Ashes 2023: ಆಸಿಸ್ ಸ್ಪಿನ್ನರ್ ಲಯನ್​ ಕೆಚ್ಚೆದೆಯ ಹೋರಾಟಕ್ಕೆ ಕ್ರಿಕೆಟ್ ಜಗತ್ತು ಫಿದಾ..!

ಆ್ಯಷಸ್ ಟೆಸ್ಟ್ ಸರಣಿಯಲ್ಲಿ ನೋವಿನ ನಡುವೆಯೂ ಬ್ಯಾಟಿಂಗ್ ಮಾಡಲಿಳಿದ ನೇಥನ್ ಲಯನ್
ನೇಥನ್ ಲಯನ್ ಆಸ್ಟ್ರೇಲಿಯಾದ ಅನುಭವಿ ಆಫ್‌ ಸ್ಪಿನ್ನರ್
ಲಯನ್ ದೇಶ ಪ್ರೇಮಕ್ಕೆ ಕ್ರಿಕೆಟ್ ಜಗತ್ತು ಫಿದಾ

Ashes 2023: Standing ovation as injured Nathan Lyon comes out to bat against England in Lords Test kvn

ಬೆಂಗಳೂರು(ಜು.03) ಕ್ರಿಕೆಟ್ ಜಗತ್ತಿನಲ್ಲಿ ಆ್ಯಷಸ್ ಟೆಸ್ಟ್ ಸರಣಿಗಿರೋ ಕ್ರೇಝೇ ಬೇರೆ. ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ ಈ ಸರಣಿ ಪ್ರತಿಷ್ಠೆಯ ಕಣ. ಗೆಲುವಿಗಾಗಿ ಎರಡೂ ತಂಡಗಳು ಆಟಗಾರರು ಜಿದ್ದಿಗೆ ಬಿದ್ದವರಂತೆ ಕಾದಾಡ್ತಾರೆ. ನೋವಿನಲ್ಲೂ ತಂಡದ ಗೆಲುವಿಗಾಗಿ ಹೋರಾಡ್ತಾರೆ. ಅದರಂತೆ ಈ ಬಾರಿಯ ಆ್ಯಷಸ್​ ಸರಣಿಯಲ್ಲಿ ಆಸ್ಟ್ರೇಲಿಯಾ ಸ್ಪಿನ್ನರ್​ ನೇಥನ್ ಲಯನ್ ಇಂಜುರಿ ನಡುವೆ ಫೀಲ್ಡ್​ಗಿಳಿದು ಬ್ಯಾಟಿಂಗ್ ಮಾಡಿದ್ದಾರೆ. ಲಯನ್​ರ ಈ ಕೆಚ್ಚೆದೆಯ ಆಟಕ್ಕೆ ಅಭಿಮಾನಿಗಳ ಫಿದಾ ಆಗಿದ್ದಾರೆ. 

ಕ್ರಿಕೆಟ್ ಕಾಶಿ ಲಾರ್ಡ್ಸ್​​ನಲ್ಲಿ ನಡೆದ ಸರಣಿಯ 2ನೇ ಟೆಸ್ಟ್​​ನಲ್ಲಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್​ ವೇಳೆ ಲೈಯನ್ ಇಂಜುರಿಗೊಳಗಾಗಿದ್ರು. ಇದರಿಂದ ಅರ್ಧದಲ್ಲೇ ಮೈದಾದಿಂದ ಹೊರನಡೆದಿದ್ರು. ನಡೆಯೋಕು ಸಾಧ್ಯವಾಗದೇ ಸ್ಟಿಕ್ ಸಹಾಯದಿಂದ ಹೆಜ್ಜೆ ಹಾಕಿದ್ರು.  ಇದರಿಂದ ಲಯನ್ ಮತ್ತೆ ಗ್ರೌಂಡ್​ಗಿಳಿಯಲ್ಲ ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ, ಆಸಿಸ್ 2ನೇ ಇನ್ನಿಂಗ್ಸ್ ವೇಳೆ 9ನೇ ವಿಕೆಟ್ ಬಿದ್ದಾಗ ಪಂದ್ಯ ವೀಕ್ಷಿಸುತ್ತಿದ್ದವರಿಗೆ ಶಾಕ್ ಕಾದಿತ್ತು. ಲಯನ್ ನೋವಿನಲ್ಲೂ ಹಿಡಿದು ಬಂದ್ರು. 

Ashes 2023: ಲಾರ್ಡ್ಸ್‌ ಟೆಸ್ಟ್‌ ಗೆಲುವಿನ ಬೆನ್ನಲ್ಲೇ ಆಸೀಸ್‌ಗೆ ಶಾಕ್‌; ಸ್ಟಾರ್ ಕ್ರಿಕೆಟಿಗ ಟೂರ್ನಿಯಿಂದಲೇ ಔಟ್..!

ತೀವ್ರ ನೋವಿನಲ್ಲೂ ನೇಥನ್ ಲಯನ್​ ರನ್​ಗಾಗಿ ಓಡಿದ್ರು. ಸ್ಟುವರ್ಟ್ ಬ್ರಾಡ್ ಬೌಲಿಂಗ್​ನಲ್ಲಿ ಒಂದು ಫೋರ್ ಕೂಡ ಬಾರಿಸಿದ್ರು. ಲಯನ್ ಕಮಿಟ್ಮೆಂಟ್ ಕಂಡು ತಂಡದ ಆಟಗಾರರು, ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ರು. 13 ಎಸೆತಗಳನ್ನು ಎದುರಿಸಿ ಒಂದು ಬೌಂಡರಿ ಬಾರಿಸಿ ಲಯನ್ ಔಟಾದ್ರು. ಲಯನ್ ಪೆವಿಲಿಯನ್​ಗೆ ತೆರಳುವಾಗ ಅಭಿಮಾನಿಗಳು ಸ್ಟ್ಯಾಂಡಿಂಗ್ ಓವೇಷನ್ ನೀಡಿದ್ರು. 

ನೋವಿನಲ್ಲೂ ದೇಶಕ್ಕಾಗಿ ಹೋರಾಡಿದ್ದ ಭಾರತದ ಕ್ರಿಕೆಟರ್ಸ್..!

ಯೆಸ್, ಭಾರತದ ಹಲವು ಕ್ರಿಕೆಟರ್ಸ್​  ಸಹ ತಂಡದ ಗೆಲುವಿಗಾಗಿ ನೋವಿನಲ್ಲೂ ಮೈದಾನದಲ್ಲಿ ಹೋರಾಡಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಕ್ಯಾನ್ಸರ್​ ಮಹಾಮಾರಿಯನ್ನು ಲೆಕ್ಕಿಸದೇ ಟೂರ್ನಿಯುದ್ಧಕ್ಕೂ  ಆಡಿದ್ರು. ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ್ರು. ಆ ಮೂಲಕ ಭಾರತ ಎರಡನೇ ಬಾರಿ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ರು. 

BCCIಗೆ ಮತ್ತೆ ನೆನಪಾದ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್..!

ಇನ್ನು ಅನಿಲ್​ ಕುಂಬ್ಳೆ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯವೊಂದರಲ್ಲಿ ತಲೆಗೆ ಪೆಟ್ಟು ಬಿದ್ದಿದ್ದರೂ, ಬ್ಯಾಂಡೇಜ್ ಕಟ್ಟಿಕೊಂಡು ಬೌಲಿಂಗ್ ಮಾಡಿದ್ರು. ಇದೇ ವರ್ಷ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ, ಕೈ ಬೆರಳಿನ ಗಾಯದ ನಡುವೆಯು ಬ್ಯಾಟ್ ಬೀಸಿದ್ರು. ಅದೇನೆ ಇರಲಿ, ಈ ಎಲ್ಲಾ ಕ್ರಿಕೆಟರ್​ಗಳ ಬದ್ಧತೆಗೆ ಸಲಾಂ ಹೇಳಲೇಬೇಕು

Latest Videos
Follow Us:
Download App:
  • android
  • ios