Asianet Suvarna News Asianet Suvarna News

Virat Kohli Captaincy : ಕೊಹ್ಲಿ ಇಲ್ಲದೇ ತಂಡ ಏಷ್ಯಾ ಕಪ್ ಗೆದ್ದಿತ್ತು!

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿಕೆ
ರೋಹಿತ್ ಶರ್ಮ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲು ಕಾರಣ ಹೇಳಿದ ಸೌರವ್ ಗಂಗೂಲಿ
ಐಪಿಎಲ್ ನಲ್ಲಿ ರೋಹಿತ್ ಶರ್ಮ ಅವರ ದಾಖಲೆ ಅದ್ಭುತವಾಗಿದೆ

BCCI President Sourav Ganguly says India won asia cup without Virat Kohli san
Author
Bengaluru, First Published Dec 12, 2021, 9:22 PM IST

ಬೆಂಗಳೂರು (ಡಿ.12): ಟೀಂ ಇಂಡಿಯಾ (Team India) ಸೀಮಿತ ಓವರ್ ಗಳ ಕ್ರಿಕೆಟ್ ತಂಡಕ್ಕೆ ರೋಹಿತ್ ಶರ್ಮ(Rohit Sharma) ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದ ಬಳಿಕ ಹೊಸ ದಿಕ್ಕಿನಲ್ಲಿ ಪ್ರಯಾಣ ಮಾಡಲಿದೆ. ಕಳೆದ ಬುಧವಾರ ದಕ್ಷಿಣ ಆಫ್ರಿಕಾ (South Africa) ಪ್ರವಾಸದ ಏಕದಿನ ಸರಣಿಗೆ ತಂಡವನ್ನು ಪ್ರಕಟ ಮಾಡುವ ವೇಳೆ, ವಿರಾಟ್ ಕೊಹ್ಲಿ (Virat Kohli) ಅವರನ್ನು ನಾಯಕ ಸ್ಥಾನದಿಂದ ವಜಾಗೊಳಿಸಿ ರೋಹಿತ್ ಶರ್ಮ ಅವರನ್ನು ನೂತನ ನಾಯಕರನ್ನಾಗಿ ಬಿಸಿಸಿಐ (BCCI) ನೇಮಕ ಮಾಡಿತ್ತು. ಬಿಸಿಸಿಐನಿಂದ ಈ ಘೋಷಣ ಹೊರಬಂದ ಕ್ಷಣದಿಂದಲೂ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಟಿ20 ಮಾದರಿಯಲ್ಲಿ ಈಗಾಗಲೇ ನಾಯಕ ಸ್ಥಾನವನ್ನು ತ್ಯಜಿಸಿದ್ದ ವಿರಾಟ್ ಕೊಹ್ಲಿ, ಪ್ರಸ್ತುತ ರಾಷ್ಟ್ರೀಯ ಟೆಸ್ಟ್ ತಂಡದ ನಾಯಕರಾಗಿ ಮಾತ್ರವೇ ಉಳಿಯಲಿದ್ದಾರೆ.

2021ರ ಟಿ20 ವಿಶ್ವಕಪ್ ಗೂ ಮುನ್ನ ಕ್ರಿಕೆಟ್ ನ ಅತ್ಯಂತ ಚಿಕ್ಕ ಮಾದರಿಯ ನಾಯಕತ್ವವನ್ನು ಟೂರ್ನಿಯ ಬಳಿಕ ತೊರೆಯುವುದಾಗಿ ಹೇಳಿದ್ದರು. ಅದರೊಂದಿಗೆ ಏಕದಿನ ಹಾಗೂ ಟೆಸ್ಟ್ ತಂಡಗಳಿಗೆ ಇನ್ನೂ ಕೆಲ ವರ್ಷ ನಾಯಕರಾಗಿ ಇರುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದರು. ಆದರೆ, ಸೀಮಿತ ಓವರ್ ಗಳ ಕ್ರಿಕೆಟ್ ಗೆ ಇಬ್ಬರು ಭಿನ್ನ ನಾಯಕರು ಬೇಡ ಎನ್ನುವ ಅಭಿಪ್ರಾಯ ತಳೆದ ಬಿಸಿಸಿಐ ಕೊಹ್ಲಿ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿದೆ.

ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ (BCCI President) ಸೌರವ್ ಗಂಗೂಲಿ (Sourav Ganguly), ಕ್ರಿಕೆಟ್ ಮಂಡಳಿಯ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡಿದ್ದು "ವಿರಾಟ್ ಕೊಹ್ಲಿ ಇಲ್ಲದೆಯೂ ರೋಹಿತ್ ಶರ್ಮ ನೇತೃತ್ವದಲ್ಲಿ ಟೀಂ ಇಂಡಿಯಾ ಏಷ್ಯಾ ಕಪ್  (Asia Cup) ಟೂರ್ನಿಯಲ್ಲಿ ಗೆಲುವು ಕಂಡಿತ್ತು' ಎಂದು ಹೇಳಿಕೆ ನೀಡಿದ್ದಾರೆ.

Rohit Replaced Kohli : ಆಯ್ಕೆ ಸಮಿತಿಗೆ ದಿಲೀಪ್ ವೆಂಗ್ಸರ್ಕಾರ್ ಕೊಟ್ಟ ಎಚ್ಚರಿಕೆ ಏನು?
ಸುದ್ದಿವಾಹಿನಿಯ ವೆಬ್ ಸೈಟ್ ಗೆ ನೀಡಿರುವ ಸಂದರ್ಶನದಲ್ಲಿ ಈ ಕುರಿತಾಗಿ ಮಾತನಾಡಿರುವ ಗಂಗೂಲಿ, ರೋಹಿತ್ ಬಗ್ಗೆ ಸಾಕಷ್ಟು ವಿಶ್ವಾಸವಿಟ್ಟಿರುವುದಾಗಿ ತಿಳಿಸಿದ್ದಾರೆ. "ರೋಹಿತ್ ಅವರ ನಾಯಕತ್ವದ ಮೇಲೆ ವಿಶ್ವಾಸವಿದ್ದ ಕಾರಣಕ್ಕಾಗಿಯೇ ಆಯ್ಕೆ ಸಮಿತಿ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದೆ. ಉತ್ತಮ ಪ್ರದರ್ಶನ ನೀಡುವ ಮಾರ್ಗವನ್ನು ಅವರು ಹುಡುಕಲಿದ್ದು, ಈ ಪ್ರಯತ್ನದಲ್ಲಿ ಅವರು ಯಶಸ್ವಿಯಾಗುವ ವಿಶ್ವಾಸವಿದೆ. ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ತಂಡದ ಪರವಾಗಿ ಅವರ ದಾಖಲೆ ಅದ್ಭುತವಾಗಿದೆ. ಐದು ಪ್ರಶಸ್ತಿಗಳನ್ನು ಗೆಲ್ಲುವುದು ಸುಲಭದ ಮಾತಲ್ಲ. ಕೆಲ ವರ್ಷಗಳ ಹಿಂದೆ ಅವರು ಭಾರತ ತಂಡವನ್ನು ಏಷ್ಯಾ ಕಪ್ ನಲ್ಲಿ ಮುನ್ನಡೆಸಿದ್ದರು. ವಿರಾಟ್ ಕೊಹ್ಲಿ ಇಲ್ಲದೆಯೇ ಭಾರತ ಈ ಟೂರ್ನಿಯನ್ನು ಜಯಿಸಿತ್ತು. ಕೊಹ್ಲಿಯಂಥ ಆಟಗಾರನಿಲ್ಲದೆ ಏಷ್ಯಾಕಪ್ ಪ್ರಶಸ್ತಿ ಗೆದ್ದ ಸಾಧನೆಯೇ ಆ ತಂಡದ ಬಲವನ್ನು ತೋರಿಸುತ್ತದೆ. ದೊಡ್ಡ ಟೂರ್ನಮೆಂಟ್ ಗಳಲ್ಲಿ ಅವರು ಯಶಸ್ಸು ಕಂಡಿದ್ದಾರೆ. ಉತ್ತಮ ತಂಡವನ್ನು ಕಟ್ಟುವ ಕಲೆಯೂ ಅವರಲ್ಲಿದೆ. ಈ ಬಾರಿಯೂ ಅವರು ದೊಡ್ಡ ಫಲಿತಾಂಶ ನೀಡುವ ವಿಶ್ವಾಸವಿದೆ" ಎಂದು ಗಂಗೂಲಿ ಹೇಳಿದ್ದಾರೆ.

ಎಲ್ಲವನ್ನೂ ಗೆಲ್ಲೋದಕ್ಕೆ ಆಗಲ್ಲ, ಕೆಲವನ್ನು ಗೆಲ್ಲಬಹುದು
2022 ರಿಂದ 2031ರ ವರೆಗಿನ ಕ್ಯಾಲೆಂಡರ್ ಅನ್ನು ಗಮನಿಸಿದರೆ, ಪ್ರತಿ ವರ್ಷವೂ ಒಂದಲ್ಲಾ ಒಂದು ವಿಶ್ವ ಚಾಂಪಿಯನ್ ಷಿಪ್ ಇದೆ ಹಾಗೂ ಎಲ್ಲಾ ಟೂರ್ನಿಗಳಿಗೆ ಭಾರತವೂ ಗೆಲ್ಲುವ ಫೇವರಿಟ್ ಆಗಿದೆ. ಪ್ರತಿ ಟೂರ್ನಿ ಬಂದಾಗಲೂ ನಮ್ಮ ತಂಡ ಗೆಲ್ಲುತ್ತದೆ ಎನ್ನುವುದನ್ನೇ ನಾನು ನಂಬುತ್ತೇನೆ. 2019ರ ಏಕದಿನ ವಿಶ್ವಕಪ್ ನಲ್ಲಿ (2019 ODI World Cup) ತಂಡ ಸೆಮಿಫೈನಲ್ ನಲ್ಲಿ ಸೋಲು ಕಂಡಿತ್ತು.

Madan Lal on Kohli Sacking: ಟೀಂ ಕಟ್ಟೋದು ಕಷ್ಟ, ಕೆಡವೋದು ಬಹಳ ಸುಲಭ!
2021ರ ಟಿ20 ವಿಶ್ವಕಪ್ ನಲ್ಲಿ (2021 T20 World Cup) ಗುಂಪು ಹಂತದಲ್ಲಿ ಹೊರಬಿತ್ತು. ಇತರ ಎಲ್ಲಾ ಭಾರತೀಯ ಕ್ರಿಕೆಟ್ ಅಭಿಮಾನಿಗಳಂತೆ ನಾನೂ ಕೂಡ ನಂಬುವುದೇನೆಂದರೆ ಮುಂದಿನ 10 ವರ್ಷಗಳ ಕ್ಯಾಲೆಂಡರ್ ನಲ್ಲಿ ಇರುವ ಕೆಲವು ಟೂರ್ನಿಗಳನ್ನು ನಾವು ಗೆಲ್ಲಬಹುದು. ಎಲ್ಲಾ ಟೂರ್ನಿಗಳನ್ನು ನಾವು ಗೆಲ್ಲಲು ಸಾಧ್ಯವಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ತಿಳಿಸಿದ್ದಾರೆ.

Follow Us:
Download App:
  • android
  • ios