Asianet Suvarna News Asianet Suvarna News

ಆಫ್ಘನ್‌ ವಿರುದ್ಧ ಸರಣಿಗೆ ವಿರಾಟ್ ಕೊಹ್ಲಿ, ರೋಹಿತ್‌ ಶರ್ಮಾ ಇಲ್ಲ?

ತವರಿನಲ್ಲಿ ಆಫ್ಘಾನಿಸ್ತಾನ ಎದುರಿನ ಸರಣಿಗೆ ಸಿದ್ದತೆ
ರೋಹಿತ್, ವಿರಾಟ್ ಸೇರಿ ಹಿರಿಯ ಆಟಗಾರರಿಗೆ ರೆಸ್ಟ್‌?
ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಯುವ ತಂಡ ಕಣಕ್ಕೆ

BCCI Likely to Rest Virat Kohli Rohit Sharma and Other Seniors For Proposed Afghanistan Series kvn
Author
First Published May 27, 2023, 10:10 AM IST

ನವದೆಹಲಿ(ಮೇ.27): ಮುಂಬರುವ ಜೂನ್ 20ರಿಂದ 30ರ ವರೆಗೂ ತವರಿನಲ್ಲಿ ಆಫ್ಘಾನಿಸ್ತಾನ ವಿರುದ್ಧ ನಡೆಯಲಿರುವ ಸೀಮಿತ ಓವರ್‌ ಕ್ರಿಕೆಟ್‌ ಸರಣಿಗೆ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಸೇರಿ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕೆಲ ದಿನಗಳ ಹಿಂದೆ ಸರಣಿಯನ್ನೇ ರದ್ದುಗೊಳಿಸಲು ಬಿಸಿಸಿಐ ಚಿಂತಿಸುತ್ತಿದೆ ಎನ್ನುವ ಸುದ್ದಿ ಹರಿದಾಡಿತ್ತು. ಆದರೆ ಬಿಸಿಸಿಐ ಸರಣಿ ರದ್ದುಪಡಿಸುವ ಬದಲು ಹಾರ್ದಿಕ್‌ ಪಾಂಡ್ಯ ನೇತೃತ್ವದಲ್ಲಿ ಯುವ ಆಟಗಾರರನ್ನು ಒಳಗೊಂಡ ತಂಡವೊಂದನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ ಎನ್ನಲಾಗಿದೆ. 

ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಆಡುವ ಬಹುತೇಕ ಆಟಗಾರರು ಈ ಸರಣಿಯಲ್ಲಿ ಆಡುವುದಿಲ್ಲ ಎಂದು ಹೇಳಲಾಗುತ್ತಿದೆ. 3 ಪಂದ್ಯಗಳ ಏಕದಿನ ಅಥವಾ ಟಿ20 ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ, ಐಪಿಎಲ್‌ ಮುಗಿದ ಮೇಲೆ ಘೋಷಿಸುವ ನಿರೀಕ್ಷೆ ಇದೆ.

ಐಪಿಎಲ್‌ ಫೈನಲ್‌ಗೆ ಕ್ಷಣಗಣನೆ: 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ನಿರ್ಣಾಯಕಘಟ್ಟ ತಲುಪಿದ್ದು, ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಎದುರು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ 62 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಸತತ ಎರಡನೇ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇನ್ನು ಮೇ 28ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ ಪ್ರಶಸ್ತಿಗಾಗಿ ಚೆನ್ನೈ ಸೂಪರ್ ಕಿಂಗ್ಸ್‌ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಕಾದಾಡಲಿವೆ. ಎಂ ಎಸ್ ಧೋನಿ ನೇತೃತ್ವದ ಸಿಎಸ್‌ಕೆ ತಂಡವು 5ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಇನ್ನೊಂದೆಡೆ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್‌ ಸತತ ಎರಡನೇ ಬಾರಿ ಟ್ರೋಫಿಗೆ ಮುತ್ತಿಕ್ಕಲು ಎದುರು ನೋಡುತ್ತಿದೆ.

ಭಾರತ ತಂಡದ ನೂತನ ಅಭ್ಯಾಸ ಜೆರ್ಸಿ ಅನಾವರಣ

ಲಂಡ​ನ್‌: ಅಡಿ​ಡಾಸ್‌ ಸಂಸ್ಥೆಯ ಪ್ರಾಯೋ​ಜ​ಕತ್ವ ಹೊಂದಿ​ರುವ ಭಾರತೀಯ ಕ್ರಿಕೆಟ್‌ ತಂಡದ ನೂತನ ಅಭ್ಯಾಸ ಜೆರ್ಸಿ ಅನಾವರಣಗೊಳಿ​ಸ​ಲಾ​ಗಿದೆ. ಇತ್ತೀಚೆಗಷ್ಟೇ ಅಡಿಡಾಸ್‌ ಸಂಸ್ಥೆಯೊಂದಿಗೆ ಬಿಸಿ​ಸಿಐ 5 ವರ್ಷ​ಗಳ ಅವ​ಧಿಗೆ ಒಪ್ಪಂದ ಮಾಡಿ​ಕೊಂಡಿತ್ತು. ಸದ್ಯ ವಿಶ್ವ ಟೆಸ್ಟ್‌ ಚಾಂಪಿ​ಯ​ನ್‌​ಶಿಪ್‌ ಫೈನಲ್‌ ಆಡಲು ಇಂಗ್ಲೆಂಡ್‌ಗೆ ತೆರ​ಳಿ​ರುವ ಭಾರ​ತೀಯ ಆಟ​ಗಾ​ರರು ಹಾಗೂ ಕೋಚ್‌​ಗ​ಳು ಮೈದಾ​ನ​ದಲ್ಲಿ ನೂತನ ಜೆರ್ಸಿಯೊಂದಿಗೆ ಕಾಣಿ​ಸಿ​ಕೊಂಡರು. ಫೈನಲ್‌ ಪಂದ್ಯವನ್ನು ಭಾರತ ತಂಡ ಅಡಿ​ಡಾಸ್‌ ಸಂಸ್ಥೆಯ ಹೊಸ ಜೆರ್ಸಿ ತೊಟ್ಟು ಆಡ​ಲಿದೆ.

IPL 2023: ಫೈನಲ್‌ಗೆ ಗುಜರಾತ್‌ ಟೈಟಾನ್ಸ್‌, ಮನೆಗೆ ನಡೆದ ಐದು ಬಾರಿಯ ಚಾಂಪಿಯನ್ಸ್‌!

ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯವು ಜೂನ್ 07ರಿಂದ ಆರಂಭವಾಗಲಿದ್ದು, ಚಾಂಪಿಯನ್‌ ಪಟ್ಟಕ್ಕಾಗಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಡಲಿವೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಲಂಡನ್‌ನ ದಿ ಓವಲ್ ಮೈದಾನ ಆತಿಥ್ಯವನ್ನು ವಹಿಸಿದೆ. ಕಳೆದ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡವು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಐಪಿಎಲ್‌ನಲ್ಲಿ 200 ಸಿಕ್ಸರ್‌ ನೀಡಿದ ಮೊದಲಿಗ ಚಾವ್ಲಾ!

ಅಹಮದಾಬಾದ್‌: ಐಪಿಎಲ್‌ ಇತಿಹಾಸದಲ್ಲೇ 200 ಸಿಕ್ಸರ್‌ಗಳನ್ನು ಚಚ್ಚಿಸಿಕೊಂಡ ಮೊದಲ ಬೌಲರ್‌ ಎನ್ನುವ ಅಪಖ್ಯಾತಿಗೆ ಲೆಗ ಸ್ಪಿನ್ನರ್‌ ಪೀಯೂಷ್‌ ಚಾವ್ಲಾ ಗುರಿಯಾಗಿದ್ದಾರೆ. ಗುಜರಾತ್‌ ಟೈಟಾನ್ಸ್‌ ವಿರುದ್ಧ ಶುಕ್ರವಾರದ ಪಂದ್ಯದಲ್ಲಿ ಶುಭ್‌ಮನ್‌ ಗಿಲ್‌ 13ನೇ ಓವರ್‌ನ ಮೊದಲ ಎಸೆತದಲ್ಲಿ ಬಾರಿಸಿದ ಸಿಕ್ಸರ್‌, ಚಾವ್ಲಾ ಬಿಟ್ಟುಕೊಟ್ಟ200ನೇ ಸಿಕ್ಸರ್‌ ಎನಿಸಿತು. 

ಸದ್ಯ ಅವರು 201 ಸಿಕ್ಸರ್‌ಗಳನ್ನು ಚಚ್ಚಿಸಿಕೊಂಡಿದ್ದಾರೆ. 194 ಸಿಕ್ಸರ್‌ ಬಿಟ್ಟುಕೊಟ್ಟಿರುವ ಯಜುವೇಂದ್ರ ಚಹಲ್‌ 2ನೇ ಸ್ಥಾನದಲ್ಲಿದ್ದು, ರವೀಂದ್ರ ಜಡೇಜಾ (192), ಆರ್‌.ಅಶ್ವಿನ್‌(184), ಅಮಿತ್‌ ಮಿಶ್ರಾ (181) ಕ್ರಮವಾಗಿ 3,4,5ನೇ ಸ್ಥಾನಗಳಲ್ಲಿದ್ದಾರೆ.

Follow Us:
Download App:
  • android
  • ios