ಈ ಆಟದ ಮೈದಾನವನ್ನು ಅವರ ತಂದೆ ಈಶ್ವರನ್ ನಿರ್ಮಿಸಿದ್ದು ಮತ್ತು ಈ ಸ್ಟೇಡಿಯಂಗೆ ಅಭಿಮನ್ಯು ಹೆಸರನ್ನೇ ಇಡಲಾಗಿದೆ. ಈ ಸ್ಟೇಡಿಯಂನಲ್ಲಿ ಜನವರಿ 3 ರಂದು ಅಂದರೆ, ಇಂದಿನಿಂದ ಆರಂಭವಾದ ಬಂಗಾಳ ಹಾಗೂ ಉತ್ತರಾಖಂಡ ತಂಡದ ವಿರುದ್ಧದ ಪಂದ್ಯದಲ್ಲಿ ಅಭಿಮನ್ಯು ಈಶ್ವರನ್ ಮೈದಾನಕ್ಕಿಳಿದಿದ್ದು, ಬಂಗಾಳ ತಂಡದ ನಾಯಕರೂ ಆಗಿದ್ದಾರೆ.
59 ವರ್ಷದ ರಂಗನಾಥನ್ ಪರಮೇಶ್ವರನ್ ಈಶ್ವರನ್ (Ranganathan Parameswaran Easwaran) ಹೆಮ್ಮೆಯ ವ್ಯಕ್ತಿ. ಅವರು ಈ ಕ್ಷಣದಲ್ಲಿ ಅವಶ್ಯಕವಾಗಿ ಹೆಚ್ಚು ಹೆಮ್ಮೆ ಪಡಬೇಕು. ಏಕೆಂದರೆ, ಕ್ರಿಕೆಟಿಗ (Cricketer) ಅಭಿಮನ್ಯು ಈಶ್ವರನ್ (Abhimanyu Easwaran) ಅವರು ಇಂದು ಅಭಿಮನ್ಯು ಕ್ರಿಕೆಟ್ ಅಕಾಡೆಮಿ ಸ್ಟೇಡಿಯಂನಲ್ಲಿ (Abhimanyu Cricket Academy Stadium) ರಣಜಿ ಪಂದ್ಯವನ್ನಾಡಿದ್ದಾರೆ (Ranji match). ಈ ಆಟದ ಮೈದಾನವನ್ನು ಅವರ ತಂದೆ ಈಶ್ವರನ್ ನಿರ್ಮಿಸಿದ್ದು ಮತ್ತು ಈ ಸ್ಟೇಡಿಯಂಗೆ ಮಗನ ಹೆಸರನ್ನೇ ಇಡಲಾಗಿದೆ. ಈ ಸ್ಟೇಡಿಯಂನಲ್ಲಿ ಜನವರಿ 3 ರಂದು ಅಂದರೆ, ಇಂದಿನಿಂದ ಆರಂಭವಾದ ಬಂಗಾಳ ಹಾಗೂ ಉತ್ತರಾಖಂಡ ತಂಡದ ವಿರುದ್ಧದ ಪಂದ್ಯದಲ್ಲಿ ಅಭಿಮನ್ಯು ಈಶ್ವರನ್ ಮೈದಾನಕ್ಕಿಳಿದಿದ್ದು, ಬಂಗಾಳ ತಂಡದ ನಾಯಕರೂ ಆಗಿದ್ದಾರೆ. ಇನ್ನು, ಇತ್ತೀಚೆಗೆ ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದ ಭಾರತೀಯ ಕ್ರಿಕೆಟ್ ತಂಡದಲ್ಲಿಯೂ ಅಭಿಮನ್ಯು ತಂಡದಲ್ಲಿದ್ದರು.
ತನ್ನ ಮಗನನ್ನು ರಾಷ್ಟ್ರೀಯ ಮಟ್ಟದ ಆಟಗಾರನನ್ನಾಗಿ ಮಾಡುವ ಕನಸನ್ನು ನನಸಾಗಿಸಲು, 2005 ರಲ್ಲಿ ನಿರ್ಮಾಣ ಪ್ರಾರಂಭವಾದ ತರಬೇತಿ ಟ್ರ್ಯಾಕ್ ಮಾಡಲು ಪ್ರತಿಯೊಂದು ಪೈಸೆಯನ್ನು ಬಳಸಿರುವುದಾಗಿ ತಂದೆ ರಂಗನಾಥನ್ ಪರಮೇಶ್ವರನ್ ಈಶ್ವರನ್ ಹೇಳಿದ್ದಾರೆ. ಕ್ರೀಡಾಂಗಣಗಳು ಮತ್ತು ಪೆವಿಲಿಯನ್‌ಗಳಿಗೆ ಕ್ರಿಕೆಟಿಗರ ಹೆಸರನ್ನು ಇಡುವುದು ಹೊಸದೇನಲ್ಲ. ಆದರೂ, ಭಾರತೀಯ ಕ್ರಿಕೆಟಿಗನೊಬ್ಬ ತನ್ನ ಹೆಸರಿನ ಕ್ರೀಡಾಂಗಣದಲ್ಲಿ ಪ್ರಥಮ ದರ್ಜೆ ಪಂದ್ಯ ಆಡುತ್ತಿರುವುದು ಬಹುಶಃ ಇದೇ ಮೊದಲು ಎಂದು ಹೇಳಲಾಗಿದೆ.
ಇದನ್ನು ಓದಿ: Ranji Trophy: ಗೋವಾ ಎದುರು ಡ್ರಾಗೆ ಕರ್ನಾಟಕ ತೃಪ್ತಿ
ಈ ಹಿನ್ನೆಲೆ ಈ ಪಂದ್ಯದ ಆರಂಭಕ್ಕೂ ಮುನ್ನ ತಂದೆ ಹಾಗೂ ಮಗ ಹೆಚ್ಚು ಉತ್ಸಾಹದಿಂದ ಇದ್ದರು ಎಂದು ತಿಳಿದುಬಂದಿದೆ. ಹಾಗೂ, ಮಂಗಳವಾರ ಬೆಳಗ್ಗೆ ಈ ಪಂದ್ಯದ ಆರಂಭಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ ಎಂದೂ ತಿಳಿದುಬಂದಿದೆ. ಇನ್ನು, ಈ ಬಗ್ಗೆ ಸೋಮವಾರ ಸಂಜೆ ಮಾಧ್ಯಮಗಳಿಗೆ ಹೇಳಿದ ನೀಡಿದ 27 ವರ್ಷದ ಅಭಿಮನ್ಯು ಈಶ್ವರನ್, ನಾನು ಕಠಿಣ ಅಭ್ಯಾಸ ಮಾಡಿದ ಈ ಗ್ರೌಂಡ್ ಬಗ್ಗೆ ನನಗೆ ಅಚ್ಚುಮೆಚ್ಚಿನ ನೆನಪುಗಳಿವೆ. ಈ ಸ್ಥಳವು ನನಗೆ ಕ್ರೀಡೆಯನ್ನು ಮುಂದುವರಿಸಲು ನಿರ್ದೇಶನ ಮತ್ತು ಕೌಶಲ್ಯಗಳನ್ನು ನೀಡಿತು" ಎಂದು 27 ವರ್ಷದ ಅಭಿಮನ್ಯು ಗ್ರೂಪ್ ಬಿ ಪಂದ್ಯದ ಮುನ್ನಾದಿನದಂದು ಮಾಧ್ಯಮವೊಂದಕ್ಕೆ ಹೇಳಿದ್ದಾರೆ.
ತನ್ನ ಬಿಗಿಯಾದ ತರಬೇತಿ ವೇಳಾಪಟ್ಟಿಯಿಂದಾಗಿ, ತನ್ನ ನೆಚ್ಚಿನ ಸ್ಟೇಡಿಯಂನಲ್ಲಿ ತರಬೇತಿ ಪಡೆಯಲು ತಾನು ಬಯಸಿದಷ್ಟು ಸಮಯ ಸಿಗಲಿಲ್ಲ ಎಂದೂ 27 ವರ್ಷದ ಆಟಗಾರ ಹೇಳಿಕೊಂಡಿದ್ದಾರೆ. ಆದರೂ, ನಾನು ವರ್ಷದಲ್ಲಿ 20 ರಿಂದ 25 ದಿನಗಳವರೆಗೆ ಇಲ್ಲಿರಲು ನನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ. ಈ ಸ್ಟೇಡಿಯಂ ನನ್ನನ್ನು ತುಂಬಾ ಭಾವನಾತ್ಮಕವನ್ನಾಗಿಸಿದೆ. ಆದರೆ ನಿಜವಾಗಿಯೂ ನನ್ನ ತಂದೆಯ ಕಠಿಣ ಪರಿಶ್ರಮವೇ ನನಗೆ ಈ ಅವಕಾಶವನ್ನು ನೀಡಿದೆ ಎಂದೂ ಬಲಗೈ ಆಟಗಾರ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Ranji Trophy ಕೊನೆ ದಿನ ಗೋವಾ ಎದುರು ಗೆಲ್ಲುತ್ತಾ ಕರ್ನಾಟಕ?
ಇನ್ನೊಂದೆಡೆ, ತನ್ನ ಮಗ ತನ್ನ ಹೆಸರಿನ ಸ್ಟೇಡಿಯಂನಲ್ಲಿ ಆಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ 59 ವರ್ಷದ ರಂಗನಾಥನ್ ಪರಮೇಶ್ವರನ್ ಈಶ್ವರನ್, ನಿಜ ಹೇಳಬೇಕೆಂದರೆ, ಅಭಿಮನ್ಯು ರಣಜಿ ಪಂದ್ಯವನ್ನು ಆಡುವುದು ದೊಡ್ಡ ಬೆಳವಣಿಗೆ. ಆದರೆ, ನನ್ನ ಮಗ ದೇಶಕ್ಕಾಗಿ ಕನಿಷ್ಠ 100 ಪಂದ್ಯಗಳನ್ನು ಆಡುವವರೆಗೂ ನಾನು ತೃಪ್ತನಾಗುವುದಿಲ್ಲ ಹಾಗೂ, ನಾನು ನನ್ನನ್ನು ಸಂಪೂರ್ಣವಾಗಿ (ಕ್ರಿಕೆಟ್) ಆಟಕ್ಕೆ ಮೀಸಲಿಟ್ಟಿದ್ದೇನೆ ಮತ್ತು ಇಲ್ಲಿ ಕ್ರಿಕೆಟಿಗರಿಗೆ ತರಬೇತಿ ನೀಡಲು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ ಎಂದೂ ಹೇಳಿದರು.
ಇನ್ನು, ಈ ಸ್ಟೇಡಿಯಂ ಜಿಮ್, ಈಜುಕೊಳ, 60 ವಸತಿ ಕೊಠಡಿಗಳು, ಹಗಲು-ರಾತ್ರಿ ಆಟಗಳಿಗೆ ಫ್ಲಡ್‌ಲೈಟ್‌ಗಳು ಮತ್ತು 20 ಹಾಸ್ಟೆಲ್ ಕೊಠಡಿಗಳನ್ನು ಹೊಂದಿದೆ ಎಂದೂ ಅವರು ಹೇಳಿದರು. ನಾವು ಮಧ್ಯಪ್ರದೇಶ ಅಥವಾ ನಾಗಾಲ್ಯಾಂಡ್‌ಗೆ ಅನೇಕ ಪ್ರಮುಖ ಆಟಗಾರರನ್ನು ನೀಡಿದ್ದೇವೆ. ಇಲ್ಲಿ ತರಬೇತಿ ಪಡೆದ ಕ್ರಿಕೆಟಿಗರು ಕೀನ್ಯಾ ಮತ್ತು ಕುವೈತ್‌ಗಾಗಿಯೂ ಆಡುತ್ತಿದ್ದಾರೆ ಎಂದು ಚಾರ್ಟರ್ಡ್ ಅಕೌಂಟೆಂಟ್ ಸಹ ಆಗಿದ್ದ ರಂಗನಾಥನ್ ಪರಮೇಶ್ವರನ್ ಈಶ್ವರನ್ ಹೇಳಿದರು.
ಇದನ್ನೂ ಓದಿ: Ranji Trophy: ಮನೀಶ್ ಪಾಂಡೆ ಭರ್ಜರಿ ದ್ವಿಶತಕ, ಗೋವಾ ಮೇಲೆ ರಾಜ್ಯ ಸವಾರಿ..!
ಇನ್ನು, ಆರಂಭದಲ್ಲಿ ತಾನು ಅಧ್ಯಯನ ಮಾಡುತ್ತಲೇ ಐಸ್ ಕ್ರೀಮ್ ಮಾರಾಟ ಮಾಡಿದೆ, ಮತ್ತು ನಾನು ಸಿಎ ಆಗಿದ್ದು ಕಠಿಣ ಪರಿಶ್ರಮದ ಫಲಿತಾಂಶವಾಗಿದೆ. ನಾನು ಪತ್ರಿಕೆ ಮಾರಾಟಗಾರನಾಗಿದ್ದೆ ಎಂಬುದನ್ನೂ ಮರೆಯಬಾರದು ಎಂದೂ 59 ವರ್ಷದ ರಂಗನಾಥನ್ ಪರಮೇಶ್ವರನ್ ಈಶ್ವರನ್ ತಾನು ಪಟ್ಟ ಕಷ್ಟವನ್ನು ಸ್ಮರಿಸಿಕೊಂಡಿದ್ದಾರೆ.
ಈಶ್ವರನ್ ಅವರು ತಮ್ಮ ಮಗ ಹುಟ್ಟುವ 7 ವರ್ಷಗಳ ಮೊದಲು ಅಂದರೆ 1988 ರಲ್ಲಿ ಅಭಿಮನ್ಯು ಕ್ರಿಕೆಟ್ ಅಕಾಡೆಮಿಯನ್ನು ಪ್ರಾರಂಭಿಸಿದರು. ಇನ್ನು, ಈ ಕ್ರೀಡಾಂಗಣಕ್ಕೆ ಸಂಬಂಧಿಸಿದಂತೆ, ನಾನು 2005 ರಲ್ಲಿ ಡೆಹ್ರಾಡೂನ್‌ನ ಪುರ್ಕುಲ್ ಪ್ರದೇಶದಲ್ಲಿ ಭೂಮಿಯನ್ನು ಖರೀದಿಸಿದ್ದೆ ಮತ್ತು 2006 ರಲ್ಲಿ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದೆ. ಸ್ಟೇಡಿಯಂಗಾಗಿ ಬಳಸಲಾದ ಒಟ್ಟು ಮೊತ್ತದ ಬಗ್ಗೆ ನಾನು ಮಾತನಾಡಲು ಸಾಧ್ಯವಿಲ್ಲ. ಆದರೆ, ನನ್ನ ಬಳಿಯಿದ್ದ ಪ್ರತಿಯೊಂದು ಪೈಸೆಯನ್ನೂ ಈ ಕ್ರೀಡಾಂಗಣ ನಿರ್ಮಿಸಲು ನಾನು ಖರ್ಚು ಮಾಡಿದ್ದೇನೆ ಎಂದು ನಾನು ಹೇಳಬಲ್ಲೆ ಎಂದು ರಂಗನಾಥನ್ ಪರಮೇಶ್ವರನ್ ಈಶ್ವರನ್ ಹೇಳಿದ್ದಾರೆ.
ಇದನ್ನೂ ಓದಿ: Ranji Trophy: ಸಮರ್ಥ್ ಆಕರ್ಷಕ ಶತಕ, ಗೋವಾ ಎದುರು ಬೃಹತ್ ಮೊತ್ತದತ್ತ ಕರ್ನಾಟಕ..!
ಭಾರತದ ಟಾಪ್ ಕ್ರಿಕೆಟಿಗರಾದ ಶ್ರೇಯಸ್ ಅಯ್ಯರ್ ಮತ್ತು ಮೊಹಮ್ಮದ್ ಶಮಿ ಕೂಡ ಈ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದ್ದಾರೆ. ಈ ಮೈದಾನವನ್ನು ಬಿಸಿಸಿಐ ದತ್ತು ತೆಗೆದುಕೊಂಡಿದ್ದು, ದೇಶೀಯ ಪಂದ್ಯಗಳನ್ನು ಇಲ್ಲಿ ಆಯೋಜಿಸಲಾಗುತ್ತದೆ.
