ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆಗಸ್ಟ್ 30ರಿಂದ ಸೆಪ್ಟೆಂಬರ್ 17ರ ವರೆಗೆ ಪಾಕಿಸ್ತಾನ, ಶ್ರೀಲಂಕಾದಲ್ಲಿ ನಡೆಯಲಿದ್ದು, ಸೆಪ್ಟೆಂಬರ್ 2ರಂದು ಪಾಕ್‌ ವಿರುದ್ಧ ಆಡುವ ಮೂಲಕ ಭಾರತ ಅಭಿಯಾನ ಆರಂಭಿಸಲಿದೆ.

ಬೆಂಗಳೂರು(ಆ.25): ಇಂಜುರಿಯಿಂದಾಗಿ ಟೀಂ ಇಂಡಿಯಾದಿಂದ ಔಟಾಗಿದ್ದ ಶ್ರೇಯಸ್ ಅಯ್ಯರ್, ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಏಷ್ಯಾಕಪ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆದ್ರೆ, ತಂಡಕ್ಕೆ ವಾಪಸ್ಸಾಗಿದ್ರೂ, ಶ್ರೇಯಸ್ ಅಯ್ಯರ್ ಇನ್ನು ಫುಲ್ ಫಿಟ್​ ಆಗಿಲ್ಲ ಅಂತ, ಖುದ್ದು ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್​ ಅಗರ್​ಕರ್ ತಿಳಿಸಿದ್ದಾರೆ. ಇದರಿಂದ ಇನ್ನು ಫಿಟ್​ ಇಲ್ಲದ ಅಯ್ಯರ್‌ಗೆ ತಂಡದಲ್ಲಿ ಹೇಗೆ ಸ್ಥಾನ ಸಿಕ್ತು ಅನ್ನೋ ಪ್ರಶ್ನೆ ಮೂಡಿತ್ತು. ಆದ್ರೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. 

ಇಂಜುರಿ ನಂತರ ಅಯ್ಯರ್​ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ರಿಹ್ಯಾಬ್ ಸೆಂಟರ್‌ನಲ್ಲಿ ಚೇತರಿಸಿ ಕೊಂಡು ಫುಲ್ ಫಿಟ್ ಆಗಿದ್ರು. ಶ್ರೇಯಸ್​ ಫಿಟ್​ನೆಸ್ ಸಾಧಿಸಿದ್ರು, ಅವರ ಮ್ಯಾಚ್​ ಫಿಟ್ನೆಸ್​ ಬಗ್ಗೆ ಅನುಮಾನಗಳಿದ್ವು. ಆದ್ರೆ, ಶ್ರೇಯಸ್ ಎನ್‌ಸಿಎ ಪ್ರಾಕ್ಟೀಸ್ ಮ್ಯಾಚ್​ನಲ್ಲಿ ತಮ್ಮ ಫಿಟ್ನೆಸ್ ಸಾಬೀತುಪಡಿಸಿದ್ರು. 

ಎನ್‌ಸಿಎ ಪ್ರಾಕ್ಟೀಸ್ ಮ್ಯಾಚ್​ನಲ್ಲಿ ಅಬ್ಬರಿಸಿದ್ದ ಮುಂಬೈಕರ್..!

ಯೆಸ್, ಬೆನ್ನು ನೋವಿನಿಂದ ಚೇತರಿಸಿಕೊಂಡು, ಡೈರೆಕ್ಟ್ ಏಷ್ಯಾಕಪ್​ನಂತ ಟೂರ್ನಿಯಲ್ಲಿ ಆಡೋದು ಸುಲಭವಲ್ಲ. ಇದೇ ಕಾರಣಕ್ಕೆ NCAನಲ್ಲಿ ಪ್ರಾಕ್ಟೀಸ್ ಮ್ಯಾಚ್​ನಲ್ಲಿ ಶ್ರೇಯಸ್ ಅಯ್ಯರ್​ರನ್ನ ಆಡಿಸಲಾಗಿತ್ತು. ಈ ಮ್ಯಾಚ್​ನಲ್ಲಿ ಕಣಕ್ಕಿಳಿದ ಮುಂಬೈಕರ್ ಅದ್ಭುತವಾಗಿ ಬ್ಯಾಟ್ ಬೀಸಿ ತಮ್ಮ ದೈಹಿಕ ಕ್ಷಮತೆಯನ್ನ ಪ್ರೂವ್ ಮಾಡಿದ್ರು. 

ಆರಂಭವಾಯಿತು ಏಕದಿನ ವಿಶ್ವಕಪ್ ಟಿಕೆಟ್ ಸೇಲ್..! ಎಲ್ಲಿ ಖರೀದಿಸಬಹುದು?

ಎನ್‌ಸಿಎ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿ 199 ರನ್​ ಸಿಡಿಸಿದ್ರು. ಆ ನಂತರ 50 ಓವರ್​ ಮುಗಿಯುವವರೆಗೆ ಫೀಲ್ಡಿಂಗ್ ಮಾಡಿದ್ರು. ಇದೇ ಕಾರಣಕ್ಕೆ KKR ಕ್ಯಾಪ್ಟನ್​ನ ಏಷ್ಯಾಕಪ್ ತಂಡಕ್ಕೆ ಆಯ್ಕೆ ಮಾಡಲಾಗಿದೆ.

ಮಿಡಲ್ ಆರ್ಡರ್‌ನ ನಂಬಿಕಸ್ಥ ಬ್ಯಾಟ್ಸ್​​ಮನ್..! 

ಯೆಸ್, ಶ್ರೇಯಸ್ ಅಯ್ಯರ್ ಏಕದಿನ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಮಿಡಲ್ ಆರ್ಡರ್ ನಂಬಿಕಸ್ಥ ಬ್ಯಾಟ್ಸ್​​ಮನ್. ನಂಬರ್​ ಪೋರ್​ನಲ್ಲಿ ಕ್ರೀಸ್​ಗಿಳಿಯೋ ಅಯ್ಯರ್​, ಈವರೆಗು 20 ಪಂದ್ಯಗಳಲ್ಲಿ 4ನೇ ಕ್ರಮಾಂಕ ದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. 47.35ರ ಸರಾಸರಿಯಲ್ಲಿ 805 ರನ್ ಕಲೆಹಾಕಿದ್ದಾರೆ. ಇದ್ರಲ್ಲಿ ಎರಡು ಶತಕ ಮತ್ತು 5 ಅರ್ಧಶತಕ ಸೇರಿವೆ

ಈ ಅಂಕಿಅಂಶಗಳೇ ಶ್ರೇಯಸ್ ಎಂತಾ ಗ್ರೇಟ್ ಬ್ಯಾಟ್ಸ್​​ಮನ್ ಅನ್ನೋದನ್ನ ಹೇಳುತ್ವೆ. ಅದೇನೆ ಇರಲಿ, ಏಷ್ಯಾಕಪ್ ಮುಗಿಯೋದ್ರೊಳಗೆ ಶ್ರೇಯಸ್ ಸಂಪೂರ್ಣ ಫಿಟ್ ಆಗಲಿ, ಮುಂಬರೋ ಏಕದಿನ ವಿಶ್ವಕಪ್​ನಲ್ಲಿ ಅಬ್ಬರಿಸಲಿ ಅನ್ನೋದೆ ನಮ್ಮ ಆಶಯ.

ಏಷ್ಯಾಕಪ್‌ ಟೂರ್ನಿಗೆ ಶಾರ್ದೂಲ್‌ಗಿಂತ ಈ ಆಟಗಾರ ಒಳ್ಳೆಯ ಆಯ್ಕೆಯಾಗುತ್ತಿದ್ದ: ಗೌತಮ್ ಗಂಭೀರ್

ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆಗಸ್ಟ್ 30ರಿಂದ ಸೆಪ್ಟೆಂಬರ್ 17ರ ವರೆಗೆ ಪಾಕಿಸ್ತಾನ, ಶ್ರೀಲಂಕಾದಲ್ಲಿ ನಡೆಯಲಿದ್ದು, ಸೆಪ್ಟೆಂಬರ್ 2ರಂದು ಪಾಕ್‌ ವಿರುದ್ಧ ಆಡುವ ಮೂಲಕ ಭಾರತ ಅಭಿಯಾನ ಆರಂಭಿಸಲಿದೆ.

ಏಷ್ಯಾಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡ ಹೀಗಿದೆ ನೋಡಿ:

ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್‌, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ