IPL ಟೂರ್ನಿಯಿಂದ ಚೀನಾ ಪ್ರಾಯೋಜಕತ್ವಕ್ಕೆ ಕೊಕ್ ನೀಡಲು ಸಭೆ ಕರೆದ BCCI!
ಲಡಾಖ್ ಪ್ರಾಂತ್ಯದಲ್ಲಿ ಪ್ರಭುತ್ವ ಸಾಧಿಸಲುು ಮುಂದಾಗಿರುವ ಚೀನಾ ಭಾರತೀಯ ಯೋಧರ ಮೇಲೆ ದಾಳಿ ಮಾಡಿ ಉದ್ದಟತನ ತೋರಿದೆ. ಈ ಸಂಘರ್ಷದ ಬೆನ್ನಲ್ಲೇ ಚೀನಾ ವಸ್ತುಗಳ ಬಹಿಷ್ಕಾರದ ಕೂಗು ಹೆಚ್ಚಾಗುತ್ತಿದೆ. ಇದೀಗ ಬಿಸಿಸಿಐ ಕೂಡ ಚೀನಾ ಪ್ರಾಯೋಜಕತ್ವಕ್ಕೆ ಕೊಕ್ ನೀಡಲು ನಿರ್ಧರಿಸಿದೆ.
ಮುಂಬೈ(ಜೂ.21): ಐಪಿಎಲ್ ಟೂರ್ನಿಯಲ್ಲಿ ಟೈಟಲ್ ಪ್ರಾಯೋಜಕತ್ವ ಸೇರಿದಂತೆ ಹಲವೆಡೆಗಳಲ್ಲಿ ಚೀನಾ ಬ್ರ್ಯಾಂಡ್‌ಗಳ ಪ್ರಾಯೋಜಕತ್ವವಿದೆ. ಇದೀಗ ಭಾರತ-ಚೀನಾ ಗಡಿ ಬಿಕ್ಕಟ್ಟಿನ ಬಳಿಕ ಚೀನಾ ವಸ್ತುಗಳಿಗೆ ಬಹಿಷ್ಕಾರ ಹಾಕಲು ಒತ್ತಾಯ ಕೇಳಿಬರುತ್ತಿದೆ. ಇತ್ತ ಬಿಸಿಸಿಐ ಕೂಡ ಚೀನಾ ಪ್ರಾಯೋಜಕತ್ವಕ್ಕೆ ಕೊಕ್ ನೀಡಲು ಮುಂದಾಗಿದೆ. ಇದಕ್ಕಾಗಿ ಬಿಸಿಸಿಐ ಮುಂದಿನ ವಾರ ಮಹತ್ವದ ಸಭೆ ಕರೆದಿದೆ.
ಚೀನಾ ವಸ್ತು ಪ್ರಚಾರ ಮಾಡಲ್ಲ, ಬಳಸಲ್ಲ; ಪ್ರತಿಜ್ಞೆ ಮಾಡಿದ ಹರ್ಭಜನ್!..
ಐಪಿಎಲ್ ಟೈಟಲ್ ಪ್ರಾಯೋಜಕತ್ವವನ್ನು ವಿವೋ ಸ್ಮಾರ್ಟ್‌ಫೋನ್ ಖರೀದಿಸಿದೆ. ಪ್ರತಿ ವರ್ಷ ಬಿಸಿಸಿಐಗೆ ವಿವೋ 440 ಕೋಟಿ ರೂಪಾಯಿ ನೀಡುತ್ತಿದೆ. 5 ವರ್ಷಗಳ ಒಪ್ಪಂದ 2022ರಲ್ಲಿ ಅಂತ್ಯವಾಗಲಿದೆ. ಇದರೊಂದಿಗೆ ಇತರ ಕೆಲ ಚೀನಾ ಬ್ರ್ಯಾಂಡ್‌ಗಳು ಐಪಿಎಲ್ ಟೂರ್ನಿಯಲ್ಲಿ ಪ್ರಾಯೋಜಕತ್ವ ನೀಡುತ್ತಿದೆ. ಇವೆಲ್ಲಾ ಪ್ರಾಯೋಜಕತ್ವಕ್ಕೆ ಅಂತ್ಯ ಹಾಡುವ ಕುರಿತು ಬಿಸಿಸಿಐ ಸಭೆ ನಡೆಸಲಿದೆ.
ಭಾರತೀಯ ಸೇನೆ, ಪ್ರಧಾನಿ ಮೋದಿ ವ್ಯಂಗ್ಯವಾಡಿದ CSK ಡಾಕ್ಟರ್ ಅಮಾನತು!.
ಈ ಕುರಿತು ಟ್ವಿಟರ್ ಮೂಲಕ ಬಿಸಿಸಿಐ ಸ್ಪಷ್ಟಪಡಿಸಿದೆ. ಮುಂದಿನ ವಾರ ಈ ಕುರಿತು ಬಿಸಿಸಿಐ ಸ್ಪಷ್ಟ ನಿರ್ಧಾರ ಹೊರಬರಲಿದೆ ಎಂದು ಬಿಸಿಸಿಐ ಹೇಳಿದೆ. ಚೀನಾ ವಸ್ತುಗಳ ಬಹಿಷ್ಕಾರ ಕುರಿತು ಬಿಸಿಸಿಐ ಮಹತ್ವದ ನಿರ್ಧಾರ ಕೈಗೊಳ್ಳಲಿದೆ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಹೇಳಿದ್ದಾರೆ.
ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಈಗಾಗಲೇ ಬಿಸಿಸಿಐ ಸಾವಿರಾರು ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ಈಗಾಗಲೇ ಒಪ್ಪಂದ ಮಾಡಿಕೊಂಡಿರುವ ಪ್ರಾಯೋಜಕತ್ವ ಮುಂದುವರಿಸುವ ಸಾಧ್ಯತೆ ಇದೆ. ನೂತನ ಪ್ರಾಯೋಜಕತ್ವ ಒಪ್ಪಂದದಲ್ಲಿ ಚೀನಾ ಬ್ರ್ಯಾಂಡ್‌ಗಳಿಗೆ ನಿಷೇಧ ಹೇರಲು ಬಿಸಿಸಿಐ ಮುಂದಾಗಿದೆ.