ತೋರಿಸುತ್ತಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗುತ್ತಿದ್ದು, ಇದರೊಂದಿಗೆ ಅನುಷ್ಕಾ-ವಿರಾಟ್ 2ನೇ ಮಗುವಿಗೆ ಪೋಷಕರಾಗಲಿದ್ದಾರೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. 2017ರಲ್ಲಿ ವಿರಾಟ್‌-ಅನುಷ್ಕಾ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, 2021ರಲ್ಲಿ ಅನುಷ್ಕಾ ಮೊದಲ ಮಗುವಿಗೆ ಜನ್ಮ ನೀಡಿದ್ದರು.
 

Follow Us:
Download App:
  • android
  • ios