ಧೋನಿಯ ಓಲ್ಡ್ ಈಸ್ ಗೋಲ್ಡ್ ಮಂತ್ರ..! ಸಮಯ ಸಿಕ್ರೆ ಸಾಕು ಹೊಲದಲ್ಲಿ MSD ಕೆಲಸ..!
ಕ್ಯಾಪ್ಟನ್ ಕೂಲ್ ಧೋನಿ ಎಲ್ಲಿರಿಗಿಂತ ಡಿಫರೆಂಟ್ ಕ್ರಿಕೆಟಿಗ
ಸೋಷಿಯಲ್ ಮೀಡಿಯಾದಿಂದ ದೂರ ಗ್ರೇಟ್ ಕ್ಯಾಪ್ಟನ್..!
ಸಮಯ ಸಿಕ್ರೆ ಸಾಕು ಹೊಲದಲ್ಲಿ ಕೆಲಸ..!
ಬೆಂಗಳೂರು(ಜು.03) ಮಹೇಂದ್ರ ಸಿಂಗ್ ಧೋನಿ, ಕ್ರಿಕೆಟ್ ಜಗತ್ತಿನ ಚಾಣಾಕ್ಷ ಕ್ಯಾಪ್ಟನ್. ಗೇಮ್ ಪ್ಲಾನ್, ರಣತಂತ್ರ ರೂಪಿಸೋದ್ರಲ್ಲಿ ಎಂ ಎಸ್ ಧೋನಿ ಮುಂದೆ ಯಾರೂ ಇಲ್ಲ. ಧೋನಿ ಯಾವಾಗ ಯಾವ ಅಸ್ತ್ರ ಉಪಯೋಗಿಸ್ತಾರೆ, ಯಾವ ದಾಳ ಉರುಳಿಸ್ತಾರೆ ಅಂತ ಊಹಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ಎಂತದ್ದೇ ಸಿಚುಯೇಷನ್ ಇದ್ರು, ಧೋನಿ ಕೂಲಾಗೇ ಎಲ್ಲವನ್ನೂ ನಿಭಾಯಿಸ್ತಾರೆ. ಈ ಕಾರಣಕ್ಕೆ ಆನ್ಫೀಲ್ಡ್ನಲ್ಲಿ ಧೋನಿ ಎಲ್ಲರಿಗಿಂತ ಡಿಫ್ರೆಂಟ್ ಆಗಿ ಕಾಣ್ತಾರೆ.
ಬರೀ ಆನ್ಫೀಲ್ಡ್ ಅಷ್ಟೇ ಅಲ್ಲ, ಆಫ್ ಫೀಲ್ಡ್ನಲ್ಲೂ ಧೋನಿ ಸಖತ್ ಡಿಫ್ರೆಂಟ್. ಕ್ರಿಕೆಟ್ನಿಂದ ದೂರ ಇದ್ದಾಗ ಧೋನಿ, ಯಾರ ಸಂರ್ಪಕಕ್ಕೂ ಸಿಗಲ್ಲ. ಇದರಿಂದ ಧೋನಿ ಎಲ್ಲಿಗೋಗ್ತಾರೆ. ಎಲ್ಲಿರ್ತಾರೆ ಅಂತ ಯಾರಿಗು ಗೊತ್ತಿರಲ್ಲ. ಧೋನಿ ಇಂದಿಗೂ ಚಿಕ್ಕಮಕ್ಕಳಂತೆ ಕ್ಯಾಂಡಿ ಕ್ರಷ್ ಆಡ್ತಾರೆ. ಮೊನ್ನೆ ಧೋನಿ ಫ್ಲೈಟ್ನಲ್ಲಿ ಕ್ಯಾಂಡಿ ಕ್ರಷ್ ಆಡ್ತಿದ್ದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಧೋನಿಯಿಂದಾಗಿ ಒಂದೇ ದಿನದಲ್ಲಿ 30 ಲಕ್ಷಕ್ಕೂ ಹೆಚ್ಚು ಮಂದಿ ಈ ಹಳೆ ಗೇಮ್ನ ಡೌನ್ಲೋಡ್ ಮಾಡಿದ್ರು.
ICC ODI World Cup: ಏಕದಿನ ವಿಶ್ವಕಪ್ ಪ್ರಧಾನ ಸುತ್ತಿಗೆ ಶ್ರೀಲಂಕಾ ಪ್ರವೇಶ
ಸೋಷಿಯಲ್ ಮೀಡಿಯಾದಿಂದ ದೂರ ಗ್ರೇಟ್ ಕ್ಯಾಪ್ಟನ್..!
ಯೆಸ್, ಈ ಕಾಲದ ಕ್ರಿಕೆಟರ್ಸ್ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟಿವ್ ಆಗಿರ್ತಾರೆ. ಇನ್ಸ್ಟಾಗ್ರಾಮ್, ಟ್ವಿಟರ್, ಫೇಸ್ಬುಕ್ ಮೂಲಕ ತಮ್ಮ ಪರ್ಸನಲ್ ಆ್ಯಂಡ್ ಪ್ರೊಫೆಷನಲ್ ಲೈಫ್ನ ಅಪ್ಡೇಟ್ಗಳನ್ನ ನೀಡ್ತಾರೆ. ಚೆಂದ, ಚೆಂದ ಪೋಟೋಗಳನ್ನ ಅಪ್ಲೋಡ್ ಮಾಡ್ತಾರೆ. ಸ್ಪಾನ್ಸರ್ ಪೋಸ್ಟ್ಗಳ ಮೂಲಕ ಕೋಟಿ. ಕೋಟಿ ಸಂಪಾದಿಸ್ತಾರೆ.
BCCIಗೆ ಮತ್ತೆ ನೆನಪಾದ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್..!
ಆದ್ರೆ, ಧೋನಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳನ್ನ ಹಾಕೋದು ತೀರಾ ಅಪರೂಪ. ಟ್ವಿಟರ್ನಲ್ಲಿ 8.9 ಮಿಲಿಯನ್ ಫಾಲೋವರ್ಸ್ ಹೊಂದಿರೋ ಧೋನಿ, ಕೊನೆಯದಾಗಿ ಟ್ವೀಟ್ ಮಾಡಿದ್ದು 2021 ಜನವರಿಲ್ಲಿ. ಇನ್ನು ಇನ್ಸ್ಟಾಗ್ರಾಮ್ನಲ್ಲಿ 3 ತಿಂಗಳ ಹಿಂದೆ ತಮ್ಮ ಹೊಲದಲ್ಲಿ ಉಳುಮೆ ಮಾಡ್ತಿದ್ದ ವೀಡೀಯೋ ಪೋಸ್ಟ್ ಮಾಡಿದ್ರು. ಅದೇ ಲಾಸ್ಟ್. ಇನ್ನು ಫೇಸ್ಬುಕ್ನಲ್ಲು ಧೋನಿ ರೆಗ್ಯುಲರ್ ಆಗಿ ಪೋಸ್ಟ್ ಮಾಡಲ್ಲ.
ಸಮಯ ಸಿಕ್ರೆ ಸಾಕು ಹೊಲದಲ್ಲಿ ಕೆಲಸ..!
ಯೆಸ್, ಬೇರೆ ಕ್ರಿಕೆಟರ್ಸ್ ರಜೆ ಸಿಕ್ರೆ ಸಾಕು, ಫಾರಿನ್ ಟ್ರಿಪ್ ಅಂತ ಹೋಗ್ತಾರೆ. ಆದ್ರೆ, ಧೋನಿ ಕೃಷಿ ಮಾಡೋದ್ರಲ್ಲಿ ಬ್ಯುಸಿಯಾಗಿರ್ತಾರೆ. ರಾಂಚಿಯ ತಮ್ಮ ಹೊಲದಲ್ಲಿ ಯಾವ ಜಂಜಾಟವೂ ಇಲ್ಲದೇ ತಾವೇ ಭೂಮಿ ಹದ ಮಾಡ್ತಾರೆ. ಒಟ್ಟಿನಲ್ಲಿ ದುಡ್ಡು, ನೇಮು, ಫೇಮು ಸಿಗ್ತಿದ್ದಂತೆ ಎಂತವರಾದ್ರು ಚೇಂಜ್ ಆಗ್ತಾರೆ. ಆದ್ರೆ, ಕ್ರಿಕೆಟ್ ದುನಿಯಾದ ಈ ಸೂಪರ್ ಸ್ಟಾರ್ ಮಾತ್ರ ಓಲ್ಡ್ ಈಸ್ ಗೋಲ್ಡ್ ಅಂತಿದ್ದಾರೆ. ಇದಕ್ಕೆ ಅಲ್ವಾ ಧೋನಿ ಎಲ್ಲರಿಗಿಂತ ಡಿಫ್ರೆಂಟ್ ಅನ್ನೋದು.