Asianet Suvarna News Asianet Suvarna News

ಕ್ರಿಕೆಟಿಗ ವೃದ್ಧಿಮಾನ್ ಸಹಾಗೆ ಬೆದರಿಕೆ: ಬಿಸಿಸಿಐನಿಂದ ಪತ್ರಕರ್ತನಿಗೆ ನಿಷೇಧ

  • ಸಂದರ್ಶನ ನೀಡದಕ್ಕೆ ಕ್ರಿಕೆಟಿಗನಿಗೆ ಬೆದರಿಕೆ
  • ಪತ್ರಕರ್ತನಿಗೆ ನಿಷೇಧ ಹೇರಿದ ಬಿಸಿಸಿಐ
  • ಪತ್ರಕರ್ತ ಬೋರಿಯಾ ಮಜುಂದಾರ್‌ಗೆ 2 ವರ್ಷ ನಿಷೇಧ
BCCI has banned journalist Boria Majumdar for 2 years over threatening wicketkeeper batter Wriddhiman Saha akb
Author
Bangalore, First Published May 4, 2022, 5:01 PM IST

ನವದೆಹಲಿ: ಭಾರತದ ವಿಕೆಟ್‌ಕೀಪರ್, ಬ್ಯಾಟರ್ ವೃದ್ಧಿಮಾನ್ ಸಹಾ ಅವರಿಗೆ  ಬೆದರಿಕೆ ಹಾಗೂ ಬೆದರಿಸುವಂತಹ ಸಂದೇಶ ಕಳುಹಿಸಿದ ಆರೋಪದಡಿ  ಪತ್ರಕರ್ತ ಬೋರಿಯಾ ಮಜುಂದಾರ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 2 ವರ್ಷಗಳ ಕಾಲ ನಿಷೇಧ ಹೇರಿದೆ. ಬಿಸಿಸಿಐ ಹಂಗಾಮಿ ಸಿಇಒ ಹೇಮಾಂಗ್ ಅಮೀನ್ (Hemang Amin) ಅವರು ಈ ಪತ್ರಕರ್ತನಿಗೆ ನಿಷೇಧ ಹೇರಿರುವುದಾಗಿ ಎಲ್ಲಾ ರಾಜ್ಯ ಘಟಕಗಳಿಗೆ ಮಾಹಿತಿ ನೀಡಿದ್ದಾರೆ.

ಬೆದರಿಕೆ ಬಗ್ಗೆ ಕ್ರಿಕೆಟಿಗ ವೃದ್ಧಿಮಾನ್‌ ಸಹಾ ಅವರ ಆರೋಪ ಕೇಳಿ ಬಂದ ಹಿನ್ನೆಲೆ ಭಾರತೀಯ ಕ್ರಿಕೆಟ್ ಮಂಡಳಿಯು 3 ಸದಸ್ಯರ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯಲ್ಲಿ ಉಪಾಧ್ಯಕ್ಷ ರಾಜೀವ್ ಶುಕ್ಲಾ (Rajeev Shukla), ಖಜಾಂಚಿ ಅರುಣ್ ಧುಮಾಲ್ (Arun Dhumal) ಮತ್ತು ಕೌನ್ಸಿಲರ್ ಪ್ರಭತೇಜ್ ಸಿಂಗ್ ಭಾಟಿಯಾ (Prabhtej Singh Bhatia) ಅವರಿದ್ದ ಸಮಿತಿ ಈ ನಿರ್ಧಾರ ಕೈಗೊಂಡಿದೆ. ಸಂದರ್ಶನಕ್ಕೆ ಬರಲು ಒಪ್ಪದ ಕಾರಣಕ್ಕೆ ಪತ್ರಕರ್ತ ತನಗೆ ಬೆದರಿಕೆ ವೊಡ್ಡಿದ್ದ ಎಂದು ವೃದ್ಧಿಮಾನ್ ಸಹಾ ಹೇಳಿದ್ದರು. ಇದಾದ ಬಳಿಕ ರಚನೆಗೊಂಡ ಸಮಿತಿ ವೃದ್ಧಿಮಾನ್ ಸಹಾ ಹಾಗೂ ಪತ್ರಕರ್ತ ಬೋರಿಯಾ ಮಜುಂದಾರ್ ಈ ಇಬ್ಬರನ್ನು ವಿಚಾರಣೆ ನಡೆಸಿತು. ನಂತರ 3-ಸದಸ್ಯ ಸಮಿತಿಯು BCCI ಅಪೆಕ್ಸ್ ಕೌನ್ಸಿಲ್‌ ಈ ನಿಷೇಧ ಹೇರಿದೆ.

 

ತ್ರಿ ಸದಸ್ಯ ಸಮಿತಿಯು ಎರಡೂ ಕಡೆಯ ಹೇಳಿಕೆಗಳನ್ನು ದಾಖಲಿಸಿದ ನಂತರ ಮಜುಂದಾರ್ ಅವರ ವರ್ತನೆ ನಿಜವಾಗಿಯೂ ಬೆದರಿಕೆ ಮತ್ತು ಬೆದರಿಕೆಯ ಸ್ವರೂಪದಲ್ಲಿದೆ ಎಂದು ತೀರ್ಮಾನಿಸಿತು. 3 ಸದಸ್ಯರ ಸಮಿತಿಯ ಈ ಶಿಫಾರಸನ್ನು ಬಿಸಿಸಿಐ ಅಪೆಕ್ಸ್ ಕೌನ್ಸಿಲ್ (BCCI Apex Council) ಒಪ್ಪಿಕೊಂಡಿದೆ.

ಆಂತರಿಕ ಪತ್ರದ ಪ್ರಕಾರ ಬೋರಿಯಾ ಮಜುಂದಾರ್‌ಗೆ (Boria Majumdar) ಬಿಸಿಸಿಐ ವಿಧಿಸಿದ ನಿರ್ಬಂಧಗಳು ಹೀಗಿವೆ. 

  • ಭಾರತದ ಯಾವುದೇ ಕ್ರಿಕೆಟ್ ಪಂದ್ಯಗಳಲ್ಲಿ (ದೇಶೀಯ ಮತ್ತು ಅಂತರಾಷ್ಟ್ರೀಯ) ಪತ್ರಿಕಾ ಸದಸ್ಯರಾಗಿ ಮಾನ್ಯತೆ ಪಡೆಯಲು 2 ವರ್ಷಗಳ ನಿಷೇಧ.
  • ಭಾರತದಲ್ಲಿ ಯಾವುದೇ ನೋಂದಾಯಿತ ಆಟಗಾರರೊಂದಿಗೆ ಯಾವುದೇ ಸಂದರ್ಶನವನ್ನು ಪಡೆಯಲು 2 ವರ್ಷಗಳ ನಿಷೇಧ.
  • ಬಿಸಿಸಿಐ ಮತ್ತು ಸದಸ್ಯರ ಸಂಘದ ಒಡೆತನದ ಕ್ರಿಕೆಟ್ ಸೌಲಭ್ಯಗಳನ್ನು ಪ್ರವೇಶಿಸಲು 2 ವರ್ಷಗಳ ನಿಷೇಧ. 
  • ಪತ್ರಕರ್ತನ ಮೇಲಿನ ಈ ನಿರ್ಬಂಧಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಬಿಸಿಸಿಐ ತನ್ನ ರಾಜ್ಯ ಘಟಕಗಳನ್ನು ಒತ್ತಾಯಿಸಿದೆ.

ಖಲೀಲ್ ಅಹ್ಮದ್ ಹಿಂದೆ ಬಿಸಿಸಿಐ ಬಿದ್ದಿರೋದ್ಯಾಕೆ..?

ಗಮನಾರ್ಹವಾಗಿ ಫೆಬ್ರವರಿಯಲ್ಲಿ ಸಹಾ ಅವರು ಬೆದರಿಕೆ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ ಪತ್ರಕರ್ತನ ಹೆಸರು ಬಹಿರಂಗಪಡಿಸಿರಲಿಲ್ಲ. ತಾನು ಸಂದರ್ಶನ ನೀಡಲು ನಿರಾಕರಿಸಿದ ನಂತರ ಪತ್ರಕರ್ತ ನನ್ನ ಮೇಲೆ ಆಕ್ರಮಣಕಾರಿ ಧ್ವನಿಯಲ್ಲಿ ಮಾತನಾಡಿದ್ದಾನೆ ಎಂದು ಸಹಾ ಆರೋಪಿಸಿದ್ದಾರೆ. 'ಭಾರತೀಯ ಕ್ರಿಕೆಟ್‌ಗೆ ನನ್ನ ಎಲ್ಲಾ ಕೊಡುಗೆಗಳ ನಂತರ 'ಗೌರವಾನ್ವಿತ' ಎಂದು ಕರೆಯಲ್ಪಡುವ ಪತ್ರಕರ್ತನಿಂದ ನನಗೆ ಸಿಕ್ಕಿದು ಇದು ಪತ್ರಿಕೋದ್ಯಮ ಎಲ್ಲಿಗೆ ಹೋಗಿದೆ' ಎಂದು ಸಹಾ ಟ್ವೀಟ್ ಮಾಡಿದ್ದರು.

20 ಎಸೆತಗಳಲ್ಲಿ ಶತಕ ಬಾರಿಸಿ ಹೊಸ ದಾಖಲೆ ನಿರ್ಮಿಸಿದ ವೃದ್ಧಿಮಾನ್ ಸಹಾ
ಒಂದು ಕಡೆಯಿಂದ ಮಾತ್ರ ಬಂದ ಸಂದೇಶದಲ್ಲಿ ತನ್ನ ಕರೆಗಳಿಗೆ ಪ್ರತಿಕ್ರಿಯಿಸದಿರುವುದು ತನಗೆ ನೋವಾಗಿದೆ ಮತ್ತು ಈ ಅವಮಾನಗಳನ್ನು ತಾನು ಹಗುರವಾಗಿ ತೆಗೆದುಕೊಳ್ಳುವುದಿಲ್ಲ ಎಂದು  ಪತ್ರಕರ್ತ ಸಹಾಗೆ ಕಳುಹಿಸಿರುವ ಸಂದೇಶದಲ್ಲಿದೆ. IPL 2022 ರ ಆರಂಭದ ಮೊದಲು ಶ್ರೀಲಂಕಾ ವಿರುದ್ಧದ 2-ಟೆಸ್ಟ್ ಸರಣಿಗಾಗಿ ಟೆಸ್ಟ್ ತಂಡದಿಂದ ಕೈಬಿಟ್ಟ ನಂತರ ವೃದ್ಧಿಮಾನ್‌ ಸಹಾ ಸಾಮಾಜಿಕ ಮಾಧ್ಯಮದಲ್ಲಿ ಈ ಬೆದರಿಕೆಯ ಸ್ಕ್ರಿನ್‌ಶಾಟ್‌ಗಳನ್ನು ಪೋಸ್ಟ್ ಮಾಡಿದ್ದರು. 
 

Follow Us:
Download App:
  • android
  • ios