IPL 2023: ಫೈನಲ್‌ಗೆ ಗುಜರಾತ್ ಟೈಟಾನ್ಸ್, ಮನೆಗೆ ನಡೆದ ಐದು ಬಾರಿಯ ಚಾಂಪಿಯನ್ಸ್!
ತಿಲಕ್ ವರ್ಮ, ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ಅಪಾಯ ಎದುರಿಸಿದ್ದ ಗುಜರಾತ್ ಟೈಟಾನ್ಸ್, ಕೊನೆಗೂ ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡವನ್ನು ಮನೆಗೆ ಕಳುಹಿಸಲು ಯಶಸ್ವಿಯಾಗಿದೆ.
ಅಹಮದಾಬಾದ್ (ಮೇ.26): ಸೂರ್ಯಕುಮಾರ್ ಯಾದವ್, ಕ್ಯಾಮರೂನ್ ಗ್ರೀನ್ ಹಾಗೂ ತಿಲಕ್ ವರ್ಮ ಅವರ ಸ್ಪೋಟಕ ಬ್ಯಾಟಿಂಗ್‌ನಿಂದ ಗೆಲುವಿನ ಭರವಸೆ ಹೊಂದಿದ್ದ ಐದು ಬಾರಿಯ ಮುಂಬೈ ಇಂಡಿಯನ್ಸ್ ತಂಡಕ್ಕೆ ನಿರಾಸೆಯಾಗಿದೆ. ಪ್ರಮುಖ ಸಂದರ್ಭದಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಬೆನ್ನೆಲುಬು ಮುರಿದ ಗುಜರಾತ್ ಟೈಟಾನ್ಸ್ ತಂಡ 2023ರ ಐಪಿಎಲ್‌ನ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 62 ರನ್‌ಗಳಿಂದ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಇದೇ ಮೈದಾನದಲ್ಲಿ ಎದುರಿಸಲಿದೆ. ಗುಜರಾತ್ ಟೈಟಾನ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಮೋಹಿತ್ ವರ್ಮ 4 ವಿಕೆಟ್ ಉರುಳಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಗುಜರಾತ್ ಟೈಟಾನ್ಸ್ ತಂಡ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಸೋಲು ಕಂಡಿತ್ತು.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡ ಶುಭ್‌ಮಾನ್ ಗುಲ್ ಬಾರಿಸಿದ ಸ್ಪೋಟಕ್ ಶತಕದ ನೆರವಿನಿಂದ 3 ವಿಕೆಟ್‌ಗೆ 233 ರನ್‌ಗಳ ಬೃಹತ್ ಮೊತ್ತ ಬಾರಿಸಿತ್ತು. ಪ್ರತಿಯಾಗಿ ಮುಂಬೈ ಇಂಡಿಯನ್ಸ್ ತಂಡ 18.2 ಓವರ್‌ಗಳಲ್ಲಿ 171 ರನ್‌ಗೆ ಆಲೌಟ್ ಆಗುವ ಮೂಲಕ ಸೋಲು ಕಂಡಿತು. ಮುಂಬೈ ಪರವಾಗಿ ಸ್ಪೋಟಕ ಬ್ಯಾಟಿಂಗ್ ನಡೆಸಿದ ಕ್ಯಾಮರೂನ್ ಗ್ರೀನ್ 20 ಎಸೆತಗಳಲ್ಲಿ ತಲಾ 2 ಸಿಕ್ಸರ್ ಹಾಗೂ ಬೌಂಡರಿಗಳಿದ್ದ 30 ರನ್ ಬಾರಿಸಿ ಔಟಾದರೆ, ತಿಲಕ್ ವರ್ಮ ಕೇವಲ 14 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಆಕರ್ಷಕ ಸಿಕ್ಸರ್‌ಗಳೊಂದಿಗೆ 300ಕ್ಕೂ ಅಧಿಕ ಸ್ಟ್ರೈಕ್ ರೇಟ್‌ನಲ್ಲಿ 43 ರನ್ ಸಿಡಿಸಿದರು. ಅದರೊಂದಿಗೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ 38 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್‌ಗಳಿದ್ದ 61 ರನ್ ಬಾರಿಸಿದರು. ಈ ಮೂವರು ಆಡುವಾಗ ಮುಂಬೈ ತಂಡ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ, 15ನೇ ಓವರ್ ವೇಳೆಗೆ ಸೂರ್ಯಕುಮಾರ್ ಯಾದವ್ ಔಟಾದಾಗ ಮುಂಬೈ ಇಂಡಿಯನ್ಸ್ ತಂಡ ಸೋಲು ಕಾಣುವುದು ಖಚಿತವಾಗಿತ್ತು.
IPL 2023: ಗಿಲ್ ಮತ್ತೊಂದು ಸೆಂಚುರಿ, ಮುಂಬೈ ಇಂಡಿಯನ್ಸ್‌ಗೆ ಬೃಹತ್ ಗುರಿ!
ಗುಜರಾತ್ ಟೈಟಾನ್ಸ್ ಪರವಾಗಿ ಭರ್ಜರಿ ದಾಳಿ ಸಂಘಟಿಸಿದ ಮೋಹಿತ್ ವರ್ಮ ಕೇವಲ 10 ರನ್ ನೀಡಿ 5 ವಿಕೆಟ್ ಉರುಳಿಸಿದರು. ಇದರಲ್ಲಿ ಸೂರ್ಯಕುಮಾರ್ ಯಾದವ್ ಅವರ ಪ್ರಮುಖ ವಿಕೆಟ್ ಕೂಡ ಸೇರಿತ್ತು. ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಈ ಮೂವರು ಹೊರತುಪಡಿಸಿ ಉಳಿದ ಯಾರಿಂದಲೂ ಗಮನಾರ್ಹವಾದ ಕೊಡುಗೆ ಬರಲಿಲ್ಲ. ನಾಯಕ ರೋಹಿತ್ ಶರ್ಮ ಕೇವಲ 8 ರನ್ ಬಾರಿಸಿ ಔಟಾದರೆ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಆರಂಭಿಕ ಸ್ಥಾನದಲ್ಲಿ ಆಡಿದ್ದ ನೇಹಲ್ ವಧೇರ ಕೇವಲ 4 ರನ್ ಬಾರಿಸಿದರು.
IPL 2023 ರೋಚಕ ಗೆಲುವಿನೊಂದಿಗೆ ಫೈನಲ್ ಪ್ರವೇಶಿಸಿದ ಸಿಎಸ್‌ಕೆ, ಗುಜರಾತ್‌ಗೆ ಇನ್ನೂ ಇದೆ ಅವಕಾಶ!
ಇನ್ನಿಂಗ್ಸ್‌ನ 14ನೇ ಓವರ್‌ವರೆಗೂ ಒಂದೂ ಓವರ್ ಬೌಲಿಂಗ್ ಮಾಡದ ಮೋಹಿತ್ ಶರ್ಮ, ಆ ನಂತರದ ಎಸೆದ 14 ಎಸೆತಗಳಲ್ಲಿ ಕೇವಲ 10 ರನ್ ನೀಡಿ 5 ವಿಕೆಟ್ ಉರುಳಿಸಿದರು. ಅವರ ಸ್ಲೋವರ್ ಎಸೆತಗಳು ಗುಜರಾತ್ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದವು. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ತನ್ನ ಪ್ರಶಸ್ತಿ ಉಳಿಸಿಕೊಳ್ಳುವ ಸವಾಲು ಇರಲಿದೆ. ಇನ್ನೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 2021ರ ಬಳಿಕ ಮೊದಲ ಬಾರಿಗೆ ಹಾಗೂ ಒಟ್ಟಾರೆ ಐದನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಇರಾದೆಯಲ್ಲಿದೆ.