Asianet Suvarna News Asianet Suvarna News

Sourav Ganguly On Virat : ಕೊಹ್ಲಿಯನ್ನ ಇಷ್ಟಪಡ್ತೇನೆ, ಆದ್ರೆ ಸಿಕ್ಕಾಪಟ್ಟೆ ಜಗಳಗಂಟ!

ಕೊಹ್ಲಿ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತು
ಅವರ ಮನೋಭಾವ ನನಗಿಷ್ಟ, ಆದ್ರೆ ಎಲ್ಲರ ಜೊತೆ ಜಗಳವಾಡ್ತಾನೆ
ನಾಯಕತ್ವದಿಂದ ವಜಾ ಮಾಡಿದ ರೀತಿಯ ಕುರಿತಾಗಿ ಬಿಸಿಸಿಐ ವಿರುದ್ಧ ಕಿಡಿಕಾರಿದ್ದ ವಿರಾಟ್ ಕೊಹ್ಲಿ

BCCI president Sourav Ganguly says i like Virat kohli Attitude but he fights a lot san
Author
New Delhi, First Published Dec 19, 2021, 5:49 PM IST

ನವದೆಹಲಿ (ಡಿ.19): ಕ್ರಿಕೆಟ್ ಮೈದಾನದಲ್ಲಿ ವಿರಾಟ್ ಕೊಹ್ಲಿ (Virat Kohli) ಹಾಗೂ ಸೌರವ್ ಗಂಗೂಲಿ  (Sourav Ganguly) ಅವರ ನಾಯಕತ್ವವನ್ನು ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿ ನೋಡಿದವರೇ ಹೆಚ್ಚು. ಆಕ್ರಮಣಕಾರಿ ಮನೋಭಾವದ ಇಬ್ಬರೂ ನಾಯಕರು ಕ್ರಿಕೆಟ್ ನ ಯಶಸ್ಸಿನ ಪಥವೇರಿದ ಬಗ್ಗೆ ಸಾಕಷ್ಟು ಸಾಮತ್ಯೆಗಳನ್ನು ಕಂಡವರು. ಆದರೆ. ಕಳೆದ 15 ದಿನಗಳಿಂದ ಇಬ್ಬರ ನಡುವೆ ಏನೋ ಸರಿ ಇಲ್ಲ ಎಂದು ಅನುಮಾನಪಟ್ಟವರೇ ಹೆಚ್ಚು. ಅದಕ್ಕೆ ಪುಷ್ಟಿ ನೀಡುವಂತೆ ನಾಯಕತ್ವದ ಬಗ್ಗೆ ಗಂಗೂಲಿ ಹೇಳಿದ ಮಾತಿಗೆ ತದ್ವಿರುದ್ಧವಾಗಿ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದರು. ಈ ನಡುವೆ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿರುವ ಟೀಂ ಇಂಡಿಯಾ (Team India) ಮಾಜಿ ನಾಯಕ ಹಾಗೂ ಬಿಸಿಸಿಐ ಅಧ್ಯಕ್ಷ  (BCCI president) ಸೌರವ್ ಗಂಗೂಲಿ, ಮೈದಾನದಲ್ಲಿ ವಿರಾಟ್ ಕೊಹ್ಲಿಯ ಮನೋಭಾವವನ್ನು ಇಷ್ಟಪಡುತ್ತೇನೆ, ಆದರೆ, ಎಲ್ಲರೊಂದಿಗೆ ಜಗಳವಾಡುವ ಅವರ ಗುಣ ಇಷ್ಟವಾಗುವುದಿಲ್ಲ ಎಂದು ಹೇಳಿದ್ದಾರೆ

ಭಾನುವಾರ ಗುರುಗ್ರಾಮದಲ್ಲಿ (Gurgaon) ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸೌರವ್ ಗಂಗೂಲಿಗೆ ಮಾಧ್ಯಮವರಿಂದ ಒಂದು ಪ್ರಶ್ನೆ ಎದುರಾಯಿತು. ಪ್ರಸ್ತುತ ತಂಡದಲ್ಲಿ ಯಾವ ಆಟಗಾರ ಆಟಿಟ್ಯೂಡ್ ಅಥವಾ ಮನೋಭಾವ ನಿಮಗೆ ಬೆಸ್ಟ್ ಅನಿಸುತ್ತದೆ ಎಂದು ಕೇಳಿದ್ದರು. ಅದಕ್ಕೆ ಪ್ರತಿಯಾಗಿ, "ನಾನು ವಿರಾಟ್ ಕೊಹ್ಲಿಯ ಮನೋಭಾವವನ್ನು ತುಂಬಾ ಇಷ್ಟಪಡುತ್ತೇನೆ. ಆದರೆ, ಆತ ತುಂಬಾ ಜಗಳವಾಡುತ್ತಾನೆ' ಎಂದು ಹೇಳಿದ್ದಾರೆ. ಟೀಂ ಇಂಡಿಯಾ ಸೀಮಿತ ಓವರ್ ಗಳ ತಂಡಕ್ಕೆ ನಾಯಕತ್ವ ಬದಲಾವಣಣೆ ಮಾಡುವ ವಿಚಾರದಲ್ಲಿ ಸೌರವ್ ಗಂಗೂಲಿ ಅವರ ಹೇಳಿಕೆಗೆ ತದ್ವಿರುದ್ಧ ಹೇಳಿಕೆಯನ್ನು ವಿರಾಟ್ ಕೊಹ್ಲಿ ನೀಡಿದ್ದರಿಂದ ಕ್ರಿಕೆಟ್ ಅಭಿಮಾನಿಗಳು ಕೂಡ ಅಚ್ಚರಿ ವ್ಯಕ್ತಪಡಿಸಿದ್ದರು.

ದಕ್ಷಿಣ ಆಫ್ರಿಕಾ (South Africa) ಪ್ರವಾಸ ಕೈಗೊಳ್ಳುವ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ವಿರಾಟ್ ಕೊಹ್ಲಿ, ಟಿ20 (T20) ಮಾದರಿಯಲ್ಲಿ ನಾಯಕತ್ವವನ್ನು (Captaincy) ತೊರೆಯದೇ ಇರುವಂತೆ ಯಾರೊಬ್ಬರೂ ನನಗೆ ಸಲಹೆ ನೀಡಿರಲಿಲ್ಲ ಎಂದು ಹೇಳಿದ್ದರು. ಆದರೆ, ವಿರಾಟ್ ಕೊಹ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ಒಂದು ದಿನ ಮುನ್ನ ಸ್ವತಃ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಟಿ20 ಮಾದರಿಯಲ್ಲಿ ವಿರಾಟ್ ಕೊಹ್ಲಿಗೆ ನಾಯಕ ಸ್ಥಾನವನ್ನು ತೊರೆಯದೇ ಇರುವಂತೆ ವೈಯಕ್ತಿಕವಾಗಿ ಸಲಹೆ ನೀಡಿದ್ದೇ ಎಂದು ಸಂದರ್ಶನದಲ್ಲಿ ಹೇಳಿದ್ದರು.

Kohli vs BCCI: ವಿರಾಟ್ ಕೊಹ್ಲಿ ಹೇಳಿಕೆ ಕುರಿತು ಮೌನ ಮುರಿದ ಸೌರವ್ ಗಂಗೂಲಿ..!
ಇದೇ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟೀಂ ಇಂಡಿಯಾ ಟೆಸ್ಟ್ ಕ್ಯಾಪ್ಟನ್, ತಮ್ಮ ಹಾಗೂ ರೋಹಿತ್ ಶರ್ಮ (Rohit Sharma) ನಡುವೆ ಭಿನ್ನಾಭಿಪ್ರಾಯ ಇರುವ ವದಂತಿಯನ್ನು ತಳ್ಳಿ ಹಾಕಿದರು. ಕಳೆದ ಎರಡು ವರ್ಷಗಳಿಂದಲೂ ಸೀಮಿತ ಓವರ್ ಗಳ ತಂಡದಲ್ಲಿ ರೋಹಿತ್ ಶರ್ಮ ಅವರೇ ಹೆಚ್ಚಾಗಿ ಜವಾಬ್ದಾರಿ ತೋರುತ್ತಿದ್ದರು ಎಂದು ಕೊಹ್ಲಿ, ಅಭಿಮಾನಿಗಳು ಬೇರೆ ವಿಚಾರಗಳತ್ತ ಗಮನ ನೀಡಬೇಕು ಎಂದಿದ್ದರು. 

Virat Kohli Press Conference: ಬಿಸಿಸಿಐ ಬಣ್ಣ ಬಯಲು ಮಾಡಿದ ಕಿಂಗ್ ಕೊಹ್ಲಿ..!
ವಿರಾಟ್ ಕೊಹ್ಲಿ ಸುದ್ದಿಗೋಷ್ಠಿಯ ವಿಚಾರಗಳಿಗೆ ಸಂಬಂಧಪಟ್ಟ ಪ್ರಶ್ನೆಗಳಿಗೆ ಮಾತನಾಡಲು ನಿರಾಕರಿಸಿದ ಸೌರವ್ ಗಂಗೂಲಿ, ಬಿಸಿಸಿಐ (BCCI) ಈ ವಿಚಾರವನ್ನು ಸಂಭಾಳಿಸುತ್ತದೆ ಎಂದು ಹೇಳಿದರು. ಕೊಹ್ಲಿ ನೇತೃತ್ವದ ಭಾರತ ಟೆಸ್ಟ್ ತಂಡ ಪ್ರಸ್ತುತ ದಕ್ಷಿಣ ಆಫ್ರಿಕಾದಲ್ಲಿದ್ದು ಡಿಸೆಂಬರ್ 26 ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ತಯಾರಿ ನಡೆಸುತ್ತಿದೆ.

ಹೆಂಡ್ತಿ ಮತ್ತು ಗರ್ಲ್ ಫ್ರೆಂಡ್ ಮಾತ್ರವೇ ಸ್ಟ್ರೆಸ್ ನೀಡ್ತಾರೆ
ಜೀವನದಲ್ಲಿ ಒತ್ತಡವನ್ನು ಮ್ಯಾನೇಜ್ ಮಾಡುವುದು ಹೇಗೆ ಎಂದು ಇದೇ ಸಮಯದಲ್ಲಿ ಸೌರವ್ ಗಂಗೂಲಿಗೆ ಕೇಳಲಾಯಿತು. ಇದೇ ವೇಳೆ ತಮಾಷೆಯ ಉತ್ತರ ನೀಡಿದ ಗಂಗೂಲಿ, ಜೀವನದಲ್ಲಿ ಒತ್ತಡ ಅನ್ನೋದೇ ಇಲ್ಲ. ಕೇವಲ ಹೆಂಡತಿ ಹಾಗೂ ಗರ್ಲ್ ಫ್ರೆಂಡ್ ಮಾತ್ರವೇ ಜೀವನದಲ್ಲಿ ಒತ್ತಡ ನೀಡ್ತಾರೆ ಎಂದು ಹೇಳಿದರು.

Follow Us:
Download App:
  • android
  • ios