Asianet Suvarna News Asianet Suvarna News

ಐಸಿಸಿ ಚೇರ್ಮೆನ್ ಆಗಿ ಜಯ್ ಶಾ ಅವಿರೋಧ ಆಯ್ಕೆ, 35ನೇ ವಯಸ್ಸಿಗೆ ಅತ್ಯುನ್ನತ ಪದವಿ!

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಡಿಸೆಂಬರ್ 1, 2024ರಂದು ಜಯ್ ಶಾ ಐಸಿಸಿ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ಕೆಲ ಐತಿಹಾಸಿಕ ಮೈಲಿಗಲ್ಲು ನಿರ್ಮಿಸಿದ್ದಾರೆ.
 

BCCI Secretary Jay shah elected unopposed as ICC chairman youngest chief milestone ckm
Author
First Published Aug 27, 2024, 8:48 PM IST | Last Updated Aug 27, 2024, 8:52 PM IST

ದುಬೈ(ಆ.27)ಅತ್ಯಂತ ಕಿರಿಯ ವಯಸ್ಸಿಗೆ ಅತ್ಯುನ್ನತ ಜವಾಬ್ದಾರಿ ವಹಿಸಿಕೊಳ್ಳುತ್ತಿರುವ ಹೆಗ್ಗಳಿಕೆಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪಾತ್ರರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಚೇರ್ಮೆನ್ ಆಗಿ ಜಯ್ ಶಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ರೆಗ್ ಬಾರ್ಕ್ಲೇ ಎರಡನೇ ಅವಧಿ ಶೀಘ್ರದಲ್ಲೇ ಮುಕ್ತಾಯಗೊಳ್ಳುತ್ತಿದೆ. ಮೂರನೇ ಅವಧಿಗೆ ಮುಂದುವರಿಯಲು ಗ್ರೆಗ್ ನಿರಾಕರಿಸಿದ್ದರು. ಚುನಾವಣೆ ಮೂಲಕ ಮುಂದಿನ ಮುಖ್ಯಸ್ಥರ ಆಯ್ಕೆ ಪ್ರಕ್ರಿಯೆ ವೇಳೆ ಜಯ್ ಶಾ ಪ್ರತಿಸ್ಪರ್ಧಿಯಾಗಿ ಯಾರೂ ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ ಜಯ್ ಶಾ ಅವಿರೋಧವಾಗಿ ಐಸಿಸಿ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ.

ಬಿಸಿಸಿಐ ಕಾರ್ಯದರ್ಶಿಯಾಗಿ 2019ರಲ್ಲಿ ಅಧಿಕಾರವಹಿಸಿಕೊಂಡ ಜಯ್ ಶಾ, 2021ರ ವರೆಗೆ ಕ್ರಿಕೆಟ್ ಕೌನ್ಸಿಲ್ ಏಷ್ಯಾದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇದೀಗ ಐಸಿಸಿ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. 35ನೇ ವಯಸ್ಸಿಗೆ ಅತ್ಯುನ್ನತ ಪದವಿ ಅಲಂಕರಿಸಿದ ಹೆಗ್ಗಳಿಕೆಗೂ ಜಯ್ ಶಾ ಪಾತ್ರರಾಗಿದ್ದಾರೆ. ಅತೀ ಕಿರಿಯ ವಯಸ್ಸಿನಲ್ಲಿ ಅತ್ಯುನ್ನತ ಜವಾಬ್ದಾರಿ ವಹಿಸಿಕೊಳ್ಳುತ್ತಿರುವ ಜಯ್ ಶಾಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಜಯ್ ಇದೀಗ ಐಸಿಸಿಯ ಅತೀ ಕಿರಿಯ ಚೇರ್ಮೆನ್ ಅನ್ನೋ ಸಾಧನೆ ಮಾಡಿದ್ದಾರೆ. 

ಈ ವರ್ಷ ಭಾರತದಲ್ಲೇ ನಡೆಯುತ್ತಾ ಮಹಿಳಾ ಟಿ20 ವಿಶ್ವಕಪ್‌?: ಅಪ್‌ಡೇಟ್‌ ಕೊಟ್ಟ ಜಯ್ ಶಾ..! 

ಅವಿರೋಧವಾಗಿ ಆಯ್ಕೆಯಾದ ಬೆನ್ನಲ್ಲೇ ಜಯ್ ಶಾ ಸಂತಸ ಹಂಚಿಕೊಂಡಿದ್ದಾರೆ. ಬಿಸಿಸಿಐ ಕಾರ್ಯದರ್ಶಿಯಾಗಿ ಜವಬ್ದಾರಿ ನಿರ್ವಹಿಸಿದ ನನಗೆ ಇದೀಗ ಅತ್ಯುನ್ನತ ಜವಾಬ್ದಾರಿ ಹೆಗಲೇರಿದೆ. ಕ್ರಿಕೆಟ್‌ನನ್ನು ಮತ್ತಷ್ಟು ಜಾಗತಿಕ ಕ್ರೀಡೆಯನ್ನಾಗಿ ಮಾಡಲು ಶ್ರಮಿಸುತ್ತೇನೆ. ಎಲ್ಲಾ ಮಾದರಿ ಕ್ರಿಕೆಟ್‌ನಲ್ಲಿ ಸಮತೋಲನ ಕಾಪಾಡಿಕೊಳ್ಳುವುದು, ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಕ್ರಿಕೆಟ್ ಮಾದರಿ ಕ್ರೀಡೆಯನ್ನಾಗಿ ಮಾಡುವುದು ಗುರಿಯಾಗಿದೆ. ಕ್ರಿಕೆಟ್ ಜನಪ್ರಿಯತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವುದೇ ಮೊದಲ ಗುರಿ ಎಂದು ಜಯ್ ಶಾ ಹೇಳಿದ್ದಾರೆ.

2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆ ಮೂಲಕ ಕ್ರಿಕೆಟ್ ಮತ್ತಷ್ಟು ಜನಪ್ರಿಯಗೊಳ್ಳಲಿದೆ. ಹೆಚ್ಚಿನ ರಾಷ್ಟ್ರಗಳು ಐಸಿಸಿ ಟೂರ್ನಿ ಆಡುವ ಕಾಲ ದೂರವಿಲ್ಲ ಎಂದು ಜಯ್ ಶಾ ಹೇಳಿದ್ದಾರೆ. 

ಐಸಿಸಿ ಚೇರ್ಮೆನ್ ಆದ 5ನೇ ಭಾರತೀಯ ಅನ್ನೋ ಹೆಗ್ಗಳಿಕೆಗೆ ಜಯ್ ಶಾ ಪಾತ್ರರಾಗಿದ್ದಾರೆ. ಜಯ್ ಶಾ ಮೊದಲು ಜಗ್‌ಮೋಹನ್ ದಾಲ್ಮೀಯ ಸೇರಿದಂತೆ ನಾಲ್ವರು ದಿಗ್ಗಜರು ಐಸಿಸಿ ಮುಖ್ಯಸ್ಥರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ.

ಐಸಿಸಿ ಚೇರ್ಮೆನ್ ಆದ ಭಾರತೀಯರು
ಜಗ್‌ಮೋಹನ್ ದಾಲ್ಮಿಯ( 1997 ರಿಂದ 2000)
ಶರದ್ ಪವಾರ್ (2010 ರಿಂದ 2012)
ಎನ್ ಶ್ರೀನಿವಾಸನ್ (2014 ರಿಂದ 2015)
ಶಶಾಂಕ್ ಮನೋಹರ್( 2015 ರಿಂದ 2020)
ಜಯ್ ಶಾ ( 2024*  ) 

ಸಚಿನ್, ಸೆಹ್ವಾಗ್, ಯುವಿ ಆಟ ಕಣ್ತುಂಬಿಕೊಳ್ಳಲು ರೆಡಿಯಾಗಿ; ಅಭಿಮಾನಿಗಳಿಗೆ ಬಿಸಿಸಿಐ ಗುಡ್‌ ನ್ಯೂಸ್..?

Latest Videos
Follow Us:
Download App:
  • android
  • ios