ಏಷ್ಯಾಕಪ್ ಟೂರ್ನಿಗೂ ಮುನ್ನ ನ್ಯಾಷನಲ್ ಕ್ಯಾಂಪ್‌ನಲ್ಲಿ ಪಾಲ್ಗೊಂಡಿರುವ ಟೀಂ ಇಂಡಿಯಾ ಆಟಗಾರರುಬೆಂಗಳೂರಿನ ಆಲೂರಿನಲ್ಲಿ ನಡೆಯುತ್ತಿರುವ ನ್ಯಾಷನಲ್ ಕ್ರಿಕೆಟ್ ಕ್ಯಾಂಪ್ಯೋ ಯೋ ಟೆಸ್ಟ್ ಪಾಸ್ ಮಾಡಿದ ಬೆನ್ನಲ್ಲೇ ಕೊಹ್ಲಿಗೆ ಶಿಸ್ತಿನ ಪಾಠ ಮಾಡಿದ ಬಿಸಿಸಿಐ ಬಾಸ್‌ಗಳು

ಬೆಂಗಳೂರು(ಆ.26): ಏಷ್ಯಾಕಪ್‌ಗೂ ಮುನ್ನ ನಗರದ ಆಲೂರು ಕೆಎಸ್‌ಸಿಎ ಮೈದಾನದಲ್ಲಿ ನಡೆದ ಯೋ-ಯೋ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ವಿರಾಟ್‌ ಕೊಹ್ಲಿ ಸಾಮಾಜಿಕ ತಾಣಗಳಲ್ಲಿ ಬಹಿರಂಗಪಡಿಸಿದ್ದಕ್ಕೆ ಬಿಸಿಸಿಐ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅಲ್ಲದೇ, ಇಂತಹ ಆಂತರಿಕ ಮಾಹಿತಿಗಳನ್ನು ಸಾಮಾಜಿಕ ತಾಣಗಳಲ್ಲಿ ಪ್ರಕಟಿಸದಂತೆ ಕೊಹ್ಲಿ ಸೇರಿದಂತೆ ತಂಡದ ಎಲ್ಲಾ ಆಟಗಾರರಿಗೆ ಸೂಚನೆ ನೀಡಿದೆ. 

ಶಿಬಿರದಲ್ಲಿನ ಫೋಟೋಗಳನ್ನು ಪ್ರಕಟಿಸಿದರೂ, ಸೂಕ್ಷ್ಮ ಮಾಹಿತಿಗಳನ್ನು ಬಹಿರಂಗಪಡಿಸದಂತೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ ಎಂದು ಹೇಳಲಾಗುತ್ತಿದೆ. ಗುರುವಾರ ತಮ್ಮ ಫೋಟೋವನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿದ್ದ ಕೊಹ್ಲಿ, ಯೋ-ಯೋ ಪರೀಕ್ಷೆಯಲ್ಲಿ 17.2 ಅಂಕಗಳನ್ನು ಪಡೆದಿದ್ದಾಗಿ ತಿಳಿಸಿದ್ದರು.

ಶ್ರೇಯಸ್ ಅಯ್ಯರ್ ಏಷ್ಯಾಕಪ್ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದು ಹೇಗೆ ಗೊತ್ತಾ..?

ಯೋ-ಯೋ ಟೆಸ್ಟ್‌ನಲ್ಲಿ ಗಿಲ್‌ ನಂ.1: 18.7 ಅಂಕ!

ಬೆಂಗಳೂರು: ಏಷ್ಯಾಕಪ್‌ ಏಕದಿನ ಟೂರ್ನಿಗೆ ಭಾರತ ತಂಡ ಇಲ್ಲಿನ ಆಲೂರು ಕೆಎಸ್‌ಸಿಎ ಮೈದಾನದಲ್ಲಿ ಸಿದ್ಧತೆ ನಡೆಸುತ್ತಿದ್ದು, ಆಟಗಾರರಿಗೆ ಬಿಸಿಸಿಐ ಹಲವು ರೀತಿಯ ಫಿಟ್ನೆಸ್‌ ಪರೀಕ್ಷೆಗಳನ್ನು ನಡೆಸುತ್ತಿದೆ. ಆಟಗಾರರ ವೇಗ, ಸಹಿಷ್ಣುತೆ, ನಮ್ಯತೆ, ಚುರುಕುತನವನ್ನು ಪರೀಕ್ಷಿಸಲು ನಡೆಸುವ ಯೋ-ಯೋ ಟೆಸ್ಟ್‌ನಲ್ಲಿ ಯುವ ಬ್ಯಾಟರ್‌ ಶುಭ್‌ಮನ್‌ ಗಿಲ್‌ 18.7 ಅಂಕ ಪಡೆಯುವ ಮೂಲಕ ಮೊದಲ ಸ್ಥಾನ ಗಳಿಸಿರುವುದಾಗಿ ತಿಳಿದುಬಂದಿದೆ.

ಭಾರತ ತಂಡದ ಆಟಗಾರರಿಗೆ ಕನಿಷ್ಠ 16.5 ಅಂಕಗಳನ್ನು ನಿಗದಪಡಿಸಲಾಗಿದ್ದು, ವಿರಾಟ್‌ ಕೊಹ್ಲಿ 17.2 ಅಂಕ ಗಳಿಸಿದ್ದಾಗಿ ಗುರುವಾರ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಐರ್ಲೆಂಡ್‌ ಟಿ20 ಸರಣಿ ಮುಗಿಸಿ ವಾಪಸಾಗಿರುವ ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್‌ ಕೃಷ್ಣ, ತಿಲಕ್‌ ವರ್ಮಾ, ಸಂಜು ಸ್ಯಾಮ್ಸನ್‌ ಹಾಗೂ ಗಾಯದಿಂದ ಇನ್ನೂ ಸಂಪೂರ್ಣ ಚೇತರಿಸಿಕೊಳ್ಳದ ಕೆ ಎಲ್ ರಾಹುಲ್‌ ಹೊರತುಪಡಿಸಿ ಇನ್ನೆಲ್ಲಾ ಆಟಗಾರರು ಯೋ-ಯೋ ಪರೀಕ್ಷೆ ಮುಕ್ತಾಯಗೊಳಿಸಿದ್ದಾರೆ ಎನ್ನಲಾಗಿದೆ.

Asia Cup 2023 ಟೂರ್ನಿಗೂ ಮುನ್ನ Yo Yo Test ಪಾಸ್ ಮಾಡಿದ ವಿರಾಟ್ ಕೊಹ್ಲಿ..! ಗಳಿಸಿದ ಪಾಯಿಂಟ್ ಎಷ್ಟು?

ಶುಕ್ರವಾರ ಮ್ಯಾಚ್‌ ಪ್ರ್ಯಾಕ್ಟಿಸ್‌ ನಡೆಸಲಾಗಿದ್ದು, ರೋಹಿತ್‌-ಗಿಲ್‌, ಕೊಹ್ಲಿ-ಶ್ರೇಯಸ್‌ ಅಯ್ಯರ್‌, ಹಾರ್ದಿಕ್‌-ಜಡೇಜಾ ಸುಮಾರು ಒಂದು ಗಂಟೆ ಕಾಲ ಒಟ್ಟಿಗೆ ಬ್ಯಾಟ್‌ ಮಾಡಿದರು. ಆಗಸ್ಟ್‌ 29ರ ವರೆಗೂ ಶಿಬಿರ ನಡೆಯಲಿದ್ದು, 30ರಂದು ತಂಡ ಬೆಂಗಳೂರಿನಿಂದ ಶ್ರೀಲಂಕಾದ ಕೊಲಂಬೊಗೆ ಪ್ರಯಾಣಿಸಲಿದೆ.

ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆಗಸ್ಟ್ 30ರಿಂದ ಸೆಪ್ಟೆಂಬರ್ 17ರ ವರೆಗೆ ಪಾಕಿಸ್ತಾನ, ಶ್ರೀಲಂಕಾದಲ್ಲಿ ನಡೆಯಲಿದ್ದು, ಸೆಪ್ಟೆಂಬರ್ 2ರಂದು ಪಾಕ್‌ ವಿರುದ್ಧ ಆಡುವ ಮೂಲಕ ಭಾರತ ಅಭಿಯಾನ ಆರಂಭಿಸಲಿದೆ.

ಏಷ್ಯಾಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡ ಹೀಗಿದೆ ನೋಡಿ:

ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್‌, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್(ಮೀಸಲು ಆಟಗಾರ).