Asianet Suvarna News Asianet Suvarna News

Ranji Trophy: ಗೋವಾ ಎದುರು ಡ್ರಾಗೆ ಕರ್ನಾಟಕ ತೃಪ್ತಿ

ಫಾಲೋ ಆನ್‌ಗೆ ತುತ್ತಾದರೂ ಹೋರಾಡಿ ಡ್ರಾ ಸಾಧಿಸಿದ ಗೋವಾ
ಈ ಋುತುವಿನಲ್ಲಿ 3 ಪಂದ್ಯಗಳಲ್ಲಿ 2ನೇ ಡ್ರಾ, ಆದರೂ ಗುಂಪಿನಲ್ಲಿ ಕರ್ನಾಟಕ ಅಗ್ರಸ್ಥಾನ
ಮೊದಲ ಇನ್ನಿಂಗ್‌್ಸ ಮುನ್ನಡೆ ಆಧಾರದಲ್ಲಿ ರಾಜ್ಯ ತಂಡ 3 ಅಂಕಗಳನ್ನು ಸಂಪಾದನೆ

Ranji Trophy Karnataka vs Goa match ends in Draw kvn
Author
First Published Dec 31, 2022, 10:15 AM IST

ಪಣಜಿ(ಡಿ.31): 2022-23ನೇ ಸಾಲಿನ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಾನಾಡಿದ 3 ಪಂದ್ಯಗಳಲ್ಲಿ 2 ಡ್ರಾಗೆ ತೃಪ್ತಿಪಟ್ಟಿದೆ. ಶುಕ್ರವಾರ ಫಾಲೋ ಆನ್‌ಗೆ ತುತ್ತಾದರೂ 2ನೇ ಇನ್ನಿಂಗ್ಸಲ್ಲಿ ಕರ್ನಾಟಕ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಗೋವಾ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಯಶಸ್ವಿಯಾಯಿತು. ಮೊದಲ ಇನ್ನಿಂಗ್‌್ಸ ಮುನ್ನಡೆ ಆಧಾರದಲ್ಲಿ ರಾಜ್ಯ ತಂಡ 3 ಅಂಕಗಳನ್ನು ಸಂಪಾದಿಸಿದ್ದು, ಒಟ್ಟು 13 ಅಂಕಗಳೊಂದಿಗೆ ಎಲೈಟ್‌ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ಛತ್ತೀಸ್‌ಗಢ, ಕೇರಳ ತಂಡಗಳೂ ತಲಾ 13 ಅಂಕಹೊಂದಿದ್ದು, ಕ್ರಮವಾಗಿ 2, 3ನೇ ಸ್ಥಾನದಲ್ಲಿದೆ. ಗೋವಾ 5 ಅಂಕದೊಂದಿಗೆ 6ನೇ ಸ್ಥಾನದಲ್ಲಿದೆ.

3ನೇ ದಿನ ಮೊದಲ ಇನ್ನಿಂಗ್‌್ಸನಲ್ಲಿ 8 ವಿಕೆಟ್‌ಗೆ 321 ರನ್‌ ಕಲೆಹಾಕಿದ್ದ ಗೋವಾ ಶುಕ್ರವಾರ 373ಕ್ಕೆ ಆಲೌಟಾಗಿ 230 ರನ್‌ ಹಿನ್ನಡೆ ಅನುಭವಿಸಿತು. 66 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದ ನಾಯಕ ದರ್ಶನ್‌ ಮಿಸಲ್‌ 95ಕ್ಕೆ ಔಟಾಗಿ ಶತಕ ವಂಚಿತರಾದರು.

2ನೇ ಇನ್ನಿಂಗ್‌್ಸ ಆರಂಭಿಸಿದ ಗೋವಾ ಎಚ್ಚರಿಕೆಯ ಆಟವಾಡಿತು. 45 ಓವರ್‌ ಬ್ಯಾಟ್‌ ಮಾಡಿದ ತಂಡ 3 ವಿಕೆಟ್‌ಗೆ 150 ರನ್‌ ಗಳಿಸಿದ್ದಾಗ ಪಂದ್ಯ ಡ್ರಾ ಎಂದು ಘೋಷಿಸಲಾಯಿತು. ಮೊದಲ ಇನ್ನಿಂಗ್‌್ಸನಲ್ಲೂ ಮಿಂಚಿದ್ದ ಸುಯಶ್‌ ಪ್ರಭುದೇಸಾಯಿ 61 ರನ್‌ ಸಿಡಿಸಿ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಕರ್ನಾಟಕ ತನ್ನ 4ನೇ ಪಂದ್ಯದಲ್ಲಿ ಜ.3ರಿಂದ ಛತ್ತೀಸ್‌ಗಢ ವಿರುದ್ಧ ಕಣಕ್ಕಿಳಿಯಲಿದೆ.

ಸ್ಕೋರ್‌: 
ಕರ್ನಾಟಕ 603/7ಡಿ.,
ಗೋವಾ 373/10 ಮತ್ತು 150/3 (ಪ್ರಭುದೇಸಾಯಿ 61*, ವೈಶಾಖ್‌ 1-12)

ರಣಜಿ: ಮುಂಬೈ ವಿರುದ್ಧ ಸೌರಾಷ್ಟ್ರಕ್ಕೆ ಚೊಚ್ಚಲ ಜಯ!

ಮುಂಬೈ: 41 ಬಾರಿ ಚಾಂಪಿಯನ್‌ ಮುಂಬೈ ವಿರುದ್ಧ ಸೌರಾಷ್ಟ್ರ ರಣಜಿ ಟ್ರೋಫಿ ಇತಿಹಾಸದಲ್ಲೇ ಚೊಚ್ಚಲ ಗೆಲುವು ದಾಖಲಿಸಿದೆ. ಶುಕ್ರವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಸೌರಾಷ್ಟ್ರ 48 ರನ್‌ಗಳ ಜಯಭೇರಿ ಬಾರಿಸಿತು. 

ಗೆಲುವಿಗೆ 280 ರನ್‌ ಗುರಿ ಪಡೆದಿದ್ದ ಮುಂಬೈ 2ನೇ ಇನ್ನಿಂಗ್‌್ಸನಲ್ಲಿ 231 ರನ್‌ಗೆ ಸರ್ವಪತನ ಕಂಡಿತು. ಇದು ರಣಜಿ ಕ್ರಿಕೆಟ್‌ನಲ್ಲಿ ಉಭಯ ತಂಡಗಳ ನಡುವಿನ 59ನೇ ಮುಖಾಮುಖಿಯಾಗಿತ್ತು. 2012-13, 2015-16ರಲ್ಲಿ ಮುಂಬೈ ವಿರುದ್ಧ ರಣಜಿ ಫೈನಲ್‌ನಲ್ಲಿ ಸೌರಾಷ್ಟ್ರ ಸೋಲುಂಡಿತ್ತು.

ರಣಜಿ: ತಮಿಳ್ನಾಡಿಗೆ ಮತ್ತೆ ಕೈಕೊಟ್ಟ ಅದೃಷ್ಟ

ನವದೆಹಲಿ: ಈ ಆವೃತ್ತಿಯ ರಣಜಿಯ 3ನೇ ಪಂದ್ಯದಲ್ಲೂ ತಮಿಳುನಾಡಿಗೆ ಅದೃಷ್ಟಕೈಕೊಟ್ಟಿದ್ದು, ಮತ್ತೆ ಗೆಲುವಿನಿಂದ ವಂಚಿತವಾಗಿದೆ. ದೆಹಲಿ ವಿರುದ್ಧ 2ನೇ ಇನ್ನಿಂಗ್‌್ಸನಲ್ಲಿ 24 ಓವರಲ್ಲಿ 139 ರನ್‌ ಗುರಿ ಪಡೆದಿದ್ದ ತಮಿಳುನಾಡು 6 ಓವರಲ್ಲಿ 3 ವಿಕೆಟ್‌ಗೆ 54 ರನ್‌ ಸಿಡಿಸಿ ಗೆಲುವಿನತ್ತ ಮುನ್ನುಗ್ಗುತ್ತಿತ್ತು. ಆದರೆ ಮಂದ ಬೆಳಕಿನ ಕಾರಣ ಅಂಪೈರ್‌ಗಳು ಪಂದ್ಯ ಡ್ರಾ ಎಂದು ಘೋಷಿಸಿದರು. 

Ranji Trophy ಕೊನೆ ದಿನ ಗೋವಾ ಎದುರು ಗೆಲ್ಲುತ್ತಾ ಕರ್ನಾಟಕ?

ಇದಕ್ಕೂ ಮೊದಲು ಆರಂಭಿಕ ಪಂದ್ಯದಲ್ಲಿ ಹೈದಾರಾಬಾದ್‌ ವಿರುದ್ಧವೂ ಇದೇ ರೀತಿ ತಮಿಳುನಾಡು ಗೆಲುವು ತಪ್ಪಿಸಿಕೊಂಡಿತ್ತು. 11 ಓವರಲ್ಲಿ 144 ರನ್‌ ಗುರಿ ಪಡೆದು 7 ಓವರಲ್ಲಿ 108 ರನ್‌ ಗಳಿಸಿದರೂ ಮಂದ ಬೆಳಕಿನಿಂದಾಗಿ ಪಂದ್ಯ ಡ್ರಾಗೊಂಡಿತ್ತು. ಬಳಿಕ 2ನೇ ಪಂದ್ಯದಲ್ಲಿ ಆಂಧ್ರಪ್ರದೇಶ ವಿರುದ್ಧ ಚೇಸಿಂಗ್‌ ವೇಳೆ ಕೊನೆ 39 ರನ್‌ಗೆ 7 ವಿಕೆಟ್‌ ಕಳೆದುಕೊಂಡು 8 ರನ್‌ಗಳ ವೀರೋಚಿತ ಸೋಲನುಭವಿಸಿತ್ತು.

Follow Us:
Download App:
  • android
  • ios