ಬೆಂಗ​ಳೂ​ರು(ಅ.31): ಬಿಸಿಸಿಐ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ ಸೌರವ್ ಗಂಗೂಲಿ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ರಾಹುಲ್ ದ್ರಾವಿಡ್ ಜೊತೆ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಬುದವಾರ(ಅ.30) ಬೆಂಗಳೂರಿಗೆ ಆಗಮಿಸಿದ ಸೌರವ್ ಗಂಗೂಲಿ ನೇರವಾಗಿ NCA ತೆರಳಿ ಸತತ 4 ಗಂಟೆ ಕಾಲ ಚರ್ಚೆ ನಡೆಸಿದರು. ದ್ರಾವಿಡ್ ಜೊತೆಗಿನ ಚರ್ಚೆ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ಪರೀಶಿಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬೆಂಗ್ಳೂರಲ್ಲಿ ಗಂಗೂಲಿ-ದ್ರಾವಿಡ್ ಸುದೀರ್ಘ ಚರ್ಚೆ; NCAಗೆ ಹೊಸ ರೂಪ!

ಚಿನ್ನ​ಸ್ವಾಮಿ ಕ್ರೀಡಾಂಗಣಕ್ಕೆ ಬುಧ​ವಾ​ರ ಭೇಟಿ ನೀಡಿದ್ದ ಬಿಸಿ​ಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಇಲ್ಲಿನ ಸಬ್‌-ಏರ್‌ ವ್ಯವಸ್ಥೆ ಸೇರಿ​ದಂತೆ ಹಲವು ಆಧು​ನಿಕ ತಂತ್ರಜ್ಞಾನಗಳ ವೀಕ್ಷಣೆ ಮಾಡಿ​ದರು. ಸಬ್‌-ಏರ್‌ ವ್ಯವಸ್ಥೆ ಬಗ್ಗೆ ಗಂಗೂಲಿ ಮೆಚ್ಚುಗೆಯ ಮಾತು​ಗ​ಳ​ನ್ನಾ​ಡಿ​ದರು ಎಂದು ಕರ್ನಾ​ಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆ​ಎಸ್‌ಸಿಎ) ವಕ್ತಾಯ ವಿನಯ್‌ ಮೃತ್ಯುಂಜಯ ತಿಳಿ​ಸಿ​ದರು.

ಇದನ್ನೂ ಓದಿ: ದಾದಾ ಪ್ರಸ್ತಾವನೆಗೆ ಬಾಂಗ್ಲಾ ಸಮ್ಮತಿ; ಭಾರತದಲ್ಲಿ ಮೊಟ್ಟ ಮೊದಲ ಡೇ & ನೈಟ್ ಟೆಸ್ಟ್!

ರಾಜ್ಯ ಕ್ರಿಕೆಟ್ ಸಂಸ್ಥೆಯ ವಿನೂತನ ಆಲೋಚನೆಗಳನ್ನು ಗಂಗೂಲಿ ಶ್ಲಾಘಿಸಿದ್ದಾರೆ.  ಇತರ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅನುಸರಿಸಿದ ಮಾದರಿ ಅಳವಡಿಸುವ ಕುರಿತು ಚಿಂತಿಸಲಾಗುವುದು ಎಂದು ಗಂಗೂಲಿ ಹೇಳಿದರು. 

NCA ಭೇಟಿ ಬಳಿಕ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ನೂತನ ಪದಾಧಿಕಾರಿಗಳು ಸೌರವ್ ಗಂಗೂಲಿಯನ್ನು ಸನ್ಮಾನಿಸಿದರು. ಕೆಎಸ್‌ಸಿಎ ಮಾಜಿ ಕಾರ‍್ಯ​ದರ್ಶಿ, ಹಾಲಿ ಐಪಿ​ಎಲ್‌ ಅಧ್ಯಕ್ಷ ಬ್ರಿಜೇಶ್‌ ಪಟೇಲ್‌ ಉಪ​ಸ್ಥಿತರಿದ್ದರು.