* ಗೋವಾ ಎದುರು ಬೃಹತ್ ಮುನ್ನಡೆ ಗಳಿಸಿರುವ ಕರ್ನಾಟಕ* ರಣಜಿ ಟ್ರೋಫಿ ಟೂರ್ನಿಯಲ್ಲಿ ಮತ್ತೊಂದು ಗೆಲುವು ದಾಖಲಿಸುತ್ತಾ ಕರ್ನಾಟಕ* ಕರ್ನಾಟಕದ ಗೆಲುವಿಗೆ ಅಡ್ಡಗಾಲು ಹಾಕಿದ ಸುಯಾಸ್ ಪ್ರಭುದೇಸಾಯಿ

ಪಣಜಿ(ಡಿ.30): ಗೋವಾ ಬ್ಯಾಟರ್‌ಗಳ ಹೋರಾಟದ ಹೊರತಾಗಿಯೂ 2022-23ನೇ ಸಾಲಿನ ರಣಜಿ ಟ್ರೋಫಿಯಲ್ಲಿ ಕರ್ನಾಟಕ ಬೃಹತ್‌ ಇನ್ನಿಂಗ್‌್ಸ ಮುನ್ನಡೆಯ ಸನಿಹದಲ್ಲಿದೆ. ಆದರೆ ಇನ್ನು ಒಂದು ದಿನದ ಆಟ ಮಾತ್ರ ಬಾಕಿ ಇದ್ದು, ಕರ್ನಾಟಕ ಅಸಾಧಾರಣ ಬೌಲಿಂಗ್‌ ಪ್ರದರ್ಶನ ತೋರಿದರಷ್ಟೇ ಇನ್ನಿಂಗ್‌್ಸ ಗೆಲುವು ಸಾಧಿಸಬಹುದಾಗಿದೆ. ಒಂದು ವೇಳೆ ಪಂದ್ಯ ಡ್ರಾಗೊಂಡರೆ, ಈ ಋುತುವಿನಲ್ಲಿ 3 ಪಂದ್ಯಗಳಲ್ಲಿ 2 ಡ್ರಾಗೆ ತೃಪ್ತಿಪಟ್ಟಂತಾಗುತ್ತದೆ. ಇದರೊಂದಿಗೆ ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವ ಆಸೆಗೂ ಹಿನ್ನಡೆಯಾಗಬಹುದು.

ಕರ್ನಾಟಕದ 603/7ಕ್ಕೆ ಉತ್ತರವಾಗಿ ಬ್ಯಾಟ್‌ ಮಾಡುತ್ತಿರುವ ಗೋವಾ ಮೊದಲ ಇನ್ನಿಂಗ್‌್ಸನಲ್ಲಿ 3ನೇ ದಿನದಂತ್ಯಕ್ಕೆ 8 ವಿಕೆಟ್‌ಗೆ 321 ರನ್‌ ಕಲೆಹಾಕಿದ್ದು, ಇನ್ನೂ 282 ರನ್‌ ಹಿನ್ನಡೆಯಲ್ಲಿದೆ. 2ನೇ ದಿನ 1 ವಿಕೆಟ್‌ಗೆ 45 ರನ್‌ ಗಳಿಸಿದ್ದ ಗೋವಾ ಗುರುವಾರ ಕರ್ನಾಟಕ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿತು. ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡುವ ಸುಯಶ್‌ ಪ್ರಭುದೇಸಾಯಿ 165 ಎಸೆತಗಳಲ್ಲಿ 87 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು. ಮುಂಬೈನ ಮಾಜಿ ಆಟಗಾರ ಸಿದ್ದೇಶ್‌ ಲಾಡ್‌ 63 ರನ್‌ಗೆ ವಿಕೆಟ್‌ ಒಪ್ಪಿಸಿದರೆ, ಸಚಿನ್‌ ತೆಂಡುಲ್ಕರ್‌ ಪುತ್ರ ಅರ್ಜುನ್‌ ತೆಂಡುಲ್ಕರ್‌ ತಾವೆದುರಿಸಿದ ಮೊದಲ ಎಸೆತದಲ್ಲೇ ಸೊನ್ನೆಗೆ ಔಟಾದರು. ನಾಯಕ ದರ್ಶನ್‌ ಮಿಸಲ್‌ ಔಟಾಗದೆ 66 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದು, ಪಂದ್ಯವನ್ನು ಡ್ರಾನತ್ತ ಕೊಂಡೊಯ್ಯಲು ಹೋರಾಟ ಮುಂದುವರಿಸಲಿದ್ದಾರೆ. ಕರ್ನಾಟಕ ಪರ ಕೆ.ಗೌತಮ್‌ 3, ಶುಭಾಂಗ್‌ ಹೆಗ್ಡೆ ಹಾಗೂ ವಿಜಯ್‌ಕುಮಾರ್‌ ವೈಶಾಖ್‌ ತಲಾ 2 ವಿಕೆಟ್‌ ಪಡೆದಿದ್ದಾರೆ.

ಸ್ಕೋರ್‌: ಕರ್ನಾಟಕ 603/7ಡಿ.
ಗೋವಾ 321/8 (3ನೇ ದಿನ ದಂತ್ಯಕ್ಕೆ) (ಪ್ರಭುದೇಸಾಯಿ 87, ದರ್ಶನ್‌ 66*, ಗೌತಮ್‌ 3-109)

ಭಾರತ-ದ.ಆಫ್ರಿಕಾ ಯು-19 ವನಿತಾ ಟಿ20 ಪಂದ್ಯ ರದ್ದು

ಪ್ರಿಟೋರಿಯಾ: ಮಳೆಯಿಂದಾಗಿ ಭಾರತ ಹಾಗೂ ದ.ಆಫ್ರಿಕಾ ಅಂಡರ್‌-19 ಮಹಿಳಾ ತಂಡಗಳ ನಡುವಿನ 2ನೇ ಟಿ20 ಪಂದ್ಯ ರದ್ದುಗೊಂಡಿದೆ. ಪಂದ್ಯಕ್ಕೂ ಮುನ್ನ ಸುರಿದ ಭಾರೀ ಮಳೆಯಿಂದಾಗಿ ಟಾಸ್‌ ಕೂಡ ಸಾಧ್ಯವಾಗಲಿಲ್ಲ. ಬಳಿಕ ಮಳೆ ನಿಂತರೂ ಮೈದಾನ ಒದ್ದೆಯಾಗಿದ್ದ ಕಾರಣ ಪಂದ್ಯ ರದ್ದುಗೊಳಿಸಲಾಯಿತು. 

ಮುಗಿಯಿತಾ ಟೀಂ ಇಂಡಿಯಾದ ಈ ಆರು ಕ್ರಿಕೆಟಿಗರ ಟಿ20 ಕ್ರಿಕೆಟ್ ಬದುಕು..?

ಮೊದಲ ಪಂದ್ಯದಲ್ಲಿ 54 ರನ್‌ ಭರ್ಜರಿ ಗೆಲುವು ದಾಖಲಿಸಿದ್ದ ಭಾರತ ತಂಡ ಸದ್ಯ 5 ಪಂದ್ಯಗಳ ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆಯಲ್ಲಿದೆ. ಸರಣಿಯ 3ನೇ ಪಂದ್ಯ ಶನಿವಾರ ನಡೆಯಲಿದೆ. ಮುಂಬರುವ ಚೊಚ್ಚಲ ಆವೃತ್ತಿಯ ಅಂಡರ್‌-19 ಟಿ20 ವಿಶ್ವಕಪ್‌ಗೆ ಅಭ್ಯಾಸ ನಡೆಸಲು ಈ ಸರಣಿ ಆಯೋಜಿಸಲಾಗಿದೆ.