ಪಂಜಾಬ್(ಜೂ.30): ಐಪಿಎಲ್ ಟೂರ್ನಿ ಟೈಟಲ್ ಪ್ರಾಯೋಜಕತ್ವ ಸೇರಿದಂತೆ ಹಲವು ಪ್ರಾಯೋಜಕತ್ವಗಳು ಚೀನಾ ಮೂಲದ್ದಾಗಿದೆ. ಲಡಾಖ್ ಗಡಿಯಲ್ಲಿ ಚೀನಾ ವಿರುದ್ಧದ ಕಾಳಗದಲ್ಲಿ 20 ಯೋಧರು ಹುತಾತ್ಮರಾಗಿದ್ದಾರೆ.  ಇದರ ಬೆನ್ನಲ್ಲೇ ಚೀನಾ ವಸ್ತುಗಳ ಬಹಿಷ್ಕರಕ್ಕೆ ಆಗ್ರಹ ಹೆಚ್ಚಾಗಿದೆ. ಇತ್ತ ಬಿಸಿಸಿಐ ಕೂಡ ಚೀನಾ ಪ್ರಾಯೋಜಕತ್ವ ಪರಿಶೀಲನೆಗೆ ಸಭೆ ಕರೆದು ಪ್ರಮುಖ ವಿಚಾರ ಚರ್ಚಿಸಿತ್ತು. ಇದೀಗ ಕಿಂಗ್ಸ್ ಇಲೆವನ್ ಪಂಜಾಬ್ ಕೂಡ ಚೀನಾ ಪ್ರಾಯೋಜಕತ್ವಕ್ಕೆ ಅಂತ್ಯ ಹಾಡಲು ಸೂಚಿಸಿದೆ.

IPL ಟೂರ್ನಿಯಿಂದ ಚೀನಾ ಪ್ರಾಯೋಜಕತ್ವಕ್ಕೆ ಕೊಕ್ ನೀಡಲು ಸಭೆ ಕರೆದ BCCI!

ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವಕ್ಕೆ ಮಾದರಿಯಾಗಿದೆ. ಇದು ಚೀನಾ ಪ್ರೀಮಿಯರ್ ಲೀಗ್ ಅಲ್ಲ. ದೇಶದ ಹಿತ ದೃಷ್ಟಿಯಿಂದ ಚೀನಾ ಪ್ರಾಯೋಜಕತ್ವ ಅಂತ್ಯಗೊಳಿಸಬೇಕು. 20 ಸೈನಿಕರು ಬಲಿ ಪಡೆದ ದೇಶದ ಪ್ರಾಯೋಜಕತ್ವ ಐಪಿಎಲ್‌ಗೆ ಅವಶ್ಯತೆ ಇಲ್ಲ. ದಿಢೀರ್ ಪ್ರಾಯೋಜಕತ್ವ ರದ್ದು ಮಾಡಿದರೆ ಆರ್ಥಿಕ ನಷ್ಟ ಸಂಭವವಿಸಲಿದೆ ನಿಜ. ಆದರೆ ಭಾರತೀಯ ಕಂಪನಿಗಳ ಪ್ರಾಯೋಜಕತ್ವ ಐಪಿಎಲ್‌ಗೆ ಸಿಗಲಿದೆ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ಸಹ ಮಾಲೀಕ ನೆಸ್ ವಾಡಿಯಾ ಹೇಳಿದ್ದಾರೆ.

ಭಾರತೀಯ ಸೇನೆ, ಪ್ರಧಾನಿ ಮೋದಿ ವ್ಯಂಗ್ಯವಾಡಿದ CSK ಡಾಕ್ಟರ್ ಅಮಾನತು!.

ಬಿಸಿಸಿಐ ಈ ಕುರಿತು ನಿರ್ಧಾರ ತೆಗೆದುಕೊಳ್ಳಬೇಕಿದೆ. ಸದ್ಯ ಇರುವ ಚೀನಾ ಪ್ರಾಯೋಜಕತ್ವಗಳು ಈ ವರ್ಷಕ್ಕೆ ಅಂತ್ಯವಾಗಲಿದೆ. ಇನ್ನು ಟೈಟಲ್ ಸ್ಪಾನ್ಸರ್ ಪ್ರಾಯೋಜಕತ್ವ 2022ರಕ್ಕೆ ಅಂತ್ಯವಾಗಲಿದೆ. ಚೀನಾ ಪ್ರಾಯೋಜಕತ್ವ ನವೀಕರಿಸಿದಿರಲು ಬಿಸಿಸಿಐ ನಿರ್ಧರಿಸಿದೆ. ಆದರೆ ಈಗಲೇ ಚೀನಾ ಪ್ರಾಯೋಜಕತ್ವ ಅಂತ್ಯಗೊಳಿಸಲು ನೆಸ್ ವಾಡಿಯಾ ಆಗ್ರಹಿಸಿದ್ದಾರೆ.