ಬೇರೆ ದೇಶದ ಕ್ರಿಕೆಟರ್ಸ್​ ತಮ್ಮಿಷ್ಟದ ಯಾವುದೇ ಲೀಗ್​ನಲ್ಲಿ ಬೇಕಾದ್ರು ಆಡಬಹುದು ಆದರೆ ಭಾರತೀಯ ಕ್ರಿಕೆಟರ್ಸ್​ಗೆ ಇದು ಸಾಧ್ಯವಿಲ್ಲನಿವೃತ್ತಿಯಾಗಿ​, IPLಗೆ ಗುಡ್​ ಬೈ ಹೇಳಿದ್ರು ಬೇರೆ ಲೀಗ್ ಆಡುವಂತಿಲ್ಲ..!

ಬೆಂಗಳೂರು(ಜು.04): ಬಿಸಿಸಿಐ ಕ್ರಿಕೆಟ್​ ಜಗತ್ತಿನ ಶ್ರೀಮಂತ ಪವರ್​ ಫುಲ್ ಬೋರ್ಡ್. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ BCCI ಹೇಳಿದ್ದೇ ವೇದ ವಾಕ್ಯ. ICCಯನ್ನಷ್ಟೇ ಅಲ್ಲ, ಭಾರತೀಯ ಕ್ರಿಕೆಟರ್ಸ್​​ನ ಕೂಡ BCCI ಕಂಟ್ರೋಲ್ ಮಾಡುತ್ತೆ. BCCI ನಿಂದ ಕೋಟಿ ಕೋಟಿ ವೇತನ ಪಡೆಯೋ ಟೀಂ ಇಂಡಿಯಾ ಆಟಗಾರರು BCCI ಅನುಮತಿ ಇಲ್ಲದೇ ಏನನ್ನೂ ಮಾಡುವಂತಿಲ್ಲ.

ಯೆಸ್, ಬೇರೆ ದೇಶದ ಕ್ರಿಕೆಟರ್ಸ್​ ತಮ್ಮಿಷ್ಟದ ಯಾವುದೇ ಲೀಗ್​ನಲ್ಲಿ ಬೇಕಾದ್ರು ಆಡ್ಬಹುದು. ಆದ್ರೆ, ಭಾರತೀಯ ಕ್ರಿಕೆಟರ್ಸ್​ಗೆ ಇದು ಸಾಧ್ಯವಿಲ್ಲ. ಯಾಕಂದ್ರೆ, ಅದಕ್ಕೆ BCCI ಅನುಮತಿ ನೀಡಲ್ಲ. ಒಂದು ವೇಳೆ ಬೇರೆ ಲೀಗ್​ನಲ್ಲಿ ಆಡಲೇಬೇಕಂದ್ರೆ ಆ ಆಟಗಾರ IPL ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಹೇಳಿ, BCCIನಿಂದ NO OBJECTION CERTIFICATE ಪಡೆದುಕೊಳ್ಳಬೇಕು. NOC ಸಿಕ್ಕ ನಂತರವೇ ಯಾವುದೇ ಲೀಗ್​ನಲ್ಲಿ ಆಡಬಹುದು. 

ನಿವೃತ್ತಿಯಾಗಿ​, IPLಗೆ ಗುಡ್​ ಬೈ ಹೇಳಿದ್ರು ಬೇರೆ ಲೀಗ್ ಆಡುವಂತಿಲ್ಲ..!

ಸದ್ಯ ಟೀಂ ಇಂಡಿಯಾದ ಹಲವು ಮಾಜಿ ಆಟಗಾರರು IPLಗೆ ಗುಡ್​ಬೈ ಹೇಳಿದ್ದಾರೆ. ಇದರಿಂದ ವಿವಿಧ ದೇಶಗಳ ಲೀಗ್​​ ಕ್ರಿಕೆಟ್​ನಲ್ಲಿ ಆಡ್ತಿದ್ದಾರೆ. ರಾಬಿನ್ ಉತ್ತಪ್ಪ, ಯೂಸೂಫ್ ಪಠಾಣ್ ILT ದುಬೈ ಲೀಗ್​ನಲ್ಲಿ ಭಾಗವಹಿಸ್ತಿದ್ದಾರೆ. ಅಂಬಟಿ ರಾಯುಡು ಅಮೇರಿಕಾದ ಮೇಜರ್ ಲೀಗ್​ ಕ್ರಿಕೆಟ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಒಡೆತನದ ಟೆಕ್ಸಾಸ್ ಸೂಪರ್ ಕಿಂಗ್ಸ್ ಪರ ಆಡಲು ರೆಡಿಯಾಗಿದ್ದಾರೆ. 

Ashes 2023: ಆಸಿಸ್ ಸ್ಪಿನ್ನರ್ ಲಯನ್​ ಕೆಚ್ಚೆದೆಯ ಹೋರಾಟಕ್ಕೆ ಕ್ರಿಕೆಟ್ ಜಗತ್ತು ಫಿದಾ..!

ರಾಯುಡು ಜೊತೆಗೆ ಇನ್ನು ಕೆಲ ಭಾರತೀಯ ಕ್ರಿಕೆಟರ್ಸ್ ಬೇರೆ ದೇಶಗಳ ಲೀಗ್​ನಲ್ಲಿ ಆಡಲು ಸಿದ್ಧರಾಗಿದ್ದಾರೆ. ಇದೇ ಈಗ ಬಿಸಿಸಿಐನ ಕಣ್ಣು ಕೆಂಪಾಗಿಸಿದೆ. ಮಾಜಿ ಆಟಗಾರರಿಗೆ ಕಡಿವಾಣ ಹಾಕಲು BCCI ಹೊಸ ರೂಲ್ಸ್ ತರಲು ಚಿಂತಿಸ್ತಿದೆ. 

IPL ಕ್ರೇಜ್‌​ ಕುಸಿಯುತ್ತೆ ಅನ್ನೋ ಭಯ..!

ಭಾರತೀಯ ಕ್ರಿಕೆಟರ್ಸ್ ಬೇರೆ ಲೀಗ್​ನಲ್ಲಿ ಆಡೋದ್ರಿಂದ IPL ಕ್ರೇಜ್‌​ ಕುಸಿಯುತ್ತೆ ಅನ್ನೋದು BCCI ಚಿಂತೆಗೆ ಕಾರಣವಾಗಿದೆ. ಇದರಿಂದ ಮಾಜಿ ಆಟಗಾರರಿಗೆ ಸಂಬಂಧಿಸಿದ ನಿಯಮಗಳನ್ನ ಬದಲಿಸಲು ಯೋಚಿಸ್ತಿದೆ. ಆಟಗಾರರು ರಿಟೈರ್ಡ್ ಆದ್ರು, ಒಂದು ವರ್ಷ ಕಾಲ ಬೇರೆ ಯಾವುದೇ ಲೀಗ್​ನಲ್ಲಿ ಭಾಗವಹಿಸಿದಂತೆ ಹೊಸ ಪಾಲಿಸಿಯನ್ನ ಜಾರಿಗೆ ತರಲು ಮುಂದಾಗಿದೆ. ಈ ಬಗ್ಗೆ ಜುಲೈ 7ರಂದು BCCI ಅಪೆಕ್ಸ್ ಕೌನ್ಸಿಲ್​ ಸಭೆಯಲ್ಲಿ ಚರ್ಚೆಯಾಗಲಿದೆ. 

ಧೋನಿಯ ಓಲ್ಡ್ ಈಸ್ ಗೋಲ್ಡ್ ಮಂತ್ರ..! ಸಮಯ ಸಿಕ್ರೆ ಸಾಕು ಹೊಲದಲ್ಲಿ MSD ಕೆಲಸ..!

ಈ ಸಭೆಯಲ್ಲಿ ಮಾಜಿ ಆಟಗಾರರ ನಿಯಂತ್ರಣ ಕುರಿತು ಸ್ಪಷ್ಟ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಒಂದು ವೇಳೆ ಹೊಸ ರೂಲ್ಸ್ ಜಾರಿಗೆ ತರುವ ನಿರ್ಧಾರ ಕೈಗೊಂಡ್ರೆ, ವಿದೇಶಿ ಲೀಗ್ ಆಡೋ ಭಾರತದ ಮಾಜಿ ಕ್ರಿಕೆಟರ್​ಗಳ ಆಸೆ ನಿರಾಸೆಯಾಗಲಿದೆ. ಯಾಕೆಂದ್ರೆ, ಫಿಟ್​ನೆಸ್ ಹಾಗೂ ಮತ್ತಿತರ ಕಾರಣಗಳಿಂದ ಒಂದು ವರ್ಷದ ನಂತರ ಮತ್ತೆ ಕ್ರಿಕೆಟ್​ ಆಡೋದು ಕಷ್ಟವಾಗಲಿದೆ.

ಇಂಗ್ಲೆಂಡ್‌ ಕೌಂಟಿಯಲ್ಲಿ ಆಡಲಿರುವ ಪೃಥ್ವಿ ಶಾ!

ಮುಂಬೈ: ಭಾರತ ತಂಡದಲ್ಲಿ ಮತ್ತೊಮ್ಮೆ ಸ್ಥಾನ ವಂಚಿತರಾಗಿರುವ ಯುವ ಬ್ಯಾಟರ್‌ ಪೃಥ್ವಿ ಶಾ ಇಂಗ್ಲೆಂಡ್‌ನ ಕೌಂಟಿ ತಂಡ ನಾರ್ಥಾಂಪ್ಟನ್‌ಶೈರ್‌ ಪರ ಆಡಲಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ದುಲೀಪ್‌ ಟ್ರೋಫಿಯಲ್ಲಿ ಪಶ್ಚಿಮ ವಲಯ ತಂಡವನ್ನು ಪ್ರತಿನಿಧಿಸುತ್ತಿರುವ 23 ವರ್ಷದ ಪೃಥ್ವಿ ಟೂರ್ನಿ ಮುಗಿದ ಕೂಡಲೇ ಇಂಗ್ಲೆಂಡ್‌ಗೆ ಪ್ರಯಾಣಿಸಲಿದ್ದಾರೆ. ಅವರು ಜು.19ರಿಂದ ನಡೆಯಲಿರುವ ಸೊಮರ್‌ಸೆಟ್‌ ವಿರುದ್ಧದ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ ಎನ್ನಲಾಗಿದೆ.